July 23, 2026
Mumbai News Kannada
ಪ್ರಕಟಣೆ

ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಭಾಯಂದರ್ ಪೂರ್ವ : ಎ. 12ರಂದು ವಾರ್ಷಿಕ ಶ್ರೀ ಮಹಾದೇವಿ ಮಹಾಪೂಜೆ







ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ,ಭಾಯಂದರ್ ಇದರ ವತಿಯಿಂದ ವಾರ್ಷಿಕ ‘ಶ್ರೀ ಮಹಾದೇವಿ ಮಹಾಪೂಜೆ’ಯು ಏಪ್ರಿಲ್ 12, 2026ರ ಭಾನುವಾರದಂದು ಭಾಯಂದರ್ ಪೂರ್ವದ ಎಸ್.ವಿ. ರೋಡ್‌ನಲ್ಲಿರುವ ನವಘರ್ ಕ್ರಾಸ್ ಹತ್ತಿರದ ನ್ಯೂ ಕೃಷ್ಣ ಪ್ಯಾಲೇಸ್ ಕೊ. ಅಪ್. ಸೊಸೈಟಿಯ ತಳಮಹಡಿಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.

ಧರ್ಮ ಸೇವಕ ಹಾಗೂ ಪ್ರಧಾನ ಅರ್ಚಕರಾದ ಶೇಖರ್ ಎಸ್. ಶೆಟ್ಟಿ ಅವರ ಪವಿತ್ರ ಹಸ್ತಗಳಿಂದ ಈ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಅಂದು ಬೆಳಿಗ್ಗೆ 6:00 ಗಂಟೆಯಿಂದ ವನದುರ್ಗಾ ಹೋಮ ಪ್ರಾರಂಭವಾಗಲಿದ್ದು, 9:30ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಬಳಿಕ ದೇವಿ ದರ್ಶನ, ಮಹಾಪೂಜೆ ನಡೆದು,ಮಧ್ಯಾಹ್ನ 1:00ರಿಂದ 3:00 ಗಂಟೆಯವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ದಿವಂಗತ ಸುಂದರಿ ಶೆಟ್ಟಿ ಅವರ ಮಕ್ಕಳು, ಕುಟುಂಬಸ್ಥರು ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು ಈ ಪುಣ್ಯ ಕಾರ್ಯದಲ್ಲಿ ಸರ್ವ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಆಮಂತ್ರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9867792911 ಅನ್ನು ಸಂಪರ್ಕಿಸಬಹುದಾಗಿದೆ.



Related posts

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎ. 4: ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರಿಂದ ‘ಧೀಮಂತ ಧರ್ಮಪಾಲ’ ಆತ್ಮಕಥನ ಕೃತಿ ಲೋಕಾರ್ಪಣೆ

Mumbai News Desk

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..

Mumbai News Desk

ಜ. 30 ರಿಂದ ಫೆ.1ರ ತನಕ ಜರ್ಮನಿನಲ್ಲಿ ಓಪನ್ ವರ್ಲ್ಡ್ ವೇಟ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಅ. 8ಕ್ಕೆ ಶ್ರೀ ದುರ್ಗಾ ಹೋಮ, ಶ್ರೀ ದೇವಿ ದರ್ಶನ

Mumbai News Desk