September 6, 2026
Mumbai News Kannada
ಮಹಾರಾಷ್ಟ್ರ

ಮಹಾರಾಷ್ಟ್ರ : ನಗರ ಸಂಸ್ಥೆಗಳ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಮಹಾಯುತಿ





ಮಹಾರಾಷ್ಟ್ರದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭಾರೀ ಗೆಲುವು ದಾಖಲಿಸಿದೆ. ಒಟ್ಟು 246 ನಗರ ಪಾಲಿಕೆ ಹಾಗೂ 42 ನಗರ ಪಂಚಾಯಿತಿಗಳು – ಒಟ್ಟು 288 ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, 214 ಸ್ಥಳೀಯ ಸಂಸ್ಥೆಗಳಲ್ಲಿ ಮಹಾಯುತಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಆಘಾಡಿ (MVA) ಮೈತ್ರಿಕೂಟವು ಕೇವಲ 52 ಸ್ಥಳೀಯ ಸಂಸ್ಥೆಗಳನ್ನು‌ ಗೆದ್ದಿದೆ. ಇನ್ನೂ, 22 ಸಂಸ್ಥೆಗಳ‌ ಫಲಿತಾಂಶ ಬಾಕಿ ಇದೆ.

ಒಟ್ಟು 288 ನಗರ ಸ್ಥಳೀಯ ಸಂಸ್ಥೆಗಳ 6,859 ಕ್ಷೇತ್ರಗಳಿಗೆ ಡಿಸೆಂಬರ್ 2 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಇಂದು (ಡಿ.21) ಎತ ಎಣಿಕೆ ನಡೆದಿದೆ. 6,859 ಸ್ಥಾನಗಳ ಪೈಕಿ 3,120 ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರ ಪಕ್ಷಗಳಾದ ಶಿವಸೇನೆ (ಶಿಂಧೆ ಬಣ) ಮತ್ತು ಎನ್​ಸಿಪಿ (ಅಜಿತ್ ಬಣ) ಕ್ರಮವಾಗಿ 600 ಮತ್ತು 200 ಸ್ಥಾನಗಳನ್ನು ಗೆದ್ದಿವೆ.

ಮಹಾ ವಿಕಾಸ್ ಅಘಾಡಿಯ ಭಾಗವಾಗಿರುವ ಶಿವಸೇನಾ (ಉದ್ಭವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್​ಸಿಪಿ (ಶರದ್ ಪವಾರ್ ಬಣ) ಕ್ರಮವಾಗಿ 145, 105 ಮತ್ತು 122 ಸ್ಥಾನಗಳಲ್ಲಿ ಗೆದ್ದಿವೆ.



Related posts

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ

Mumbai News Desk

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ

Mumbai News Desk

ಮಹಾರಾಷ್ಟ್ರದಲ್ಲಿ ಜೂನ್ 25ರಿಂದ ಮದ್ಯದ ಬೆಲೆ ಏರಿಕೆ

Mumbai News Desk

ಕಲಬೆರಕೆ ಮತ್ತು ಅಸ್ವಚ್ಛತೆಗೆ ಸಿಂಹಸ್ವಪ್ನ: ತುಕಾರಾಮ್ ಮುಂಢೆ ದಾಳಿಯಿಂದ ಬದಲಾದ ಮಹಾರಾಷ್ಟ್ರದ ಆಹಾರ ಕ್ಷೇತ್ರ

Mumbai News Desk

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ

Mumbai News Desk

ಮಹಾರಾಷ್ಟ್ರ ಮಂಡಳಿಯ ಎಚ್ಎಸ್ ಸಿ(HSC), ಎಸ್ ಎಸ್ ಸಿ (SSC),2026ರ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆ

Mumbai News Desk