September 6, 2026
Mumbai News Kannada
ಕ್ರೀಡೆ

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಥಾಣೆಯ ಆರೋಹಿ ಎಸ್ ಪೂಜಾರಿಗೆ ಚಿನ್ನ ಮತ್ತು ಕಂಚಿನ ಪದಕಗಳ ಸಾಧನೆ






ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ “SEIKO KAI” ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್-2026 ರಲ್ಲಿ ಥಾಣೆಯ ವಿದ್ಯಾರ್ಥಿನಿ ಆರೋಹಿ ಎ. ಪೂಜಾರಿ(ಖುಷಿ) ಅದ್ಭುತ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಜನವರಿ 18, 2026 ರಂದು ಥಾಣೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ – 2026ರಲ್ಲಿ ಥಾಣೆ ಪಶ್ಚಿಮ ನವೋದಯ ಇಂಗ್ಲಿಷ್ ಶಾಲೆಯನ್ನು ಪ್ರತಿನಿಧಿಸಿದ ಆರೋಹಿ ಪೂಜಾರಿ ಇವರು 11 ವರ್ಷದೊಳಗಿನ ವಯೋಮಿತಿಯ ವಿಭಾಗದಲ್ಲಿ ತಮ್ಮ ಅತ್ಯುತ್ತಮ ಕರಾಟೆ ಕೌಶಲಗಳನ್ನು ಪ್ರದರ್ಶಿಸಿದರು. ಇವರು ಕಠಿಣ ಸ್ಪರ್ಧೆಯ ನಡುವೆಯೂ ಒಂದು ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇವರು ಥಾಣೆ ಪಶ್ಚಿಮ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು ಮತ್ತು ಶ್ರೀಮತಿ ಆಶಾ ಪೂಜಾರಿ ಬಜಗೋಳಿ ದಂಪತಿಗಳ ಪುತ್ರಿ. ನವೋದಯ ಕನ್ನಡ ಸೇವಾ ಸಂಘದ ನವೋದಯ ಇಂಗ್ಲಿಷ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ.
ಆರೋಹಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚಾಮುಂಡೇಶ್ವರಿ ಕ್ಷೇತ್ರದ ಗಣ್ಯರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. “ಚಿಕ್ಕ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ,” ಎಂದು ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.



Related posts

ಜಪಾನ್ ಓಪನ್ 750 ಗೆದ್ದು ಇತಿಹಾಸ ಸೃಷ್ಟಿಸಿದ ಪಿವಿ ಸಿಂಧು: ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ

Mumbai News Desk

ವರ್ಲ್ಡ್ ಮಾಸ್ಟರ್ಸ್ ಸ್ಪೋರ್ಟ್ಸ್ ಚಾಂಪಿಯನ್‌ಪ್; ಶುಭಾ ಗುಜರನ್ ಇವರಿಗೆ ಎರಡು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕ

Mumbai News Desk

ಕುಲಾಲ ಸಂಘ ಮುಂಬಯಿ: ಕುಲಾಲ ಕ್ರೀಡೋತ್ಸವದ ಬಹುಮಾನ ವಿತರಣೆ

Mumbai News Desk

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ; ಬುಮ್ರಾ, ಶಮಿ ವಾಪಸ್‌.

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಮುಂಬೈ ಮ್ಯಾರಥಾನ್‌ನಲ್ಲಿ ವೈದ್ಯನ ‘ಗೋಲ್ಡನ್’ ಓಟ: ಆರ್ಥೋಪೆಡಿಕ್ ಸರ್ಜನ್ ಕಾರ್ತಿಕ್ ಕರ್ಕೇರಗೆ ಚಿನ್ನದ ಪದಕ

Mumbai News Desk