September 6, 2026
Mumbai News Kannada
ಸುದ್ದಿ

ಪ್ಯಾರಿಸ್ ಫ್ಯಾಶನ್ ವೇದಿಕೆಯಲ್ಲಿ ಮುಂಬೈಯ ಪ್ರಭಾ ಸುವರ್ಣ ಮಿಂಚಿನ ಸಂಚಲನ:





ವಿಶ್ವದ ಫ್ಯಾಶನ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ‘ಮೈಲಿಗಲ್ಲು ಗ್ಲೋಬಲ್ ಫ್ಯಾಶನ್ ಟೂರ್’ (Milestone Global Fashion Tour) ಇತ್ತೀಚೆಗೆ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಯಿತು. ಜನವರಿ 10ರಂದು ಲಂಡನ್‌ನ ಖ್ಯಾತ ಡಿಸೈನರ್ ಡಾ. ಬರೋ ಸ್ಯಾಂಚೆಜ್ ಅವರ ಅದ್ವಿತೀಯ ವಿನ್ಯಾಸದ ಉಡುಪುಗಳನ್ನು ತೊಟ್ಟು ಪ್ರಭಾ ಸುವರ್ಣ ಅವರು ರ್ಯಾಂಪ್ (Ramp)ಮೇಲೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದರು. ಪ್ರಭಾ ಅವರ ಆತ್ಮವಿಶ್ವಾಸದ ನಡಿಗೆ ಮತ್ತು ನೈಸರ್ಗಿಕ ಸೌಂದರ್ಯವು ಡಾ. ಸ್ಯಾಂಚೆಜ್ ಅವರ ಸಮಕಾಲೀನ ಸೃಜನಶೀಲತೆಗೆ ಹೊಸ ಕಳೆಯನ್ನು ನೀಡಿತು.
ಜಾಗತಿಕ ಮಟ್ಟದ ಪ್ರತಿಭೆಗಳಿಗೆ ಬಲಿಷ್ಠ ವೇದಿಕೆ ಕಲ್ಪಿಸುವ ಮೈಲಿಗಲ್ಲು ಸಂಸ್ಥೆಯ ಈ ಪ್ರಯತ್ನವು ಸೃಜನಶೀಲತೆ ಮತ್ತು ವೈವಿಧ್ಯತೆಯ ಸಂಗಮವಾಗಿತ್ತು. ವಿಶ್ವದ ಶ್ರೇಷ್ಠ ವಿನ್ಯಾಸಕರು ಮತ್ತು ಮಾಡೆಲ್‌ಗಳನ್ನು ಒಗ್ಗೂಡಿಸುವಲ್ಲಿ ಪ್ಯಾರಿಸ್ ಆವೃತ್ತಿಯು ಮತ್ತೊಮ್ಮೆ ಯಶಸ್ವಿಯಾಗಿದೆ. ಈ ಪ್ರದರ್ಶನವು ಕೇವಲ ಫ್ಯಾಶನ್ ಆಗಿರದೆ, ಅಂತರರಾಷ್ಟ್ರೀಯ ಮಟ್ಟದ ಕಲೆ ಮತ್ತು ಸಂಸ್ಕೃತಿಯ ಸಮ್ಮಿಶ್ರಣವಾಗಿ ಮೂಡಿಬಂದಿದೆ.

ಬಹುಮುಖ ಪ್ರತಿಭೆಯ ಪ್ರಭಾ ಸುವರ್ಣ ಅವರಿಗೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 2019 ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ವಾರ್ಷಿಕ ಚಲನ ಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ರಾಜ್ಯ ಚಲನ ಪ್ರಶಸ್ತಿ ನೀಡಿ ಗೌರವಿಸಿದರು.ಹಾಗೂ ಮೈಲ್ ಸ್ಟೋನ್ ಪೇಜೆಂಟ್ಸ್‌ನ ಆಯೋಜನೆಯಲ್ಲಿ ದುಬೈನಲ್ಲಿ “ಜಾಗತಿಕ ಮಹಿಳಾ ಸಮಾವೇಶ” ಮುಂಬೈಯ ಪ್ರಭಾ ಎನ್ ಸುವರ್ಣ ಅವರು ಉಪನ್ಯಾಸ ನೀಡಿದ್ದರು.



Related posts

ಚಿತ್ರಾಪು: ವಿಠಲ ಬಂಗೇರ ನಿಧನ

Mumbai News Desk

ಮುಂಬೈ – ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ವಿಸ್ತರಿಸುವ ಸಾಧ್ಯತೆ

Mumbai News Desk

ಬೆಂಗಳೂರು – ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ: ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ಸೇವೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ :

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ – ಕೋಟ ಶ್ರೀನಿವಾಸ ಪೂಜಾರಿ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (31/05/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk