September 6, 2026
Mumbai News Kannada
ಸುದ್ದಿ

ದುಬೈನಲ್ಲಿ ಕನ್ನಡಾಭಿಮಾನಕ್ಕೆ ಪ್ರಧಾನಿ ಮೋದಿ ಶ್ಲಾಘನೆ





ತಮ್ಮ 129 ನೇ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡ್ರು. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ, ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ ಅನ್ನೋ ಆತಂಕ ದುಬೈ ಕನ್ನಡಿಗರಿಗೆ ಬಂತು. ಆಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ‌ ಮಾಡಿದರು ಎಂದು ತಿಳಿಸಿದ್ದಾರೆ.

ಕನ್ನಡ ಪಾಠಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸುತ್ತಿದ್ದಾರೆ. ಕನ್ನಡ ಓದು, ಬರಹ, ಮಾತಾಡೋದು ಕಲಿಸ್ತಿದ್ದಾರೆ. ಈಗ ಆ ಪಾಠಶಾಲೆಯಲ್ಲಿ ಒಂದು ಸಾವಿರ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಕೆಲಸ ಆಗ್ತಿದೆ. ಈ ಮೂಲಕ‌ ದುಬೈನಲ್ಲಿ ಇರುವ ಕನ್ನಡಿಗರು ಭಾಷಾಭಿಮಾನ ಮೆರೆಯುತ್ತಿದ್ದಾರೆ. ಕನ್ಮಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ, ಭಾಷೆ ನಮ್ಮ ಹೆಮ್ಮೆಯಾಗಿದೆ ಎಂದು ಹಾಡಿಹೊಗಳಿದ್ದಾರೆ.

ಫಿಜಿಯಲ್ಲಿ ತಮಿಳು ದಿನ ಆಚರಣೆ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ಫಿಜಿಯಲ್ಲಿ ಭಾರತೀಯ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಶ್ಲಾಘನೀಯ ಉಪಕ್ರಮ ನಡೆಯುತ್ತಿದೆ. ಅಲ್ಲಿನ ಹೊಸ ಪೀಳಿಗೆಯನ್ನು ತಮಿಳು ಭಾಷೆಯೊಂದಿಗೆ ಸಂಪರ್ಕಿಸಲು ವಿವಿಧ ಹಂತಗಳಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕಳೆದ ತಿಂಗಳು, ಫಿಜಿಯ ರಾಕಿರಾಕಿ ಪ್ರದೇಶದ ಒಂದು ಶಾಲೆಯು ತನ್ನ ಮೊದಲ ತಮಿಳು ದಿನ ಆಚರಣೆಯನ್ನು ನಡೆಸಿತು. ಈ ದಿನವು ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸಿತು. ಅವರು ಕವಿತೆಗಳನ್ನು ವಾಚಿಸಿದರು, ಭಾಷಣಗಳನ್ನು ನೀಡಿದರು ಎಂದು ಪ್ರಧಾನಿ ಮಾತನಾಡಿದ್ದಾರೆ.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ   ಮುಖ್ಯಮಂತ್ರಿ  ದೇವೇಂದ್ರ ಫಡ್ನವಿಸ್  ಗೆ ಆಹ್ವಾನ

Mumbai News Desk

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk

ಪ್ರಗತಿಯ ಪಥದಲ್ಲಿ ಭಾರತ್ ಬ್ಯಾಂಕ್:  ಸೂರ್ಯಕಾಂತ್ ಜಯ ಸುವರ್ಣ 

Mumbai News Desk

ಮೋಹನ್ ಬಿ. ಎಂ. ನಿಧನ

Mumbai News Desk

ಬಂಗಾಳದಲ್ಲಿ ಬಿಜೆಪಿ ಗೆಲುವು: ಹಲವು ವರ್ಷಗಳ ನಂತರ ತೆರೆದ ದುರ್ಗಾ ದೇವಸ್ಥಾನ

Mumbai News Desk

ಅಜಿತ್ ಪವಾರ್ ವಿಮಾನ ಅಪಘಾತ : ಘಟನೆ ಹೇಗೆ ನಡೆಯಿತು? ‘ಕಳಪೆ ಗೋಚರತೆ… ನಂತರ ಅಪಘಾತ’

Mumbai News Desk