
ಮಂಗಳೂರು : ಮಲ್ನಾಡು ಪೂರ್ವದ ಕುರಾರ್ ವಿಲೇಜ್ ವಿಲೇಜಿನ ಶ್ರೀ ಶನಿಮಹಾತ್ಮ ಪೂಜಾ ಸಮಿತಿಗೆ 50 ವರ್ಷ ಪೂರ್ತಿ ಗೊಳ್ಳುವ ಸುಸಂದರ್ಭದ ಅಂಗವಾಗಿ ವರ್ಷಪೂರ್ತಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡಿದ್ದು ಆ ಪ್ರಯುಕ್ತ ಮಂಗಳೂರಿನ ಸೋಮೇಶ್ವರದ ಒಡೆಯ ಸೋಮನಾಥ ದೇವರ ಮಹಾದ್ವಾರದ ಬಳಿ ದಿವ್ಯ ಶ್ರೀ ” ಸಭಗ್ರಹದಲ್ಲಿ ದಿನವಿಡೀ ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿದ್ದರು.
ಮುಂಬೈಯ ಸಾಫಲ್ಯ ಸೇವಾ ಸಂಘದ ಅದ್ಯಕ್ಷರು ಹಾಗೂ ಶ್ರೀ ಮಹತೋಬಾರ ಶನಿ ಮಹಾತ್ಮ ಪೂಜಾ ಸಮಿತಿ ಮಲಾಡ್ ನ ಅಧ್ಯಕ್ಷರೂ ಆದ ಶ್ರೀನಿವಾಸ ಸಾಫಲ್ಯ ಮತ್ತು ಅವರ ಪತ್ನಿ ರತಿಕಾ ಶ್ರೀನಿವಾಸ ಸಾಫಲ್ಯ ಅವರು ಸೇವಾ ರೂಪದಲ್ಲಿ ಪೂಜಾ ಕಾರ್ಯಗಳು ನಡೆದವು.
ವೃಶ್ಚಿಕ ಸಂಕ್ರಮಣದ ಪರ್ವಕಾಲದಲ್ಲಿ ಬೆಳಿಗ್ಗೆ ಶ್ರೀ ಸತ್ಯನಾರಯಣ ಮಹಾ ಪೂಜೆ ಯು ಶ್ರೀಪತಿ ಭಟ್ ಅವರ ಪೌರೋಹಿತ್ಯ ದಲ್ಲಿ ಸಾಂಗವಾಗಿ ನಡೆಯಿತು. ಪೂಜೆಯ ನಂತರ ಮಹಾ ಮಂಗಳಾರತಿ ನಡೆಯಿತು.

ಮದ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತ ಭಾಂದವರು ಭಾಗಿಗಳಾದರು.
ಅಪರಾಹ್ನ ಮಲಾಡ್ ಶ್ರೀ ಶನಿಮಂದಿರದ ಸದಸ್ಯರಿಂದ ಹಾಗೂ ಊರಿನ ನುರಿತ ಕಲಾವಿದರಿಂದ ಶ್ರೀ ಶನಿಗ್ರಂಥ ಪಾರಯಾಣ ಯಕ್ಷಗಾನ ತಾಳ ಮದ್ದಳೆ ರೂಪಕ ದಲ್ಲಿ ನಡೆಯಿತು.
ಭಾಗವತರಾಗಿ ಧೀರಾಜ್ ರೈ . ಶ್ರೀನಿವಾಸ ಸಾಫಲ್ಯ. ಕಲಾವಿದರಾಗಿ ಯಕ್ಷಗಾನದ ಹೆಸರಾಂತ ಹಾಸ್ಯಗಾರ ಸೀತಾರಾಮ ಕಟೀಲು, ಶ್ರೀಪತಿ ಭಟ್ , ನಾರಾಯಣ ಶೆಟ್ಟಿ ,ವಾಸು ಸಾಲಿಯಾನ್ , ಸದಾನಂದ ನಾಯಕ್ , ಚಂದ್ರ ಕುಮಾರ್ ಶೆಟ್ಟಿ , ಗಂಗಾಧರ ಸುವರ್ಣ , ಸಹದೇವ ಸಾಲಿಯಾನ್ , ಉಮೇಶ್ ಕಾಂ ತರ. ನಿತ್ಯಾನಂದ ಕೋಟ್ಯಾನ್ ಅವರು ಪಾರಾಯಣದಲ್ಲಿ ಭಾಗವಹಿಸಿದ್ದರು. ನಂತರ ಶ್ರೀ ಶನಿ ದೇವರಿಗೆ ಭಜನೆಯ ಜತೆಗೆ ಮಂಗಳಾರತಿ ಮಾಡಲಾಯಿತು.

ಭಕ್ತ ಭಾಂದವರು ಶ್ರೀ ಸತ್ಯನಾರಾಯಣ ದೇವರ, ಶ್ರೀ ಶನಿದೇವರ ಮಹಾಪ್ರಸಾದ ಸ್ವೀಕರಿಸಿದರು. ಮುಂಬೈಯ ಸಾಫಲ್ಯ ಸೇವಾ ಸಂಘದ ಪದಾಧಿಕಾರಿಗಳು. ಶ್ರೀ ಮಹತೋಬಾರ ಶನಿ ಮಹಾತ್ಮ ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪರಿಸರದ ಭಕ್ತರು ದಿನವಿಡೀ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ವರ್ಷ ಶ್ರೀ ಶನಿಮಾತ್ಮ ಪೂಜಾ ಸಮಿತಿಗೆ 50 ವರ್ಷದ ಸಂಭ್ರಮಾಚರಣೆ ನಡೆಯಲಿದ್ದು ಪ್ರಯುಕ್ತ ಪೂಜಾ ಸಮಿತಿಯ ಪದಾಧಿಕಾರಿಗಳು ಧರ್ಮಸ್ಥಳದಲ್ಲಿ ವಿಶೇಷ ಪೂಜೆಯನ್ನು ನಡೆಸಿದರು. ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ .ಕಾರ್ಯದರ್ಶಿ ಸಂತೋಷ್ ಶೆಟ್ಟಿ .ಕೋಶಧಿಕಾರಿ ಹರೀಶ್ ಸಾಲಿಯಾನ್. ಹಿರಿಯ ಸದಸ್ಯರಾದ ನಾರಾಯಣಶೆಟ್ಟಿ. ನಿತ್ಯಾನಂದ ಕೋಟ್ಯಾನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೀತಲ್ ಕೋಟ್ಯಾನ್. ಹಾಗೂ ಶಾಲಿನಿ ಶೆಟ್ಟಿ. ಪ್ರಭಾಕರ್ ಶೆಟ್ಟಿ .ಮತ್ತಿತರ ಪದಾಧಿಕಾರಿಗಳು