March 20, 2026
Mumbai News Kannada
ಪ್ರಕಟಣೆ

ಡೊಂಬಿವಲಿ ಶ್ರೀ ಜಗದಂಬಾ ಮಂದಿರ: ಏಪ್ರಿಲ್ 4 ಮತ್ತು 5ರಂದು 11ನೇ ವಾರ್ಷಿಕ ಮಹೋತ್ಸವ





ಡೊಂಬಿವಲಿ: ಇಲ್ಲಿನ ನ್ಯೂ ದೇವೀಚಪಾಡಾ, ಜಗದಂಬಾ ರೋಡ್‌ನಲ್ಲಿರುವ ಶ್ರೀ ಜಗದಂಬಾ ಮಂದಿರದ (ರಿ.) 11ನೇ ವಾರ್ಷಿಕ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವವು ಇದೇ ಏಪ್ರಿಲ್ 4 ಮತ್ತು 5ರಂದು ಸಡಗರದಿಂದ ಜರುಗಲಿದೆ.

​ಯಕ್ಷಕಲಾ ಸಂಸ್ಥೆಯ (ರಿ.) ಸ್ಥಾಪಕತ್ವದಲ್ಲಿ, ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾಗಿರುವ ಈ ಮಹೋತ್ಸವವು ಸುಬ್ರಮಣ್ಯ ರಾವ್ ಅವರ ಸಾರಥ್ಯದಲ್ಲಿ ಹಾಗೂ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.

ಕಾರ್ಯಕ್ರಮದ ವಿವರ:

ಏಪ್ರಿಲ್ 4, ಶನಿವಾರ:

ಬೆಳಿಗ್ಗೆ 8:00 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ ಹಾಗೂ ಪುಣ್ಯಾಹವಾಚನ ನಡೆಯಲಿದೆ. 8:30ಕ್ಕೆ ಗಣಪತಿ ಹೋಮ, 10:30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದ್ದು, ಮಧ್ಯಾಹ್ನ 12:00ಕ್ಕೆ ಮಹಾಮಂಗಳಾರತಿ ನೆರವೇರಲಿದೆ. 12:30ರಿಂದ ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ಶನಿಪೂಜೆ ಹಾಗೂ ಶನಿಗ್ರಂಥ ಪಾರಾಯಣ ‘ಯಕ್ಷಗಾನ ತಾಳಮದ್ದಳೆ’ ರೂಪದಲ್ಲಿ ನಡೆಯಲಿದೆ. ಇದೇ ವೇಳೆ ಮಂಡಳಿಯ ಸದಸ್ಯರಾದ ಶ್ರೀ ಸುರೇಶ ಟಿ. ಅಂಚನ್ ಅವರಿಂದ ಕಲಶ ಪ್ರತಿಷ್ಠಾಪನೆ ನಡೆಯಲಿದ್ದು, ಮಧ್ಯಾಹ್ನ 1:00 ಗಂಟೆಗೆ ಪಲ್ಲಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಏಪ್ರಿಲ್ 5, ಆದಿತ್ಯವಾರ:

ಬೆಳಿಗ್ಗೆ 8:00 ಗಂಟೆಗೆ 25 ಕಲಶಗಳ ಆರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವರಿಗೆ ನವಕಕಲಶ ಅಭಿಷೇಕ ನಡೆಯಲಿದೆ. ಬೆಳಿಗ್ಗೆ 10:00 ಗಂಟೆಗೆ ಶ್ರೀ ದೇವಿಯ ಬಲಿ ಮೂರ್ತಿಯ ಭವ್ಯ ಮೆರವಣಿಗೆಯು ಮಂದಿರದಿಂದ ಹೊರಟು ಗೋಪಿನಾಥ ಚೌಕಿನ ಹರಿ ಹರೇಶ್ವರ ಮಂದಿರದವರೆಗೆ ಸಾಗಿ, ನಂತರ ಉತ್ಸವ ಬಲಿ ಕಟ್ಟೆಪೂಜೆ ನೆರವೇರಲಿದೆ.

​ಮಧ್ಯಾಹ್ನ 12:00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:00 ಗಂಟೆಗೆ ಕುಂಕುಮಾರ್ಚನೆ ಮಹಾಪೂಜೆ, ರಂಗಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.

ವಿಶೇಷ ಸೂಚನೆ:

ಸಾಮೂಹಿಕ ಶನಿಪೂಜೆಯಲ್ಲಿ ಭಾಗವಹಿಸುವ ಭಕ್ತರು ರೂ. 301/- ಪಾವತಿಸಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಶನಿಪೂಜಾ ಸಮಿತಿ, ಯುವ ಹಾಗೂ ಮಹಿಳಾ ವಿಭಾಗದ ಸದಸ್ಯರು ಸರ್ವ ಭಕ್ತಾದಿಗಳನ್ನು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.



Related posts

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : ಸೆ. 28ರಂದು 80ನೇ ವಾರ್ಷಿಕ ಮಹಾಸಭೆ

Mumbai News Desk

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬೈ ಭೇಟಿಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ. 

Mumbai News Desk

ಕಾಂದಿವಲಿ ಪೂರ್ವ ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿನ 30 ರಂದು 50 ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹೋತ್ಸವ ಮತ್ತು ಅನ್ನದಾನ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಫೆ. 6ರಂದು ವಾರ್ಷಿಕ ಉತ್ಸವ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮಾ. 9ರಂದು ಮೊಗವೀರ ಮಾಸಿಕದ 85ರ ಸಂಭ್ರಮ

Mumbai News Desk

ತೋಡಾರು ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿ : ಡಿ 22ರಿಂದ 26ವರೆಗೆ ಕಾಲಾವಧಿ ಜಾತ್ರೆ

Mumbai News Desk