September 23, 2026
Mumbai News Kannada
ಪ್ರಕಟಣೆ

ಆ.9 ರಂದು ಇತಿಹಾಸ ಪ್ರಸಿದ್ಧ ನಂದಳಿಕೆ ನಾಲ್ಕು ಸ್ಥಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಆದಿ ಆಲಡೆಗಳ ಜೀರ್ಣೋದ್ಧಾರ ಸಭೆ.



ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಇತಿಹಾಸ ಪ್ರಸಿದ್ಧ ನಂದಳಿಕೆ ನಾಲ್ಕು ಸ್ಥಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಆದಿ ಆಲಡೆಗಳ ಜೀರ್ಣೋದ್ಧಾರ ನಿಮಿತ್ತ ಪೂರ್ವಭಾವಿ ಸಭೆಯು ಆಗಸ್ಟ್ 9ರಂದು ಆದಿತ್ಯವಾರ ಮಧ್ಯಾಹ್ನ 3:30ಕ್ಕೆ ಹೋಟೆಲ್ ಕೃಷ್ಣ ಪ್ಯಾಲೇಸ್, ನಾನಾ ಚೌಕ್, ಮುಂಬಯಿ ಇಲ್ಲಿ ಜರಗಲಿದೆ. ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ
ಕ್ಷೇತ್ರ ಪರಿಚಯ ಹಾಗೂ ದಿಕ್ಸೂಚಿ ಭಾಷಣ ಮಾಡಲಿರುವರು.ಆಡಳಿತ ಮೊಕ್ತೇಸರರು, ಚಾವಡಿ ಅರಮನೆ, ನಂದಳಿಕೆ ಸುಹಾಸ್ ಹೆಗ್ಡೆ ಗೌರವ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಜೀರ್ಣೋದರ ಸಮಿತಿ ಅಧ್ಯಕ್ಷರು ನಂದಳಿಕೆ ಕಾಪಿಕೆರೆ ಕೃಷ್ಣ ಶೆಟ್ಟಿ ವಹಿಸಿಕೊಳ್ಳಲಿರುವರು.
ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರು, ಆದಿ ಆಲಡೆಗಳ ಆರಾಧಕರು ಹಾಗೂ ನಂದಳಿಕೆ, ಕೆಡಿಂಜೆ, ಬೆಳ್ಮಣ್, ಬೋಳ, ಸೂಡ, ಕಲ್ಯಾ, ಕುಂಟಾಡಿ, ಪಳ್ಳಿ ಗ್ರಾಮದ ಭಕ್ತರೆಲ್ಲ ಈ ಪವಿತ್ರ ಕ್ಷೇತ್ರದ ಜೀರ್ಣೋದ್ಧಾರ ಮಹಾಯಜ್ಞದಲ್ಲಿ ಭಾಗಿಯಾಗಿ, ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಪುಣ್ಯಕಾರ್ಯದಲ್ಲಿ ಭಾಗಿಯಾಗಬೇಕಾಗಿ ನಂದಳಿಕೆ- ಕೆದಿಂಜೆ ಗ್ರಾಮದ ಗ್ರಾಮಸ್ಥರು ಮತ್ತು ಆದಿ ಆಲಡೆಯ ಭಕ್ತರು ವಿನಂತಿಸಿಕೊಂಡಿದ್ದಾರೆ.



Related posts

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಭಾಯಂದರ್ ಪೂರ್ವ : ಎ. 12ರಂದು ವಾರ್ಷಿಕ ಶ್ರೀ ಮಹಾದೇವಿ ಮಹಾಪೂಜೆ

Mumbai News Desk

ಮಾ. 29: ಬೋರಿವಲಿಯ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ರಕ್ತದಾನ ಶಿಬಿರ: ಮಾನವೀಯ ಸೇವೆಗೆ ಸ್ಪಂದಿಸಲು ಭಕ್ತಾದಿಗಳಿಗೆ ಕರೆ

Mumbai News Desk

ಮುಂಬಯಿ: ಡಿ. 25ರಂದು ಶ್ರೀ ಕೃಷ್ಣ-ವಿಠ್ಠಲ ಪ್ರತಿಷ್ಠಾನದ 28ನೇ ವರ್ಷದ ಧಾರ್ಮಿಕ ಉತ್ಸವ

Mumbai News Desk

ಮಾ7:   ಒಕ್ಕಲಿಗರ ಸಂಘ ಮಹಾರಾಷ್ಟ್ರ, (ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ) ವತಿಯಿಂದ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪುಸ್ತಕ ವಿತರಣೆ,

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ)* ಪುನರ್ ನಿರ್ಮಾಣ, ಅ 15.:   ಗೋರೆಗಾಂವ್ ಪೂರ್ವದಲ್ಲಿ ನಂದಾದೀಪ ಆಡಿಟೋರಿಯಮ್ ನಲ್ಲಿ ಮನವಿಪತ್ರ ಬಿಡುಗಡೆ.

Mumbai News Desk