
ಕರ್ನಾಟಕ ಸಂಘ, ಡೊಂಬಿವಲಿ ಇದರ ಲಲಿತ ಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ಸಂಯೋಜನೆಯಲ್ಲಿ ನಾಡಹಬ್ಬ ಸಮಾರಂಭ ನಾಳೆ ದಿನಾಂಕ 10.12.2023 ರವಿವಾರ ಸಂಜೆ 4.30 ಕ್ಕೆ ಠಾಕುರ್‌ಹಾಲ್, ಟಂಡನ್ ರಸ್ತೆ, ಡೊಂಬಿವಲಿ (ಪೂರ್ವ) ದಲ್ಲಿ ಕರ್ನಾಟಕ ಸಂಘ, ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ ಎನ್. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರುಗಲಿರುವುದು. ಕಾರ್ಯಾಧ್ಯಕ್ಷರಾದ ದಿವಾಕರ ಟಿ. ಶೆಟ್ಟಿ, ಇಂದ್ರಾಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಮುಖ್ಯ ಅತಿಥಿಯಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎ.ಸುಬ್ಬಣ್ಣ ರೈ, ಉಪಸ್ಥಿತರಿರುವರು.
ದೇಶ ಭಕ್ತಿ ಗೀತೆ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ವಿಭಾಗದವರಿಂದ ನೃತ್ಯ ವೈಭವ ನಡೆಯಲಿದೆ.
ಉಪಾಧ್ಯಕ್ಷರಾದ ಲೋಕನಾಥ ಎ. ಶೆಟ್ಟಿ, ಉಪ-ಕಾರ್ಯಾಧ್ಯಕ್ಷರಾದ ದೇವದಾಸ ಎಲ್. ಕುಲಾಲ್, ಗೌ.ಪ್ರ.ಕಾರ್ಯದರ್ಶಿ ಅಜಿತ್ ಬಿ. ಉಮ್ರಾಣಿ, ಗೌ. ಕೋಶಾಧಿಕಾರಿ ತಾರಾನಾಥ ಎಸ್. ಅಮೀನ್, ಜೊತೆ ಕಾರ್ಯದರ್ಶಿ ದಿನೇಶ್ ಬಿ. ಕುಡ್ಡ, ಜೊತೆ ಕೋಶಾಧಿಕಾರಿ ವಿಮಲಾ ವಿ. ಶೆಟ್ಟಿ, ಲಲಿತ ಕಲಾ ವಿಭಾಗದ ವತಿಯಿಂದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ, ಕಾರ್ಯದರ್ಶಿ ರಮೇಶ್ ವಿ. ಶೆಟ್ಟಿ, ಮಹಿಳಾ ವಿಭಾಗದ ವತಿಯಿಂದ ಕಾರ್ಯಾಧ್ಯಕ್ಷೆ ಆಶಾ ಎಲ್. ಶೆಟ್ಟಿ, ಕಾರ್ಯದರ್ಶಿ ಮಾಧುರಿಕ ಆರ್. ಬಂಗೇರ ಹಾಗೂ ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
.
.
.