34 C
Mumbai
May 29, 2026
Mumbai News Kannada
ಪ್ರಕಟಣೆ

ಮೂಲ್ಕಿ : ಮೇ. 3ರಂದು ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ನುಡಿಮುತ್ತು’ ಕೃತಿ ಬಿಡುಗಡೆ ಸಮಾರಂಭ





ಹೊಸ ಅಂಗಣ ಪ್ರಕಟನಾಲಯ, ಮೂಲ್ಕಿ ಇದರ ವತಿಯಿಂದ ಹರಿಶ್ಚಂದ್ರ ಪಿ. ಸಾಲಿಯಾನ್ ಅವರ 23ನೇ ಕೃತಿಯಾದ ‘ನುಡಿಮುತ್ತು’ ಪುಸ್ತಕ ಬಿಡುಗಡೆ ಸಮಾರಂಭವು 2026ರ ಜೂನ್ 3ರ ಬುಧವಾರದಂದು ಸಂಜೆ 4:00 ಗಂಟೆಗೆ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಸಾಹಿತ್ಯಿಕ ಕಾರ್ಯಕ್ರಮದ ಕೃತಿ ಬಿಡುಗಡೆಯನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ| ತಲ್ಲೂರು ಶಿವರಾಮ್ ಶೆಟ್ಟಿ, ಕಿನ್ನಿಗೋಳಿಯ ಯುಗಪುರುಷ ಪತ್ರಿಕೆಯ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ, ಮುಂಬೈನ ಪತ್ರಕರ್ತರಾದ ಶ್ರೀ ಉಮೇಶ್ ಕೆ. ಅಂಚನ್, ನಿವೃತ್ತ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಕೆ. ಎನ್. ಕೋಟ್ಯಾನ್, ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಎಚ್. ವಸಂತ್ ಬೆರ್ನಾಡ್ ಮತ್ತು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀ ಮನೋಹರ್ ಕೋಟ್ಯಾನ್ ಅವರು ಭಾಗವಹಿಸಲಿದ್ದಾರೆ.
ಹೊಸ ಅಂಗಣ ಪ್ರಕಾಶನ ಮೂಲ್ಕಿ ಹಾಗೂ ಕೃತಿ ಕರ್ತರಾದ ಹರಿಶ್ಚಂದ್ರ ಪಿ. ಸಾಲಿಯಾನ್ ಅವರು ಸಾಹಿತ್ಯಾಸಕ್ತರೆಲ್ಲರಿಗೂ ಈ ಸಮಾರಂಭಕ್ಕೆ ಆದರದ ಸುಸ್ವಾಗತವನ್ನು ಕೋರಿದ್ದಾರೆ.



Related posts

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ, ಜು.21:   ಭಾಯಂದರ್ ಪೂರ್ವದಲ್ಲಿ  “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk

ವಿಜಯಕುಮಾರ್ ಕೊಡಿಯಾಲ್ ಬೈಲ್ ರಿಗೆ ರಂಗಚಾವಡಿ ಪ್ರಶಸ್ತಿ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ – ಸೆ. 28ಕ್ಕೆ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್ಸೈಟ್ ಲೋಕಾರ್ಪಣೆ

Mumbai News Desk

ದೊಡ್ಡಣ್ಣ ಗುಡ್ಡೆ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ , ಮೇ 2 :: ಶ್ರೀ ಕುಬೇರ ಲಕ್ಷ್ಮಿ ಪ್ರತಿಷ್ಠಾವರ್ಧಂತಿ 

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk