July 23, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಫೆ. 15ರಂದು ಮಹಾಶಿವರಾತ್ರಿ ಮಹೋತ್ಸವ; ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೋತ್ಸವ







ಡೊಂಬಿವಲಿ: ಇಲ್ಲಿನ ಪಶ್ಚಿಮದ ಗೋಪಿನಾಥ್ ಚೌಕ್, ಜೈ ಜಗದಂಬಾ ರಸ್ತೆಯ ಹೊಸ ದೇವಿಚಾಪಾಡದಲ್ಲಿರುವ ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ನಿರ್ವಹಣೆಯ ಶ್ರೀ ಜಗದಂಬಾ ಮಂದಿರದಲ್ಲಿ ಫೆಬ್ರವರಿ 15ರ ಭಾನುವಾರ ಮಹಾಶಿವರಾತ್ರಿ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ.

​ಅಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸತತವಾಗಿ ‘ಭಜನೋತ್ಸವ’ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7:00ಕ್ಕೆ ನಿತ್ಯ ಪೂಜೆ, 7:30ಕ್ಕೆ ಶಿವ ಅರ್ಚನಾ ಪೂಜೆ ಹಾಗೂ 7:45ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ರಾತ್ರಿ 8:00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ದಿನಪೂರ್ತಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ:

​ಬೆಳಿಗ್ಗೆ 8:00ರಿಂದ ರಾತ್ರಿ 8:00ರವರೆಗೆ ಸತತವಾಗಿ ಈ ಕೆಳಗಿನ ತಂಡಗಳಿಂದ ಭಜನಾ ಸೇವೆ ನಡೆಯಲಿದೆ:

  • ಶ್ರೀ ಜಗದಂಬಾ ಮಂದಿರ ತಂಡ (ಬೆಳಿಗ್ಗೆ 8:00)
  • ದೇವಡಿಗ ಸಂಘ ಡೊಂಬಿವಲಿ ವಲಯ (8:30)
  • ಅಯ್ಯಪ್ಪ ಭಕ್ತ ವೃಂದ ಅಜದೆಪಾಡ (9:00)
  • ತುಳು ವೆಲ್ಫೇರ್ ಅಸೋಸಿಯೇಷನ್ (9:45)
  • ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ (10:30)
  • ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ (11:15)
  • ಮಹಾವಿಷ್ಣು ಮಂದಿರ ಮುಂಬ್ರಾ ಮಿತ್ರ ಭಜನಾ ಮಂಡಳಿ (ಮಧ್ಯಾಹ್ನ 12:00)
  • ಶ್ರೀ ರಾಧಾಕೃಷ್ಣ ಶನೈಶ್ಚರ ಮಂದಿರ ಡೊಂಬಿವಲಿ (12:45)
  • ಪಶ್ಚಿಮ ವಿಭಾಗ ನವರಾತ್ರಿ ಮಂಡಳಿ (1:30)
  • ಜೈ ಭವಾನಿ ಶನೈಶ್ಚರ ಮಂದಿರ ಡೊಂಬಿವಲಿ (2:15)
  • ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ (3:00)
  • ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ (3:45)
  • ರಜಕ ಸಂಘ ಡೊಂಬಿವಲಿ (4:30)
  • ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ (5:15)
  • ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ದೊಂಬಿವಲಿ (6:00)
  • ಚಿಣ್ಣರ ಬಿಂಬ ಡೊಂಬಿವಲಿ (6:45)
  • ಶ್ರೀ ಜಗದಂಬಾ ಮಂದಿರ ತಂಡ (ರಾತ್ರಿ 7:15)

​ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಂದಿರದ ಅಧ್ಯಕ್ಷರಾದ ಶ್ರೀ ದಿವಾಕರ್ ಜಿ. ರೈ, ಉಪಾಧ್ಯಕ್ಷರಾದ ರವೀಂದ್ರ ವೈ. ಶೆಟ್ಟಿ ಹಾಗೂ ದಿನೇಶ್ ಜಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಸಂತೋಷ್ ಎಂ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ವಿಜಯ್ ಶೆಟ್ಟಿ ಸಜೀಪಗುತ್ತು, ವ್ಯವಸ್ಥಾಪನಾ ಸಮಿತಿ, ಮಹಿಳಾ ವಿಭಾಗ, ಭಜನಾ ಸಮಿತಿ, ಯುವ ವಿಭಾಗ ಹಾಗೂ ಶನಿಪೂಜಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk

ನ. 25ಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ

Mumbai News Desk

ಆಗಸ್ಟ್ 3ರಂದು ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಥಾಣೆ, ಆಶ್ರಯದಲ್ಲಿ ಮಂದಾರ್ತಿ ಮೇಳದ ಕಲಾವಿದರಿಂದ “ಜಗನ್ಮಾತೆ ಶ್ರೀ ವನದುರ್ಗಿ” ಯಕ್ಷಗಾನ ಪ್ರದರ್ಶನ

Mumbai News Desk

ಆ. 3 ರಿಂದ ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯಲ್ಲಿಶರನ್ನವರಾತ್ರಿ ಮಹೋತ್ಸವ.

Mumbai News Desk