32 C
Mumbai
September 27, 2026
Mumbai News Kannada
ಪ್ರಕಟಣೆ

ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ, ಜೂ 28 :ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.



ಮುಂಬಯಿ, :
ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಮತ್ತು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ “ಸಂಪೂರ್ಣ ಶ್ರೀ ರಾಮ ಚರಿತ್ರೆ – ಶ್ರೀ ರಾಮ ಕಥಾ ಹೃದಯಂ’ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ದಶಮ ಪ್ರಸ್ತುತಿಃ ‘
ಸೀತಾನ್ವೇಷಣೆ
ಮತ್ತು ಸಮ್ಮಾನ ಕಾರ್ಯಕ್ರಮವು ಜೂನ್ 28ರಂದು ಅಪರಾಹ್ನ 2.15 ರಿಂದ ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೂಕ್ತೇಸರರಾದ ಶ್ರೀ ಹರಿದಾಸ ಗೋಪಾಲ್ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭದಲ್ಲಿ, ಕಳೆದ ಹಲವು ದಶಕಗಳಿಂದ ಮುಂಬೈ ಮಹಾನಗರದಲ್ಲಿ ಯಕ್ಷಗಾನ ಮಹಿಳಾ ಕಲಾವಿದೆ , ಯಕ್ಷಗಾನ ನಿರ್ದೇಶಕರು ,
ನ್ಯಾಯವಾಗಿ ಗೀತಾ ಆರ್ ಎಲ್ ಭಟ್ , ಲೇಖಕರು ಸಾಹಿತಿಗಳು ಕೊಲ್ಯಾರು ರಾಜು ಶೆಟ್ಟಿ , ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿ ಯು
ನೇಪಥ್ಯ ಕಲಾವಿದ ಕೃಷ್ಣ ಬಂಗೇರ, ತ್ರಿಭಾಷ ಪ್ರಸಂಗ ಕರ್ತರು ಕಲಾವಿದ ಎಂ ಟಿ ಪೂಜಾರಿಇವರನ್ನು ದಂಪತಿ ಸಮೇತರಾಗಿ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇ| ಮೂ| ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾ ವಿಹಾರ ಶ್ರೀ ಗಾಂವ್‌ದೇವಿ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ
ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ ,
ನಿತ್ಯಾನಂದ ಕೋಟ್ಯಾನ್ (ಅಧ್ಯಕ್ಷರು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಹಾಗೂ ಕಲಾಪೋಷಕರು ) ನವೀನ್ ಪಡು ಇನ್ನಾ (ಕಾರ್ಯಾಧ್ಯಕ್ಷರು ನಾರಾಯಣ. ಗುರುಸ್ವಾಮಿ ಯಕ್ಷಗಾನ. ಮಂಡಳಿ ) ಆಗಮಿಸಲಿದ್ದಾರೆ.
ಶ್ರ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಪೂರ್ವ ಇವರಿಂದ ಶ್ರೀ ರಾಮ ಸಂಕೀರ್ತನೆ ನಡೆಯಲಿರುವುದು,
,

ಕಲಾಭಿಮಾನಿಗಳು, ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾವಿದರೂ, ಕಲಾ ಸಂಘಟಕರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೋಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ

Mumbai News Desk

ಚಿತ್ರಾಪು ಬಿಲ್ಲವರ ಸಂಘ (ರಿ), ಮುಂಬಯಿ,ಡಿ.29 ರಂದು ವಾರ್ಷಿಕ ಮಹಾಸಭೆ,

Mumbai News Desk

ಐತಿಹಾಸಿಕ ಕಾಪು ಪಿಲಿ ಕೋಲ: ಮೇ 16 ರಂದು ಕರಾವಳಿಯ ವಿಶಿಷ್ಟ ಪ್ರಕೃತಿ ಆರಾಧನೆ

Mumbai News Desk

ಮಾ. 15 : ತುಳು ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ಆಶ್ರಯದಲ್ಲಿ ಸೋಮನಾಥ ಎಸ್. ಕರ್ಕೇರರ “ಪೆರ್ಗ” ತುಳು ಹನಿಗವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ

Mumbai News Desk

ಡೊಂಬಿವಲಿ: ಫೆ. 28ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಭಜನಾ ಸ್ಪರ್ಧೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ.17ರಂದು ಸಂಕ್ರಮಣ ಹಾಗೂ ನಾಗ ಪಂಚಮಿ ಪೂಜೆ

Mumbai News Desk