ಡೊಂಬಿವಲಿ: ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಸಂಘ ಡೊಂಬಿವಲಿಯ (ವಸಂತ್ ಚೇಂಬರ್ಸ್, 2ನೇ ಮಹಡಿ, ಜಿ. ಗುಪ್ತೆ ರಸ್ತೆ, ಡೊಂಬಿವಲಿ ಪಶ್ಚಿಮ) 59ನೇ ವಾರ್ಷಿಕ ಮಹಾಸಭೆಯು ನಾಳೆ ಅಂದರೆ ನವೆಂಬರ್ 15, 2026 ರಂದು ಅಪರಾಹ್ನ 4-30 ಗಂಟೆಗೆ ಡೊಂಬಿವಲಿ ಪೂರ್ವದ ಗೋಪಾಲ ನಗರದಲ್ಲಿರುವ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಸುಕುಮಾರ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಮಹಾಸಭೆ ಜರುಗಲಿದೆ.
ಸಂಘದ 2026-2029ನೇ ಸಾಲಿನ ಅವಧಿಗೆ 17 ಕಾರ್ಯಕಾರಿ ಸಮಿತಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 15, 2026 ರಂದು ನಡೆಯಬೇಕಿದ್ದ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುವುದಿಲ್ಲ ಎಂದು ಚುನಾವಣಾ ಅಧಿಕಾರಿ ಶ್ರೀ ಜಗತ್ಪಾಲ್ ಎಸ್. ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ಸಮಸ್ತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಈ 59ನೇ ವಾರ್ಷಿಕ ಮಹಾಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ಸುಕುಮಾರ ಎನ್. ಶೆಟ್ಟಿ, ಉಪಾಧ್ಯಕ್ಷ ಲೋಕನಾಥ ಎ. ಶೆಟ್ಟಿ, ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಉಪಕಾರ್ಯಾಧ್ಯಕ್ಷ ದೇವದಾಸ ಕುಲಾಲ, ಗೌರವ ಕಾರ್ಯದರ್ಶಿ ಪ್ರೊ. ಅಜೀತ ಉಮರಾಣಿ ಹಾಗೂ ಕೋಶಾಧಿಕಾರಿ ತಾರಾನಾಥ ಅಮೀನ್, ಜೊತೆ ಕೋಶಾಧಿಕಾರಿ ವಿಮಲ ಡಿ ಶೆಟ್ಟಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.
.








































































