ಮುಂಬೈನ ವಡಾಲಾದ ಎನ್.ಕೆ.ಇ.ಎಸ್. ಹೈಸ್ಕೂಲ್ನಲ್ಲಿ ‘ಸ್ಕೂಲ್ ಚಲೋ’ ಅಭಿಯಾನದಡಿ ‘ಚಾಯ್ ಪೆ ಚರ್ಚಾ’ ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ನವೆಂಬರ್ 14, 2026ರ ಶನಿವಾರದಂದು ಮಧ್ಯಾಹ್ನ 3:45 ರಿಂದ 4:15 ರವರೆಗೆ ಆಯೋಜಿಸಲಾಗಿದೆ. ಮುಂಬೈ ಚಾಪ್ಟರ್ನ ಇಂಡಿಯನ್ ಕಾರ್ಡಿಯೋಲಾಜಿಕಲ್ ಸೊಸೈಟಿಯ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ಹೃದ್ರೋಗ ತಜ್ಞರು ಮತ್ತು ಶಿಕ್ಷಣ ತಜ್ಞರಾದ ಡಾ. ಸದಾನಂದ ಆರ್. ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ‘ಹೃದಯ ಮತ್ತು ಆರೋಗ್ಯ ರಕ್ಷಣೆ’ ಕುರಿತು ಮಾತನಾಡಲಿದ್ದು, ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ, ಯಾವ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸಬಾರದು ಮತ್ತು ಯಾವ ಜೀವನಶೈಲಿಯ ಬದಲಾವಣೆಗಳು ಹೃದಯವನ್ನು ರಕ್ಷಿಸಬಹುದು ಎಂಬಿತ್ಯಾದಿ ಪ್ರಮುಖ ಅಂಶಗಳ ಕುರಿತು ಚರ್ಚಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ವೈದ್ಯರೊಂದಿಗೆ ನೇರವಾಗಿ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಸಂವಾದ ನಡೆಸಲು ಅವಕಾಶವಿರುತ್ತದೆ.
Registration Mandatory!
Link for Registration: https://forms.gle/n1wNzK1xJ3tyPj117
.
.








































































