29.9 C
Mumbai
August 12, 2026
Mumbai News Kannada
ಸುದ್ದಿ

ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು





ಮಾರಿಷಸ್: ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಭಾಗವಹಿಸಲು ಮಾರಿಷಸ್ ಗೆ ಅಗಮಿಸಿರುವ ಶ್ರೀ ಪುತ್ತಿಗೆ ಶ್ರೀಗಳನ್ನು ಮಾರಿಷಸ್ ದೇಶದ ರಾಷ್ಟ್ರಪತಿಗಳಾದ ಶ್ರೀ ಧರಮ್ ಬೀರ್ ಗೋಕುಲ್ ಅವರು ರಾಷ್ಟ್ರಪತಿ ಭವನಕ್ಕೆ ಸ್ವಾಗತಿಸಿ ಸುಮಾರು ನಲವತ್ತು ನಿಮಿಷಗಳ ಕಾಲ ಪ್ರಸ್ತುತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ಪೂಜ್ಯ ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಭಾಗಿತ್ವದಿಂದ ಪ್ರಭಾವಿತರಾದ ರಾಷ್ಟ್ರಪತಿಯವರು ಉಡುಪಿ ಶ್ರೀಕೃಷ್ಣನ ಸ್ಥಾಪನೆಯ ಹಿನ್ನೆಲೆಯ ಮಧ್ವ ಸಿದ್ಧಾಂತದ ತಿರುಳನ್ನು ಶ್ರಿಗಳಿಂದ ತಿಳಿದುಕೊಂಡರು. ವಿಶ್ವದಾದ್ಯಂತ ಅಂತರ್ಮತೀಯ ಶಾಂತಿ ಸೌಹಾರ್ದತೆಗಾಗಿ ವಿಶ್ವ ಧಾರ್ಮಿಕ ನಾಯಕರ ಜೊತೆ ಶ್ರೀ ಪುತ್ತಿಗೆ ಶ್ರೀಗಳು ಕೈಜೋಡಿಸಿರುವುದನ್ನು ಶ್ಲಾಘಿಸಿದ ಮಾರಿಷಸ್ ರಾಷ್ಟ್ರಾಧ್ಯಕ್ಷರು ಮಾರಿಷಸ್ ನ ಪ್ರಜೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು. ಶ್ರೀಗಳಿಂದ ಅನುಗ್ರಹ ಪಡೆದ ಅವರು ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗಿಯಾಗಲು ಭಗವದ್ಗೀತೆಯ ಪುಸ್ತಕವನ್ನು ಸ್ವೀಕರಿಸಿದರು. ಭಾರತಕ್ಕೆ ಬಂದಾಗ ಉಡುಪಿಗೆ ಭೇಟಿ ನೀಡುವಂತೆ ಪೂಜ್ಯ ಶ್ರೀಗಳು ಅವರನ್ನು ಆಹ್ವಾನಿಸಿದರು.



Related posts

ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ

Mumbai News Desk

ವಿಶ್ವನಾಥ ಶೆಟ್ಟಿ ಇನ್ನಂಜೆ ವಿಧಿವಶ

Mumbai News Desk

ಪ್ರಗತಿಯ ಪಥದಲ್ಲಿ ಭಾರತ್ ಬ್ಯಾಂಕ್:  ಸೂರ್ಯಕಾಂತ್ ಜಯ ಸುವರ್ಣ 

Mumbai News Desk

ಹಾಸ್ಯ ನಟ ರಾಕೇಶ್‌ ಪೂಜಾರಿ ಮನೆಗೆ ಕೊನೆಗೂ ರಿಷಬ್‌ ಶೆಟ್ಟಿ ದಂಪತಿ ಭೇಟಿ

Mumbai News Desk

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (15/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk