September 4, 2026
Mumbai News Kannada
ಪ್ರಕಟಣೆ

ತೋನ್ಸೆ – ಹೂಡೆಯಲ್ಲಿ 10 ದಿನಗಳ ಉಚಿತ ‘ಫೂಟ್ ಪಲ್ಸ್ ಥೆರಪಿ’ ಆರೋಗ್ಯ ಶಿಬಿರ: ಜುಲೈ 22 ರಿಂದ ಚಾಲನೆ





ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ – ಹೂಡೆ, ಶ್ರೀ ದೇವಿ ಬಿಲ್ಲವ ಮಹಿಳಾ ಘಟಕ ತೋನ್ಸೆ – ಹೂಡೆ ಹಾಗೂ ಸಂಸ್ಥೆಯ ಸಹಯೋಗದೊಂದಿಗೆ ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ 10 ದಿನಗಳ ‘ಫೂಟ್ ಪಲ್ಸ್ ಥೆರಪಿ’ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಜುಲೈ 22, 2026ನೇ ಬುಧವಾರದಿಂದ ಆರಂಭಗೊಂಡು ಸುಮಾರು 10 ದಿನಗಳ ಕಾಲ ಹೂಡೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ.


ಯಾವುದೇ ಔಷಧವಿಲ್ಲದೇ ರಕ್ತ ಸಂಚಾರ ಹಾಗೂ ನರ ಸಂಬಂಧಿತ ಕಾಯಿಲೆಗಳಿಗೆ ಉಚಿತವಾಗಿ ನೀಡುವ ಈ ಥೆರಪಿಯನ್ನು 10 ವರ್ಷ ಮೇಲ್ಪಟ್ಟವರು ಮತ್ತು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರೂ ಸಹ ತಮ್ಮ ಉತ್ತಮ ಆರೋಗ್ಯ ಹಾಗೂ ಸೌಂದರ್ಯ ಕಾಯ್ದುಕೊಳ್ಳಲು ಉಪಯೋಗಿಸಬಹುದಾಗಿದೆ. ಪ್ರತಿದಿನ ಕೇವಲ 30 ನಿಮಿಷಗಳ ಕಾಲ ಈ ಥೆರಪಿ ಬಳಸುವುದರಿಂದ ಪಾದದಲ್ಲಿರುವ ಅಕ್ಯುಪ್ರೆಷರ್ ಪಾಯಿಂಟ್‌ಗಳು ಸಕ್ರಿಯಗೊಂಡು, ಮಾಂಸಖಂಡ ಹಾಗೂ ನರಗಳನ್ನು ಉತ್ತೇಜಿಸಿ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರವಾಗಲು ನೆರವಾಗುತ್ತದೆ.
ಬೆನ್ನು ನೋವು, ಕಾಲುಸೆಳೆತ, ಪಾದ ನೋವು, ಕುತ್ತಿಗೆ ನೋವು, ಭುಜ ನೋವು, ನಿದ್ರಾಹೀನತೆ, ಹಿಂಬಡಿ ನೋವು, ಥೈರಾಯ್ಡ್, ವೆರಿಕೇಸ್ ವೇನ್ಸ್, ಬೊಜ್ಜು ನಿವಾರಣೆ, ಊತ, ಸಂಧಿವಾತ, ಪಾರ್ಶ್ವವಾಯು, ಪಾರ್ಕಿನ್ಸನ್, ಸೋರಿಯಾಸಿಸ್, ಅಧಿಕ ರಕ್ತದೊತ್ತಡ, ಸರ್ವಿಕಲ್, ಸಕ್ಕರೆ ಕಾಯಿಲೆ ಮತ್ತು ಅದರಿಂದ ಬರುವ ಪಾದದ ಉರಿ ಹಾಗೂ ಮಾಂಸಖಂಡಗಳ ಸೆಳೆತ ಸೇರಿದಂತೆ ರಕ್ತಸಂಚಾರ ಸಂಬಂಧಿತ 120ಕ್ಕೂ ಹೆಚ್ಚು ಕಾಯಿಲೆಗಳಿಗೆ ಈ ಥೆರಪಿ ಉಪಯುಕ್ತವಾಗಿದೆ. ಸಾರ್ವಜನಿಕರು ಪ್ರತಿದಿನ ಅರ್ಧ ಗಂಟೆ ಭೇಟಿ ನೀಡಿ ಈ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.
ನೊಂದಾವಣಿ ಶುಲ್ಕ… ರೂ 200/ಒಮ್ಮೆ ಮಾತ್ರ.
ಹೆಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8073761734 ಅನ್ನು ಸಂಪರ್ಕಿಸಬಹುದು.



Related posts

ಕಲ್ಯಾಣ್‌ನಲ್ಲಿ ಇಂದು ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ

Mumbai News Desk

ದಶಂಬರ 20ರಂದು ಒಡಿಯೂರು ಶ್ರೀ ಸಂಸ್ಥಾನದಲ್ಲಿಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ

Mumbai News Desk

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ ಇದರ ಬೆಳ್ಳಿ ಹಬ್ಬದ ಸಲುವಾಗಿ ಜ.14 ರಂದು ಸಾರ್ವಜನಿಕ ಭಜನಾ ಕಾರ್ಯಕ್ರಮ

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk