29 C
Mumbai
September 24, 2026
Mumbai News Kannada
ಪ್ರಕಟಣೆ

ಆ. 10 ರಂದು ಬಂಟರ ಸಂಘ ಮುಂಬಯಿ ವಸಯಿ – ದಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ “ಆಟಿಡೊಂಜಿ ಬಂಟೆರ ಮಿನದನ” ಕಾರ್ಯಕ್ರಮ



ಮುಂಬಯಿ: ಬಂಟರ ಸಂಘ ಮುಂಬಯಿಯ ವಸಯಿ – ದಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ಸಾಂಪ್ರದಾಯಿಕ “ಆಟಿಡೊಂಜಿ ಬಂಟೆರ ಮಿನದನ” ಕಾರ್ಯಕ್ರಮವು ಆಗಸ್ಟ್ 10 ರಂದು ಸಂಜೆ 5 ಗಂಟೆಗೆ ನಲ್ಲಾಸೋಪಾರಾ ಪಶ್ಚಿಮದ ಎಸ್.ಟಿ. ಡಿಪೋ ಬಳಿಯಿರುವ ಹೋಟೆಲ್ ಗ್ಯಾಲಕ್ಸಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಬಂಟ ಸಮುದಾಯದ ಮಹಿಳೆಯರು ಒಂದೆಡೆ ಸೇರಿ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಸವಿಯುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ್ ಎನ್. ಶೆಟ್ಟಿ ಕೊಡ್ಲಾಡಿ ಮತ್ತು ಮಹಿಳಾ ಕಾರ್ಯಾಧ್ಯಕ್ಷೆ ಅರುಣಾ ಶೆಟ್ಟಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಲ್ಲಾರ್ ಹಾಗೂ ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ ಪಾಲ್ಗೊಳ್ಳಲಿದ್ದಾರೆ.

ಈ ಸಮಾರಂಭದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿ.ಎ. ರಮೇಶ್ ಬಿ. ಶೆಟ್ಟಿ, ಪಶ್ಚಿಮ ವಲಯ ಸಮನ್ವಯಕರಾದ ಕಾಂದೇಶ್ ಭಾಸ್ಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಹರೀಶ್ ಪಾಂಡು ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಕಾರ್ಯದರ್ಶಿ ಜಗನ್ನಾಥ್ ಡಿ. ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಷ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವರ್ಷಾ ಎಸ್. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ವಿಜಯ್ ಪಿ. ಶೆಟ್ಟಿ, ಮಹಿಳಾ ವಿಭಾಗದ ಪರವಾಗಿ ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಶಶಿಕಲಾ ಎಸ್. ಶೆಟ್ಟಿ, ಸಂಚಾಲಕಿ ಉಷಾ ಎಸ್. ಶೆಟ್ಟಿ, ಉಪಾಧ್ಯಕ್ಷೆ ಸಹಾನಾ ಶೆಟ್ಟಿ, ಕಾರ್ಯದರ್ಶಿ ಸಂಧ್ಯಾ ವಿ. ಶೆಟ್ಟಿ, ಕೋಶಾಧಿಕಾರಿ ಜಯಶ್ರೀ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಭಾ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಸಂಧ್ಯಾ ಯು. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಜಯಾ ಎ. ಶೆಟ್ಟಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಎಲ್ಲಾ ಉಪ ಸಮಿತಿಗಳ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ 60ನೇ ವಜ್ರ ಮಹೋತ್ಸವ ದಸರಾ ಆಚರಣೆ

Mumbai News Desk

ದಿ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ) ಮುಂಬಯಿ. ನಾಳೆ (ಸೆ. 16) ವಿಶ್ವಕರ್ಮ ಮಹೋತ್ಸವ.

Mumbai News Desk

ಅ. 4, ಬಿಲ್ಲವರ ಎಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವ

Mumbai News Desk

ಕುಲಾಲ ಸಂಘ ಮುಂಬಯಿಯ ಕೇಂದ್ರ ಕಾರ್ಯಾಲಯದಲ್ಲಿ  ಗುರು ಪೂರ್ಣಿಮೆ ಆಚರಣೆ.

Mumbai News Desk

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk