November 5, 2026
Mumbai News Kannada
ಪ್ರಕಟಣೆ

ನ.8, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 56ನೇ ವಾರ್ಷಿಕ ಮಹಾಪೂಜೆ.









ಮುಂಬಯಿ, ನ.1: ಧಾರ್ಮಿಕ ಸೇವೆಯೊಂದಿಗೆ ಶೈಕ್ಷಣಿಕ, ವೈದ್ಯಕೀಯ ಹಾಗೂ ಆರ್ಥಿಕ ಸೇವೆಯಲ್ಲಿ ನಿರತ ಕಾಲಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ 56ನೇ ವಾರ್ಷಿಕ ಮಹಾ ಪೂಜೆಯು ಆದಿತ್ಯವಾರ ನ.8ರಂದು ಕಾಲಘೋಡಾದ ಡೇವಿಡ್ ಸ್ಪೂನ್ ಲೈಬ್ರರಿ ಮಾರ್ಗದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಮೀಪದಲ್ಲಿ ನಡೆಯಲಿದೆ.


ಅಂದು ಬೆಳಿಗ್ಗೆ ಗಂಟೆ 9.30ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಭಜನೆ ಹಾಗೂ ಮಧ್ಯಾಹ್ನ 12ರಿಂದ ಮಹಾಪೂಜೆ, ಮಹಾಆರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.




ತದನಂತರ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುವುದು.


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷ ಮಾಧವ ಎಸ್.ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರೊ.ಕೇಶವ ಎಚ್.ಕರ್ಕೇರ , ಕೋಶಾಧಿಕಾರಿ ರವೀಂದ್ರ ಡಿ.ಶೇಣವ ಹಾಗೂ ಪದಾಧಿಕಾರಿಗಳು, ಟ್ರಸ್ಟಿಗಳು, ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.













.

.

.

.



Related posts

ಪಲಾವಾ ಕನ್ನಡಿಗರ ಫೌಂಡೇಶನ್ ಪಲಾವಾ, ಡೊಂಬಿವಲಿ : ನ. 30ಕ್ಕೆ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ಅ. 10 ರಂದು 25ನೇ ವಾರ್ಷಿಕ  ಮಹಾಸಭೆ,  

Mumbai News Desk

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ ; ದೇವಿಯ ವಾರ್ಷಿಕ ಮಹೋತ್ಸವ ಶುಕ್ರವಾರದಿಂದ ಆರಂಭ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಅಗಸ್ಟ್ 15 ರಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

Mumbai News Desk

ರಾಜಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವಾರ್ಷಿಕ ಸಭೆ

Mumbai News Desk

ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

Mumbai News Desk