
ಮುಂಬಯಿ : ಸಮಾಜ ಸೇವಕಿ ಶ್ರೀಮತಿ ನಿಕ್ಕಿ ರೆಡ್ಡಿ ಹಾಗೂ ಪೂರ್ಣಿಮಾ ಕಾಮತ್ ಅವರ ಹಸ್ತ ದಿಂದ ಮತ್ತು (ಸಹಕಾರ ದಿಂದ) My Healthskape Medicals Pvt Ltd ಅವರು (ನಾಲ್ಕು ವರ್ಷಗಳಿಂದ) ಕೊಡುವ ಶ್ರೀ ಸರಸ್ವತಿ ರಾತ್ರೀ ಶಾಲೆ ಮತ್ತು ಕಾಲೇಜು ಮಕ್ಕಳಿಗೆ ಟೆಸ್ಟ್ ಬುಕ್ ಹಾಗೂ ನೋಟ್ ಬುಕ್ ವಿತರಣೆ ಇತರೆ ಶೈಕ್ಷಣಿಕ ಸಾಹಿತ್ಯ ದ ವಿತರಣೆ ಸಮಾರಂಭ
ಹಾಗೂ ಜಯಲಕ್ಷ್ಮಿ ದೇಸಾಯಿ ಮೇಡಂ ಅವರ ಸಹಕಾರ ದಿಂದ 8,9,10 ನೇ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮತ್ತು ಗಣಿತದಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಭುವನೇಶ್ವರಿ ಎಜುಕೇಷನ್ ಸೊಸೈಟಿ ಮೂಲಕ ಗೋರೆಗಾಂವ್ ಪ್ರದೇಶದಲ್ಲಿ 1971ರಲ್ಲಿ ಶ್ರೀ ಸರಸ್ವತಿ ರಾತ್ರೀ ಶಾಲೆಯನ್ನು ಡಾ.ಲಲಿತಾರಾವ್ ಹಾಗೂ ವಸಂತ ಕುಮಾರ್ .ಕೆ ವಿನೋದಾ ಪೂಜಾರಿ ಅವರ ಸಹಕಾರ ದಿಂದ ಕೆ.ಕೆ.ಪುಜಾರಿ ಸರ್ ಅವರು ಆರಂಭಿಸಿದರು. ಕೆ.ಕೆ. ಪೂಜಾರಿ ದಂಪತಿಗಳ ಕಾರ್ಯ ವೈಖರಿ, ಶಿಸ್ತು ಮತ್ತು ಪ್ರಗತಿಯನ್ನು ಕಂಡು 1979 ರಲ್ಲಿ ಜುನಿಯರ್ ಕಾಲೇಜು ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಅಂದಿನಿಂದ ಇಂದಿನವರೆಗೂ ಕೆ.ಕೆ. ಪುಜಾರಿ ದಂಪತಿಗಳ ಸಹಕಾರದಿಂದ ಶ್ರೀ ಸರಸ್ವತಿ ರಾತ್ರೀ ಶಾಲೆ ಮತ್ತು ಕಾಲೇಜು ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಸಾಂಗವಾಗಿ ನಡೆಸಿ ಕೊಂಡು ಬರುತಿದೆ.
ಇಂದು ಕೆ.ಕೆ. ಪುಜಾರಿ ಸರ್ ನಮ್ಮೋಂದಿಗೆ ಇಲ್ಲ. 16-01-2026ರಂದು ನಮ್ಮನ್ನು ಅಗಲಿದ್ದು , ಅವರ ನಿಧನ ಶಿಕ್ಷಣ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವೆಂದೇ ಹೇಳಬಹುದು.
ಅವರ ಹಾಗೆ ಬಡಮಕ್ಕಳ ಶಿಕ್ಷಣಕ್ಕಾಗಿ ಜೀವನ ಸವೆಸುವವರು ಸಿಗುವುದು ಅಪರೂಪ. ಅವರ ಶೈಕ್ಷಣಿಕ ಕಾರ್ಯ ನೆನೆಯುತ್ತ
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಇಂದು ನಾವು ಎರಡು ನಿಮಿಷ ಮೌನ ಆಚರಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮ ಮುಕ್ತಾಯಗೊಂಡಿತು.




