September 23, 2026
Mumbai News Kannada
ಮುಂಬಯಿ

ನವಿ ಮುಂಬಯಿ ಕನ್ನಡ ಸಂಘದಿಂದ ಶ್ರೀಕೃಷ್ಣ ವೇಷ ಸ್ಪರ್ಧೆ



ಭಾಷೆ, ಸಂಸ್ಕೃತಿಯನ್ನು ಉಳಿಸುವಲ್ಲಿ ಸಂಘ-ಸಂಸ್ಥೆಗಳ ಸೇವಾ ಕಾರ್ಯ ಅನನ್ಯ: ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ

ನವಿ ಮುಂಬಯಿ: ನವಿ ಮುಂಬಯಿ ಕನ್ನಡ ಸಂಘ ವಾಶಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷ ಆಯೋಜಿಸುತ್ತಿರುವ ಎಚ್.ಬಿ.ಎಲ್. ರಾವ್ ಸ್ಮರಣಾರ್ಥ ಶ್ರೀಕೃಷ್ಣ ವೇಷ ಸ್ಪರ್ಧೆಯು ಸಂಘದ ಸಭಾಗೃಹದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ವ್ರತದ ಪ್ರಯುಕ್ತ ವಾಶಿಗೆ ಆಗಮಿಸಿದ್ದ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಸಂಘಕ್ಕೆ ಭೇಟಿ ನೀಡಿ, ಆಶೀರ್ವಚನ ನೀಡುವುದರೊಂದಿಗೆ ಭಕ್ತರಿಗೆ ಮಂತ್ರಾಕ್ಷತೆ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, “ನವಿ ಮುಂಬಯಿ ನಗರದಲ್ಲಿ ಕನ್ನಡಿಗರ ಸಂಘ-ಸಂಸ್ಥೆಗಳು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಅನನ್ಯವಾದ ಸೇವೆ ಸಲ್ಲಿಸುತ್ತಿವೆ. ಬದುಕಿನಲ್ಲಿ ಧಾರ್ಮಿಕತೆ ಅಗತ್ಯವಿದ್ದು, ಅದರಿಂದ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಧರ್ಮ ಜಾಗೃತವಾಗಬೇಕಿದ್ದರೆ ನಾವೆಲ್ಲರೂ ಸತ್ಕರ್ಮಗಳನ್ನು ಮಾಡಬೇಕು. ಈ ಸಂಘದ ಮೂಲಕ ಇನ್ನಷ್ಟು ಜನಪರ ಸೇವೆಗಳು ನಡೆಯಲಿ, ಶ್ರೀಕೃಷ್ಣನು ಎಲ್ಲರಿಗೂ ಅನುಗ್ರಹಿಸಲಿ” ಎಂದು ಆಶೀರ್ವದಿಸಿದರು.

ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದ ಪುರೋಹಿತರಾದ ಗುರುಪ್ರಸಾದ್ ಭಟ್ ಅವರು ಸ್ವಾಮೀಜಿಯವರ ಪರಿಚಯ ಮಾಡಿಕೊಟ್ಟರು.

ಸ್ಪರ್ಧೆಯಲ್ಲಿ ನವಿ ಮುಂಬಯಿ ಪರಿಸರದ ಹಲವಾರು ಮಕ್ಕಳು ಮುದ್ದು ಕೃಷ್ಣ, ಬಾಲಕೃಷ್ಣ ಹಾಗೂ ಶ್ರೀಕೃಷ್ಣ ವೇಷ ವಿಭಾಗಗಳಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೃಷ್ಣ ಶ್ಲೋಕ, ಕೃಷ್ಣ ಗಾಯನ ಮತ್ತು ಕೃಷ್ಣ ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು. ತೀರ್ಪುಗಾರರಾಗಿ ಮುಂಬಯಿಯ ಹಿರಿಯ ಕಲಾವಿದರಾದ ಶೈಲೇಶ್ ಪುತ್ರನ್ ಹಾಗೂ ಡಾ. ಪಿ.ಜಿ. ವಿಮಲಾ ಅವರು ಸಹಕರಿಸಿದರು.

ಕನ್ನಡ ಕಲಾಕೇಂದ್ರದ ಅಧ್ಯಕ್ಷ ಹಾಗೂ ನವಿ ಮುಂಬಯಿ ಕನ್ನಡ ಸಂಘದ ಉಪಾಧ್ಯಕ್ಷರಾದ ಟಿ.ಆರ್. ಮಧುಸೂದನ್ ಅವರು ಸ್ಪರ್ಧಾರ್ಥಿಗಳನ್ನು ಹುರಿದುಂಬಿಸುತ್ತಾ ಕಾರ್ಯಕ್ರಮ ನಿರೂಪಿಸಿದರು. ಬಹುಮಾನಗಳ ಪ್ರಾಯೋಜಕತ್ವವನ್ನು ಉಪಾಧ್ಯಕ್ಷರಾದ ಸುಜಾತಾ ರಾವ್ ವಹಿಸಿದರೆ, ದಹಿ ಹಂಡಿ ಕಾರ್ಯಕ್ರಮದ ಬಹುಮಾನವನ್ನು ಗೌರವಾಧ್ಯಕ್ಷರಾದ ಗೋಪಾಲ್ ವೈ. ಶೆಟ್ಟಿ ಅವರು ಪ್ರಾಯೋಜಿಸಿದರು. ಎಚ್.ಬಿ.ಎಲ್. ರಾವ್ ಸ್ಮರಣಾರ್ಥ ಪ್ರಾಯೋಜಕತ್ವವನ್ನು ಹಾಗೂ ಕಲಾವಿದರಿಗೆ ಲಡ್ಡು ಪ್ರಸಾದವನ್ನು ಉದಯ ಭಟ್ ನೀಡಿ ಸಹಕರಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್ ರೈ ಧನ್ಯವಾದ ಸಮರ್ಪಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕೊನೆಯಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಚಂದನ್ ಗೌಡ ಶೇ.89.80  ಅಂಕ.

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿ ಶೀರೂರು ಪರ್ಯಾಯೋತ್ಸವ – 2026 ಪೂರ್ವಭಾವಿ ಸಭೆ

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ಕಾಪು ಮೊಗವೀರ ಮಹಾಸಭಾ, ಮುಂಬಯಿ ಇದರ 85 ನೇ ವಾರ್ಷಿಕ ಮಹಾಸಭೆ

Mumbai News Desk

ಮುಂಬೈ :ದಹಿಸರ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ವಿವೇಕಾನಂದರ ಆದರ್ಶಗಳ ಸ್ಮರಣೆ

Mumbai News Desk

ಸ್ವಾಮಿ ನಿತ್ಯಾನಂದಮಂದಿರ ಬೊಯಿಸರ್ ನಲ್ಲಿ ದೇವೀ ಜಪಪಾರಾಯಣ ಸಂಪನ್ನ

Mumbai News Desk