31 C
Mumbai
October 1, 2026
Mumbai News Kannada
ಕರ್ನಾಟಕ

ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ ಸನ್ಮಾನ



ಉಡುಪಿ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಸೆ. ೨೭ರಂದು ನಡೆದ ‘ವಿಶ್ವ ಪ್ರವಾಸೋದ್ಯಮಕ್ಕೆ ಅಖಂಡ ಕರ್ನಾಟಕದ ಕೊಡುಗೆ’ ಕುರಿತ ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಷ್ಟ್ರಮಟ್ಟದ ೭೬ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದಲ್ಲಿ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಚಿತ್ರದುರ್ಗ ಶ್ರೀ ಚಲುವಾದಿ ಮಹಾಸಂಸ್ಥಾನ ಚಲುವಾದಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವನಾಗಿದೇವ ಶರಣರು ಮಾತನಾಡಿ, ಆಧ್ಯಾತ್ಮಿಕತೆ, ಶಿಕ್ಷಣ ಹಾಗೂ ಸಮಾಜ ಸೇವೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂವರ್ಧನೆಗೆ ಶ್ರೀ ರಮಾನಂದ ಗುರೂಜಿಯವರು ಸಲ್ಲಿಸುತ್ತಿರುವ ಸೇವೆ ಅನುಕರಣೀಯವಾದುದು ಎಂದು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡಪರ ಹೋರಾಟಗಾರ ಮಾಯಣ್ಣ ಅವರು, ಧರ್ಮದ ಸಂದೇಶವನ್ನು ಸಮಾಜಮುಖಿ ಚಿಂತನೆಯೊಂದಿಗೆ ಬೆಸೆದು ಶಿಕ್ಷಣಕ್ಕೆ ಪ್ರೋತ್ಸಾಹ, ಜನಪರ ಕಾಳಜಿ ಹಾಗೂ ವಿವಿಧ ಸಮಾಜ ಸೇವಾ ಕಾರ್ಯಗಳ ಮೂಲಕ ಸಮಾಜದ ಒಳಿತಿಗೆ ನಿರಂತರವಾಗಿ ಶ್ರಮಿಸುತ್ತಿರುವ ರಮಾನಂದ ಗುರೂಜಿಯವರ ಸೇವಾ ಸಮರ್ಪಣೆ, ಸರಳತೆ ಮತ್ತು ಧೀಮಂತ ವ್ಯಕ್ತಿತ್ವ ಇತರರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಚಲನಚಿತ್ರ ನಟಿ ಮೀನಾ ಮಾತನಾಡಿ, ಚಲನಚಿತ್ರ ಹಾಗೂ ಧಾರಾವಾಹಿ ಕ್ಷೇತ್ರದಲ್ಲಿ ಕಲಾವಿದೆಯಾಗಿ ಯಶಸ್ಸು ಸಾಧಿಸುವಲ್ಲಿ ರಮಾನಂದ ಗುರೂಜಿಯವರ ಮಾರ್ಗದರ್ಶನ ಹಾಗೂ ಆಶೀರ್ವಾದ ಮಹತ್ವದ ಪಾತ್ರ ವಹಿಸಿದೆ. ಅವರ ಪ್ರೋತ್ಸಾಹ ಹಾಗೂ ಹಿತನುಡಿಗಳು ಕಲಾ ಪಯಣದಲ್ಲಿ ಸದಾ ಆತ್ಮವಿಶ್ವಾಸ ತುಂಬಿವೆ ಎಂದು ಸ್ಮರಿಸಿದರು.

ಸುರ್ವೆ ಕಲ್ಚರಲ್ ಅಕಾಡೆಮಿಯ ಮಾರ್ಗದರ್ಶಕ ರಮೇಶ ಸುರ್ವೆ ಮಾತನಾಡಿ, ನಾಸ್ತಿಕ ಮನೋಭಾವದಿಂದ ಆಸ್ತಿಕತೆಯೆಡೆಗೆ ನನ್ನನ್ನು ಕರೆದೊಯ್ದು, ಬದುಕಿನ ಮೌಲ್ಯಗಳನ್ನು ಅರಿತು ಅಳವಡಿಸಿಕೊಳ್ಳುವಂತೆ ಮಾಡಿದವರು ರಮಾನಂದ ಗುರೂಜಿಯವರು. ಅವರ ಸಲಹೆ, ಮಾರ್ಗದರ್ಶನ ಹಾಗೂ ಹಿತನುಡಿಗಳು ನನ್ನ ಬದುಕಿಗೆ ದಾರಿದೀಪವಾಗಿ ಉತ್ತಮ ಬದುಕಿನತ್ತ ಮುನ್ನಡೆಸಿವೆ ಎಂದು ಹೇಳಿದರು.

ಮಾಜಿ ಶಾಸಕ ಡಾ. ನೆ.ಲ. ನರೇಂದ್ರಬಾಬು ಬೆಂಗಳೂರು, ಚಲನಚಿತ್ರ ನಟರಾದ ಶಂಕರ ಭಟ್, ಗಣೇಶ ರಾವ್ ಕೇಸರ್ಕರ್, ರಂಗಭೂಮಿ ಕಲಾವಿದೆ ಆಶಾ ಡೇನಿಯಲ್, ಅಕಾಡೆಮಿ ಅಧ್ಯಕ್ಷ ಕಿಶನ್ ಸುರ್ವೆ, ಪದಾಧಿಕಾರಿಗಳು, ಸದಸ್ಯರು, ಗಣ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.



Related posts

ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ

Mumbai News Desk

ಕರ್ನಾಟಕ SSLC ಫಲಿತಾಂಶ 2026 ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ, ಉಡುಪಿ ದ್ವಿತೀಯ ಮತ್ತು ಕಲಬುರಗಿ ಕೊನೆಯ ಸ್ಥಾನ

Mumbai News Desk

ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ರಾಜ್ಯ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Mumbai News Desk

ಕರ್ನಾಟಕ : ಹೈಕಮಾಂಡ್‌ ತೀರ್ಮಾನವೇ ಅಂತಿಮ, ಇದೇ ನಮ್ಮಿಬ್ಬರ ಮಂತ್ರ: ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ-ಡಿಸಿಎಂ ಘೋಷಣೆ

Mumbai News Desk

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತ: ಉಪಹಾರ ಸಭೆಯಲ್ಲಿ ರಾಜೀನಾಮೆ ಘೋಷಿಸಿದ ಸಿದ್ದರಾಮಯ್ಯ

Mumbai News Desk

ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮೇಜರ್ ಟ್ವಿಸ್ಟ್, ಮಾಸ್ಕ್ ಮ್ಯಾನ್ ಅರೆಸ್ಟ್.

Mumbai News Desk