35 C
Mumbai
October 3, 2026
Mumbai News Kannada
ಪ್ರಕಟಣೆ

ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ಬಿಜೂರುಅ. 4 ರಂದು ಗರಡಿಯ ಜೀರ್ಣೋದ್ಧಾರದ ಕುರಿತು ಸಮಾಲೋಚನ ಸಭೆ



ಮುಂಬಯಿ, ಅ.2 : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 66 ನೇ ಗರಡಿ ಹಾಗೂ ಉತ್ತರ ತುದಿಯ ಕೊನೆಯ ಗರಡಿಯಾಗಿರುವ ಬೈಂದೂರು ತಾಲೂಕು ಬಿಜೂರಿನಲ್ಲಿರುವ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯು ಶತ ಶತಮಾನಗಳ ಇತಿಹಾಸ ಹೊಂದಿರುತ್ತದೆ. 800 ವರ್ಷಗಳ ಹಿಂದೆ ಪಂಜುರ್ಲಿ ಗರಡಿಯಾಗಿದ್ದ ಈ ಕ್ಷೇತ್ರವು ನಂತರ ಸುಮಾರು 450 ವರ್ಷಗಳ ಹಿಂದೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯಾಗಿ ಪ್ರಸಿದ್ಧಿ ಪಡೆದಿರುತ್ತದೆ. ಇತ್ತೀಚೆಗೆ ಭಕ್ತಾದಿಗಳೆಲ್ಲ ಸೇರಿ ಅಷ್ಟಮಂಗಲ ಪ್ರಶ್ನೆಯ ಮೂಲಕ ಚಿಂತನೆ ನೆಡೆಸಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಗರಡಿಯ ಜೀರ್ಣೋದ್ಧಾರ ಮಾಡುವ ಮಹತ್ಕಾರ್ಯದ ಸಂಕಲ್ಪ ಮಾಡಿರುತ್ತಾರೆ.
ಅಂತೆಯೇ ಈಗ ಗರಡಿಯ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇರುವುದರಿಂದ ನಿಧಿ ಸಂಗ್ರಹಿಸುವ ಸಲುವಾಗಿ ಮತ್ತು ಜೀರ್ಣೋದ್ಧಾರ ಕಾರ್ಯದ ಮಾಹಿತಿ ಹಂಚಿಕೊಳ್ಳಲು ಅಕ್ಟೋಬರ್ 4 ರಂದು ರವಿವಾರ ಬೆಳಿಗ್ಗೆ ಗಂಟೆ 10-30 ಕ್ಕೆ ಸರಿಯಾಗಿ ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗದಲ್ಲಿರುವ ಬಿಲ್ಲವ ಭವನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್. ಟಿ. ಪೂಜಾರಿ ಮತ್ತು ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ನೇತ್ರತ್ವದಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.
ಆದುದರಿಂದ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಸಮಸ್ತ ದೈವ ಭಕ್ತರು, ಉದ್ಯಮಿಗಳು, ಹಿತೈಷಿಗಳು, ನಂಬಿದ ಕುಟುಂಬಸ್ಥರು ಹಾಗೂ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ದೈವಗಳ ಆರಾಧಕರು ಈ ಸಮಾಲೋಚನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಜೀರ್ಣೋದ್ಧಾರ ಕಾರ್ಯದ ಕುರಿತು ತಮ್ಮ ಅಮೂಲ್ಯ ಸಲಹೆ ಸಹಕಾರ ನೀಡಬೇಕಾಗಿ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್. ಟಿ. ಪೂಜಾರಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹಾಗೂ ಮತ್ತಿತರ ಪದಾಧಿಕಾರಿಗಳು ಮತ್ತು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.



Related posts

ಜುಲೈ 26 ರಂದು ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ, ಸತ್ಸಂಗ

Mumbai News Desk

  ಪುಣೆ  ‌:ಸುಂದರ ಪೂಜಾರಿ ಕಾಣೆಯಾಗಿದ್ದಾರೆ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಜ. 5ರಂದು ವಾರ್ಷಿಕ ಸ್ನೇಹ ಮಿಲನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಮುಂಬೈನಲ್ಲಿ ಸೆಪ್ಟೆಂಬರ್ 27ರಂದು ಪದ್ಮಶಾಲಿ ಸಮಾಜ ಸೇವಾ ಸಂಘದ ತ್ರಿವಿಧ ಮಹಾಸಭೆ ಹಾಗೂ ವಾರ್ಷಿಕ ದಿನಾಚರಣೆ (ಕಲಾ ತಪಸ್ವಿ ಪ್ರಶಸ್ತಿ ಪ್ರಧಾನ, ಸಾಂಸ್ಕೃತಿಕ ಕಾರ್ಯಕ್ರಮ)

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ(ರಿ) ಮುಂಬಯಿ : ಫೆ. 16 ರಂದು “ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ”

Mumbai News Desk