
ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರದ್ಧಾ ಭಕ್ತಿಯ ಜೊತೆಗೆ ಆಧ್ಯಾತ್ಮಿಕ ಚಿಂತನೆ ಬೆಳೆಯಬೇಕು : ಕಣಂಜಾರು ಕೊಳಕೆ ಬೈಲು ಪ್ರದೀಪ್ ಶೆಟ್ಟಿ
ಬೊರಿವಲಿ ಜಯರಾಜ್ ನಗರದ ವಜೀರನಾಕ ಶ್ರೀ ಕ್ಷೇತ್ರ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಮಹಾಪೂಜೆಯು ಡಿಸೆಂಬರ್ 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30 ರಿಂದ ವಿದ್ವಾನ್ ಧರೆಗುಡ್ಡೆ ಶ್ರೀನಿವಾಸ ಭಟ್ ಮತ್ತು ಅರ್ಚಕ ವೃಂದದ ನೇತೃತ್ವದಲ್ಲಿ ಕಲಶ ಪ್ರತಿಷ್ಠೆ ಕಲ್ಪೋಕ್ತ ಪೂಜೆ ನೆರವೇರಿದ ಬಳಿಕ ಮಹಾಪೂಜೆ ಮಂಗಳಾರತಿ ಜರುಗಿತು.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳೆಕೆ ಬೈಲು ಪ್ರದೀಪ್ ಸಿ ಶೆಟ್ಟಿ ಧಾರ್ಮಿಕತೆಯಲ್ಲಿ ಶ್ರದ್ಧೆ,ಭಕ್ತಿ ಜೊತೆಗೆ ಶಿಸ್ತು ಬೆಳೆದಾಗ ಧಾರ್ಮಿಕ ಕ್ಷೇತ್ರಗಳು ಆಧ್ಯಾತ್ಮಿಕ ತಾಣವಾಗಿ ಪರಿವರ್ತನೆಗೊಳ್ಳಲು ಸಾಧ್ಯ. ಆಧ್ಯಾತ್ಮಿಕ ಬದುಕಿನಲ್ಲಿ ಪುಣ್ಯವನ್ನು ಸಂಪಾದಿಸುವ ಅವಕಾಶ ಇಂಥ ಧಾರ್ಮಿಕ ಕಾರ್ಯದಿಂದ ಸಾಧ್ಯ. ಮನುಷ್ಯ ಜನ್ಮದ ಶ್ರೇಷ್ಠತೆ ಪಡೆದ ಪ್ರತಿಯೊಬ್ಬರು ತನ್ನ ದೈನಂದಿನ ಬದುಕಿನ ಅಲ್ಪಸಮಯವನ್ನು ಭಗವಂತನಿಗೆ ಮುಡಿಪಾಗಿಡಬೇಕು. ದೇವಸ್ಥಾನದ ವತಿಯಿಂದ ಜರುಗಿದ ಇಂದಿನ ಸಾರ್ವಜನಿಕ ಶನಿ ಪೂಜೆಯ ಪ್ರತಿಫಲಾಪೇಕ್ಷೆ ಸರ್ವ ಭಕ್ತರಿಗೆ ಲಭಿಸಲಿ ಎಂದು ಹಾರೈಸಿದರು.


ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಪೂರೈಸಿ ಭಕ್ತರನ್ನು ಆಶೀರ್ವದಿಸಿದ ವಿದ್ವಾನ್ ಧರೆಗುಡ್ಡೆ ಶ್ರೀನಿವಾಸ ಭಟ್ ಮನುಷ್ಯ ಜೀವನ ಒಂದು ಅವಕಾಶ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಮ್ಮಲ್ಲಿ ಧರ್ಮದ ಜಾಗೃತಿಯನ್ನು ಮೂಡಿಸಿ ನಮ್ಮ ಪೀಳಿಗೆಯೂ ಕೂಡ ಧರ್ಮದ ಪಥದಲ್ಲಿ ಸಾಗಬೇಕು ಎನ್ನುವ ಚಿಂತನೆ ಇಂದಿನ ದೇಶದ ವ್ಯವಸ್ಥೆಯಲ್ಲಿ ಭದ್ರಗೊಳಿಸಿದೆ. ಆ ಮೂಲಕ ದೇಶದಲ್ಲಿ ಹಿಂದೂ ಸಂಸ್ಕೃತಿ ಸನಾತನ ಧರ್ಮ ಭದ್ರತೆಯಲ್ಲಿ ಉಳಿದಿದೆ. ದೇಶದಲ್ಲಿ ಸಂಸ್ಕೃತಿ ಧಾರ್ಮಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲ
ರೂ ಕಟಿಬದ್ದರಾಗಿರಬೇಕು. ದೇವರಲ್ಲಿ ನಾವು ಎಷ್ಟು ಭಕ್ತಿ ಮಾಡಿದರು ಕಡಿಮೆ. ಕರ್ಮಾನುಸಾರವಾಗಿ ಒಳ್ಳೆಯ ಧರ್ಮಾಚರಣೆಯನ್ನು ಮಾಡಿಕೊಂಡು ಬದುಕುವ ನಾವು ಭಗವಂತನ ಭಕ್ತಿಗೆ ಅಧೀನರಾಗಿರಬೇಕು. ಶ್ರೇಷ್ಠ ಮನುಷ್ಯ ಜನ್ಮದಲ್ಲಿ ಹುಟ್ಟಿದ ನಾವು ಭಗವಂತನ ಆರಾಧನೆಯಲ್ಲಿ ಬದುಕುವ ಅವಕಾಶದೊಂದಿಗೆ ಇಂದಿನ ಈ ಶನಿ ಪೂಜೆಯು ಸರ್ವತ್ರ ಅಭಯ ಆಶೀರ್ವಾದ ಸರ್ವ ಸದ್ಭಕ್ತರಿಗೆ ದೊರೆಯಲಿ ಎಂದು ಆಶೀರ್ವದಿಸಿದರು.

ಮಹಾಪೂಜೆ ಮಹಾರತಿ ಜರುಗಿದ ಬಳಿಕ ಭಕ್ತರಿಗೆ ಪ್ರಸಾದ ನೀಡಲಾಯಿತು ಆ ಬಳಿಕ ಅನ್ನ ಸಂತರ್ಪಣೆ ಜರುಗಿತು. ದೇವಸ್ಥಾನದ ಪರಿವಾರ ಸದಸ್ಯ ಸ್ಥಾಪಕ ಮೋಕ್ತೇಸರ ಕಲ್ಲಮುಂಡ್ಕೂರು ಹರಿಯಾಳಗುತ್ತು ಶ್ರೀಮತಿ ಮತ್ತು ಶ್ರೀ ಜಯರಾಜ್ ಶ್ರೀಧರ್ ಶೆಟ್ಟಿ, ಶಾಲಿನಿ ಪ್ರದೀಪ್ ಶೆಟ್ಟಿ ಪರಿವಾರ ಸದಸ್ಯರು, ಮೊಕ್ತೇಸರರಾದ ಜಯಪಾಲಿ ಅಶೋಕ್ ಶೆಟ್ಟಿ ಬೆಳ್ಮ ಣ್ಣು ವೆಂಕಟರಮಣ ತಂತ್ರಿ ಅರ್ಚಕ ವೃಂದ ದೇವಸ್ಥಾನದ ಆಡಳಿತ ಮಂಡಳಿ ಮಹಿಷಮರ್ಧಿನಿ ದೇವಸ್ಥಾನ ಭಜನ ಮಂಡಳಿ ಸದಸ್ಯರು ಬಂಟರ ಸಂಘ ಮುಂಬೈ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ವಿನೋದಾ ಡಿ ಶೆಟ್ಟಿ, ಮಹಿಳಾ ಸದಸ್ಯರು ದೇವಸ್ಥಾನದ ಧಾರ್ಮಿಕ ಹಿತೈಷಿಗಳು, ದಾನಿಗಳು ಹಾಗೂ ಅಧಿಕ ಸಂಖ್ಯೆಯಲ್ಲಿ ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.