33 C
Mumbai
October 5, 2026
Mumbai News Kannada
ಪ್ರಕಟಣೆ

ದಹಿಸರ್ ಪೂರ್ವ ರಾವಲ್ಪಾಡ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರ: ಅ.11 ರಿಂದ 27ನೇ ವರ್ಷದ ನವರಾತ್ರಿ ಉತ್ಸವ



ಮುಂಬಯಿ: ದಹಿಸರ್ ಪೂರ್ವದ ರಾಧಾಕೃಷ್ಣ ನಗರ, ಎಸ್. ಎನ್. ದುಬೆ ಮಾರ್ಗ, ರಾವಲ್ಪಾಡದಲ್ಲಿ ಸರಿಸುಮಾರು 26 ವರ್ಷಗಳ ಹಿಂದೆ ಚೆನ್ನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಅ.11 ರಿಂದ ಅ.19 ರ ವರೆಗೆ 27ನೇ ವರ್ಷದ ನವರಾತ್ರಿ ಉತ್ಸವವು ಜರುಗಲಿದೆ.

ಅ.11 ರಂದು ಘಟಸ್ಥಾಪನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಅ.18ರ ತನಕ ಪ್ರತಿದಿನ ಸಂಜೆ 6:30 ರಿಂದ ಭಜನೆ, ಕುಣಿತ ಭಜನೆ, ಮಹಾಮಂಗಳಾರತಿ, ದೇವಿ ಆವೇಶ ಹಾಗೂ ತೀರ್ಥಪ್ರಸಾದ ವಿತರಣೆ ನೆರವೇರಲಿದೆ.

ಅ.19 ರಂದು ಬೆಳಿಗ್ಗೆ 9:00 ರಿಂದ ಮಹಾ ದುರ್ಗಾ ಹೋಮ, ಮಧ್ಯಾಹ್ನ 12:00 ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 2:00 ರಿಂದ ಮಹಾಮಂಗಳಾರತಿ, ದೇವಿ ಆವೇಶ, ತೀರ್ಥಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ.

ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಬೆಂಗಳೂರಿನ ಶ್ರೀ ಮಹಾಲಕ್ಷ್ಮೀ ಸನ್ನಿಧಿ, ನಂಬಿದ ಭಕ್ತರ ಪಾಲಿನ ಕರುಣಾನಿಧಿ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಮಾರ್ಚ್ 1ರಂದು ಗೋರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಸಮಾರಂಭ : ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ವೈಭವ

Mumbai News Desk

ಡೊಂಬಿವಲಿ: ಆ. 9 ರಂದು ‘ಕರ್ಣಬೇಧನ- ಕರ್ಣಾವಸಾನ’ ಯಕ್ಷಗಾನ ತಾಳಮದ್ದಳೆ

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ :ಜುಲೈ 5 ರಂದು “ಶ್ರೀ ಜಗನ್ನಾಥ ಕ್ಷೇತ್ರ ಮಹಿಮೆ” ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ

Mumbai News Desk

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

Mumbai News Desk