30 C
Mumbai
September 27, 2026
Mumbai News Kannada
ಪ್ರಕಟಣೆ

ಆಗಸ್ಟ್‌ 30ರಂದು ‘ತುಲುವೆರೆ ಕಲ ಬೊಂಬೈ ಎಗ್ಗೆ’ ವಾರ್ಷಿಕೋತ್ಸವ: ಹಾಸ್ಯ ಕವಿಗೋಷ್ಠಿಗೆ ಹೆಸರು ನೋಂದಾವಣೆಗೆ ಆಹ್ವಾನ




​ಮುಂಬೈ: ಯಾವುದೇ ಒಂದು ಸಂಘ-ಸಂಸ್ಥೆಯನ್ನು ಸ್ಥಾಪಿಸುವ ಮೂಲ ಉದ್ದೇಶ ಅದು ಜನಸಾಮಾನ್ಯರನ್ನು ತಲುಪುವುದಾಗಿರಬೇಕು. ಅದರ ಧ್ಯೇಯೋದ್ದೇಶಗಳು ಸಮಾಜದ ಏಳಿಗೆಗೆ ಪೂರಕವಾಗಿದ್ದಾಗ ಮಾತ್ರ ಆ ಸಂಸ್ಥೆಯು ಸಾರ್ಥಕತೆ ಪಡೆಯಲು ಸಾಧ್ಯ. ಅಂತಹ ಉದಾತ್ತ ಚಿಂತನೆಗಳೊಂದಿಗೆ ಮುನ್ನಡೆಯುತ್ತಿರುವ ಹೆಮ್ಮೆಯ ಸಂಸ್ಥೆ ‘ತುಲುವೆರೆ ಕಲ’.


​ತುಳು ಭಾಷೆಯನ್ನು ಉಳಿಸಿ, ಬೆಳೆಸಿ, ಅದಕ್ಕೊಂದು ಸೂಕ್ತ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮತ್ತು ತುಳು ನಾಡಿನ ಸಂಸ್ಕೃತಿಯ ಪರಿಮಳವನ್ನು ವಿಶ್ವದಾದ್ಯಂತ ಪಸರಿಸುವ ಕಳಕಳಿಯೊಂದಿಗೆ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆಯು ಈಗಾಗಲೇ ಹಲವಾರು ಜನಪರ ಹಾಗೂ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತುಳು ಭಾಷೆಯ ವಿಕಾಸಕ್ಕೆ ನಿರಂತರವಾಗಿ ಸ್ಪಂದಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


​ಮುಂಬೈನಲ್ಲಿ ಚೊಚ್ಚಲ ವಾರ್ಷಿಕೋತ್ಸವ
​ಮಾತೃಭಾಷೆಯ ವೃದ್ಧಿಗಾಗಿ ಇದರ ಉಪವಿಭಾಗವಾಗಿ ಮುಂಬೈನಲ್ಲಿ ಸ್ಥಾಪನೆಗೊಂಡಿರುವ ‘ತುಲುವೆರೆ ಕಲ ಬೊಂಬೈ ಎಗ್ಗೆ’ ಸಂಸ್ಥೆಯು ಹೊರನಾಡಿನಲ್ಲೂ ತುಳು ಭಾಷೆಯ ಅಸ್ಮಿತೆಯನ್ನು ವಿಸ್ತರಿಸುವ ಮಹತ್ತರ ಕಾಳಜಿಯನ್ನು ಹೊಂದಿದೆ. ಈ ಸಂಸ್ಥೆಯ ಚೊಚ್ಚಲ ವಾರ್ಷಿಕೋತ್ಸವವು ಇದೇ ಆಗಸ್ಟ್ 30ರಂದು ಡೊಂಬಿವಿಲಿಯ ‘ಪ್ರೀತಿ ಬ್ಯಾಂಕ್ವೆಟ್ ಹಾಲ್‌’ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜರುಗಲಿದೆ.


​ಹಾಸ್ಯ ಕವಿಗೋಷ್ಠಿ: ಆಸಕ್ತರಿಂದ ಅರ್ಜಿ ಆಹ್ವಾನ
​ವಾರ್ಷಿಕೋತ್ಸವದ ಅಂಗವಾಗಿ ಮುಂಬೈ ವಲಯದ ತುಳು-ಕನ್ನಡಿಗ ಕವಿ ಮತ್ತು ಕವಯತ್ರಿಯರಿಗಾಗಿ ವಿಶೇಷ ‘ಹಾಸ್ಯ ಕವಿಗೋಷ್ಠಿ’ಯನ್ನು ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಜುಲೈ 5ರ ಒಳಗೆ ಕೆಳಗಿನ ಪದಾಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ಕೋರಿದೆ.


​ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
​ಪ್ರಫುಲ್ಲಾ ಶೆಟ್ಟಿ (ಕಾರ್ಯಾಧ್ಯಕ್ಷೆ) – 90296 66675
​ಶೋಭಾ ಎಸ್. ಶೆಟ್ಟಿ (ಕಾರ್ಯದರ್ಶಿ) – 97022 11551
​ಸವಿತಾ ಸಾಲ್ಯಾನ್ (ಜೊತೆ ಕಾರ್ಯದರ್ಶಿ) – 98928 50309
​ಮೈನಾ ಶೆಟ್ಟಿ (ಕೋಶಾಧಿಕಾರಿ) – 93210 97128
​ಕುಮುದಾ ಶೆಟ್ಟಿ (ಸಾಹಿತ್ಯ ಸಮಿತಿ) – 96190 26965



Related posts

ಇಂದು ಡೊಂಬಿವಲಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ

Mumbai News Desk

ಫೆ.23(ನಾಳೆ) ಕರ್ನಾಟಕ ಸಂಘ ಡೊಂಬಿವಲಿ:ಲಲಿತ ಕಲಾ ವಿಭಾಗ: ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ನಿಮಿತ್ತ ಭಜನೆ ಹಾಗೂ ಕುಣಿತ ಭಜನೆ ಸ್ಪರ್ದೆ.

Mumbai News Desk

ಆ 18 ರಂದು ಪೂರ್ವದ ಮಲಾಡ್ ನ ಸ್ವಾಮಿ ನಾರಾಯಣ ಸಭಾಂಗಣದಲ್ಲಿ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ನ ಸದಸ್ಯರಿಂದ ಯಕ್ಷಗಾನ ಶ್ರೀ ದೇವಿ ಮಹಾತ್ಮೆ 

Mumbai News Desk

ಆ. 8: ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 34ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ: ನವೆಂಬರ್ 30ರಂದು ವಿಜೃಂಭಣೆಯ ಆಚರಣೆ

Mumbai News Desk