33 C
Mumbai
October 7, 2026
Mumbai News Kannada
ಸುದ್ದಿ

ರಕ್ತದಾನ ಸೇವೆಯ ಸರದಾರ ಸತೀಶ್ ಸಾಲ್ಯಾನ್‌ಗೆ ‘ಮಾನ್ಯ ಸೇವಾ ರತ್ನ’ ಗೌರವ



ಮಸ್ಕತ್: ಸಮಾಜಸೇವೆ, ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆಯ ಮೂಲಕ ಮಾನವೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಮಾಜಸೇವಕ ಶ್ರೀ ಸತೀಶ್ ಸಾಲ್ಯಾನ್ ಅವರಿಗೆ ಮಸ್ಕತ್‌ನಲ್ಲಿ ‘ಮಾನ್ಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಸ್ಕತ್‌ನಲ್ಲಿ ಆಯೋಜಿಸಲಾಗಿದ್ದ 10ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಅಂಗವಾಗಿ ಆಗಮಿಸಿದ್ದ ಶ್ರೀ ಸತೀಶ್ ಸಾಲ್ಯಾನ್ ಅವರನ್ನು, ರಕ್ತದಾನದ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಕೆಗೆ ನೆರವಾಗುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ವತಿಯಿಂದ ಈ ಗೌರವಕ್ಕೆ ಆಯ್ಕೆ ಮಾಡಲಾಗಿತ್ತು.

ರಕ್ತದಾನ ಶಿಬಿರದ ಬಳಿಕ ಮಸ್ಕತ್‌ನ ಓಂಕಾರ ವೇದಿಕೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಶ್ರೀ ಸತೀಶ್ ಸಾಲ್ಯಾನ್ ಅವರಿಗೆ ‘ಮಾನ್ಯ ಸೇವಾ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಶಶಿಧರ ಶೆಟ್ಟಿ ಮಲ್ಲರ್, ಡಾ. ಅಂಚನ್ ಸಿ.ಕೆ., ಶ್ರೀ ಗಣೇಶ್ ಶೆಟ್ಟಿ, ಶ್ರೀ ಮಂಜುನಾಥ ಕಾಮತ್, ಶ್ರೀ ಯುವರಾಜ್ ಸಲ್ಯಾನ್, ಓಂಕಾರ ಮಸ್ಕತ್‌ನ ಸದಸ್ಯರು ಹಾಗೂ ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ಮತ್ತು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಓಮಾನ್ ಘಟಕದ ಅಧ್ಯಕ್ಷ ಶ್ರೀ ಶಿವಾನಂದ ಕೋಟ್ಯಾನ್ ಕಟಪಾಡಿ ಉಪಸ್ಥಿತರಿದ್ದರು.

ಗೌರವ ಸ್ವೀಕರಿಸಿದ ಶ್ರೀ ಸತೀಶ್ ಸಾಲ್ಯಾನ್ ಅವರು, ರಕ್ತದಾನವು ಕೇವಲ ದಾನವಲ್ಲ; ಸಂಕಷ್ಟದಲ್ಲಿರುವ ಜೀವಕ್ಕೆ ನೀಡುವ ಅಮೂಲ್ಯ ನೆರವು ಎಂಬ ಸಂದೇಶದೊಂದಿಗೆ, ತುರ್ತು ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವುದು ಹಾಗೂ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಓಂಕಾರ ಮಸ್ಕತ್ ವತಿಯಿಂದ ಖ್ಯಾತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ ಅವರ ಭಕ್ತಿಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಕ್ತಿಗೀತೆಗಳ ಗಾಯನವು ಸಭಾಂಗಣದಲ್ಲಿ ಭಕ್ತಿಭಾವದ ವಾತಾವರಣ ಮೂಡಿಸಿ, ನೆರೆದಿದ್ದ ಸಂಗೀತಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಸಮಾಜಸೇವೆ ಮತ್ತು ರಕ್ತದಾನದಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡ ಸಾಧಕರನ್ನು ಸಾಂಸ್ಕೃತಿಕ ವೇದಿಕೆಯಲ್ಲಿ ಗುರುತಿಸಿ ಗೌರವಿಸಿದ ಈ ಕಾರ್ಯಕ್ರಮವು ವಿಶೇಷ ಅರ್ಥಪೂರ್ಣ ಕ್ಷಣವಾಗಿ ಮೂಡಿಬಂತು.



Related posts

ತಂತ್ರಜ್ಞಾನ ಮತ್ತು ಭರವಸೆಯ ಸಮ್ಮಿಲನ: ಭಾರತ್ ಬ್ಯಾಂಕ್‌ನಿಂದ ಹೊಸ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ಸೇವೆಗಳಿಗೆ ಚಾಲನೆ.

Mumbai News Desk

ಹೊಸ ಹಣಕಾಸು ವರ್ಷ 2026-27: ಜನಸಾಮಾನ್ಯರ ಬದುಕಿನ ಮೇಲಾಗುವ ಪ್ರಮುಖ ಬದಲಾವಣೆಗಳ ಕೈಪಿಡಿ

Mumbai News Desk

ಮುಂಬೈ : ಪ್ರವೀಣ್ ಭಟ್ ಅವರಿಗೆ ಪಿತೃ ವಿಯೋಗ

Mumbai News Desk

ಡಹಾಣೂ ಬಂಟ್ಸ್ ಸಂಘದಿಂದ “ಕಾಂತಾರ” ಚಿತ್ರ ಪ್ರದರ್ಶನ.

Mumbai News Desk

ಸಾಧಕ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಭವ್ಯ ಸನ್ಮಾನ: ದೇಶದ ಭವಿಷ್ಯ ಕಟ್ಟಲು ಮಕ್ಕಳಿಗೆ ಸಂಸ್ಕಾರ ಅಗತ್ಯ – ಶ್ರೀ ಶೀರೂರು ಶ್ರೀಗಳು

Mumbai News Desk

ರೈ ಸಮಿತಿ ಎಜುಕೇಷನಲ್ ಟ್ರಸ್ಟ್‌ನ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್‌ಗೆ ಕಟೀಲು ಅನಂತ ಅಸ್ರಣ್ಣರ ಭೇಟಿ

Mumbai News Desk