34 C
Mumbai
October 7, 2026
Mumbai News Kannada
ಪ್ರಕಟಣೆ

ಚಿತ್ರಾಪು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ 31ನೇ ವರ್ಷದ ನವರಾತ್ರಿ ಉತ್ಸವ ಸಂಭ್ರಮ



ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಚಿತ್ರಾಪು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ 31ನೇ ವರ್ಷದ ನವರಾತ್ರಿ ಉತ್ಸವವು ಅಕ್ಟೋಬರ್ 11 ರಿಂದ ಅಕ್ಟೋಬರ್ 13 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಪ್ರದಾಯಿಕವಾಗಿ ಜರುಗಲಿದೆ.

ಸನ್ನಿಧಿಯ ಧರ್ಮದರ್ಶಿ ಶ್ರೀ ಕೇಶವಾನಂದ ಗುರೂಜಿ, ದಿವಂಗತ ಶ್ರೀಮತಿ ಭವಾನಿ ಅಮ್ಮನವರ ಮಕ್ಕಳು, ಮೊಮ್ಮಕ್ಕಳು ಹಾಗೂ ಮುಂಬಯಿ, ಊರು-ಪರಊರಿನ ಭಕ್ತವೃಂದದ ಸಹಕಾರದೊಂದಿಗೆ ಈ ಬಾರಿಯ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಆಯೋಜಿಸಲಾಗಿದೆ.

ಉತ್ಸವದ ಪ್ರಯುಕ್ತ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ ಶುದ್ಧ ಪುಣ್ಯಾಹ, ಗಣಹೋಮ, ವಾಸ್ತುಬಲಿ, ಪಂಚಾಮೃತಾಭಿಷೇಕ, ಕಲಶ ಸ್ಥಾಪನೆ ಹಾಗೂ ತ್ರಿಕಾಲ ಪೂಜೆ ನಡೆಯಲಿದೆ. ಅಕ್ಟೋಬರ್ 12ರ ಸೋಮವಾರ ತ್ರಿಕಾಲ ಪೂಜೆ, ಕುಂಕುಮಾರ್ಚನೆ ಮತ್ತು ಲಲಿತಾ ಪಾರಾಯಣ ಜರುಗಲಿದೆ.

ಅಕ್ಟೋಬರ್ 13ರ ಮಂಗಳವಾರ ಬೆಳಿಗ್ಗೆ ಅಲಂಕಾರ ಪೂಜೆ, ಭಜನೆ, ಮಧ್ಯಾಹ್ನ 12:00 ಗಂಟೆಗೆ ಹೂವಿನ ಪೂಜೆ, ಪ್ರಾರ್ಥನೆ, ಸುವಾಸಿನಿ ಪೂಜೆ, ರಕ್ಷಾಸೂತ್ರ ವಿತರಣೆ ನೆರವೇರಲಿದೆ. ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಶ್ರೀ ದೇವಿಯ ಆವೇಶದಲ್ಲಿ ಬಲಿಸೇವೆ, ಜಳಕ, ತದನಂತರ ಭಕ್ತರಿಗೆ ಶ್ರೀದೇವಿಯ ಅನುಗ್ರಹ, ಶ್ರೀಮುಡಿ ಗಂಧ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಅಕ್ಟೋಬರ್ 14ರ ಬುಧವಾರ ಬೆಳಿಗ್ಗೆ ಕಲಶ ವಿಸರ್ಜನೆ ನಡೆಯಲಿದ್ದು, ಅಕ್ಟೋಬರ್ 20ರ ಮಂಗಳವಾರದವರೆಗೆ ನಿತ್ಯ ತ್ರಿಕಾಲ ಪೂಜೆ ಹಾಗೂ ರಾತ್ರಿ ನಿತ್ಯ ಭಜನೆ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಮುಡಿ ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕೇಶವಾನಂದ ಗುರೂಜಿ ತಿಳಿಸಿದ್ದಾರೆ.



Related posts

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಜ.11. ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 64ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭ

Mumbai News Desk

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಫೆ.15 ರಂದು ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ

Mumbai News Desk

ಆ.9 ರಂದು ಇತಿಹಾಸ ಪ್ರಸಿದ್ಧ ನಂದಳಿಕೆ ನಾಲ್ಕು ಸ್ಥಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಆದಿ ಆಲಡೆಗಳ ಜೀರ್ಣೋದ್ಧಾರ ಸಭೆ.

Mumbai News Desk