32 C
Mumbai
September 30, 2026
Mumbai News Kannada
ಪ್ರಕಟಣೆ

ಮುಂಬೈಯಲ್ಲಿ ಅ.2ರಂದು ‘ವೈಬ್ ಫೆಸ್ಟ್ 2026’: ಬಿಲ್ಲವ ಯುವಶಕ್ತಿಯ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ



ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಳವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ಆರ್) ಮುಂಬೈ ಇವರ ಜಂಟಿ ಆಶ್ರಯದಲ್ಲಿ “ವೈಬ್‌ ಫೆಸ್ಟ್‌ 2026” (VYBE FEST 2026 – Vibrant Yuva of Billawa for Excellence) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬೃಹತ್‌ ಸಮಾವೇಶ ಮತ್ತು ಸಾಂಸ್ಕೃತಿಕ ವೈಭವವು 2026ರ ಅಕ್ಟೋಬರ್ 2ರ ಶುಕ್ರವಾರದಂದು ಬೆಳಿಗ್ಗೆ 9.30 ರಿಂದ ಸಂಜೆ 6.00 ರವರೆಗೆ ಕುರ್ಲಾ (ಪೂರ್ವ) ದಲ್ಲಿರುವ ಬಂಟರ ಭವನದಲ್ಲಿ ನಡೆಯಲಿದೆ.

ಬೆಳಿಗ್ಗೆ 10.00 ಗಂಟೆಗೆ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪವಾಯಿಯ ಶ್ರೀ ಮಹಾಶೇಷ ರುಂಡಮಾಲಿನಿ ಕ್ಷೇತ್ರದ ಶ್ರೀ ಶ್ರೀ ಶ್ರೀ ಸುವರ್ಣ ಬಾಬಾ ಅವರು ದಿವ್ಯ ಆಶೀರ್ವಚನ ನೀಡಲಿದ್ದಾರೆ. ಭಾರತ್ ಕೋ-ಆಪ್. ಬ್ಯಾಂಕ್ (ಮುಂಬೈ) ಲಿಮಿಟೆಡ್‌ನ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಳವರ ಮಹಾಮಂಡಲ ಮೂಲ್ಕಿ (ಆರ್) ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಚಾಂದಿವಲಿ ಕ್ಷೇತ್ರದ ಶಾಸಕರಾದ ಶ್ರೀ ದಿಲೀಪ್ ಬಿ. ಲಾಂಡೆ (ಮಾಮಾ) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ನವಿ ಮುಂಬೈ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಡಾ. ಅನುರಾಧ ಬಾಬರ್, ‘ಕರ್ನಾಟಕ ಮಲ್ಲ’ದ ಪ್ರಧಾನ ಸಂಪಾದಕರಾದ ಶ್ರೀ ಚಂದ್ರಶೇಖರ್ ಪಾಲೇಥಾಡಿ, ಆಸಲ್ಫಾದ ಗೀತಾಂಬಿಕ ಯಕ್ಷಗಾನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸತೀಶ್ ಕೆ. ಶೆಟ್ಟಿ, ಭಾರತ್ ಬ್ಯಾಂಕ್‌ನ ಬಿಒಎಮ್ ಕಾರ್ಯಾಧ್ಯಕ್ಷರಾದ ಸಿ.ಎ. ಪ್ರಜ್ವಲ್ ಪೂಜಾರಿ, ನಿಶಿ ಹಾಸ್ಪಿಟಾಲಿಟಿಯ ಸಿಇಒ ಶ್ರೀ ದಿವಾಕರ್ ಟಿ. ಮಾಬಿಯನ್, ಉದ್ಯಮಿ ಶ್ರೀ ಉಮೇಶ್ ಪಿ. ಕಾಪು, ಭಾರತ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀ ವಿದ್ಯಾನಂದ್ ಎಸ್. ಕರ್ಕೇರ, ಬಾಲಾಜಿ ಗ್ರೂಪ್ ಆಫ್ ಕಂಪನೀಸ್‌ನ ಎಂಡಿ ಶ್ರೀ ಶಿವರಾಮ್ ಪೂಜಾರಿ, ಉದ್ಯಮಿ ಶ್ರೀ ಸಚಿನ್ ರಘು ಪೂಜಾರಿ ಹಾಗೂ ಉದ್ಯಮಿ ಶ್ರೀಮತಿ ದೀಪ್ತಿ ಯೋಗೇಶ್ ಸುವರ್ಣ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.00 ಗಂಟೆಯಿಂದ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಈ ಕಾರ್ಯಕ್ರಮಕ್ಕೂ ಸೂರ್ಯಕಾಂತ್ ಜಯ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಬಿ. ಶೆಟ್ಟಿ ಹಾಗೂ ಮೂಡುಬಿದಿರೆ (ದ.ಕ.) ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಶ್ರೀ ಮೇಘರಾಜ್ ಸೋಹನ್‌ಲಾಲ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪದ್ಮರಾಜ್ ಆರ್. ಪೂಜಾರಿ, ಕಾಪು ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಪುಣೆಯ ಉದ್ಯಮಿ ಶ್ರೀ ಸುಂದರ್ ಪೂಜಾರಿ, ಅಂತರರಾಷ್ಟ್ರೀಯ ಜ್ಯೋತಿಷಿ ಡಾ. ಎಂ. ಜೆ. ಪ್ರವೀಣ್ ಭಟ್, ಏಷ್ಯಾಟಿಕ್ ಕ್ರೇನ್ ಸರ್ವೀಸಸ್ ನಿರ್ದೇಶಕರಾದ ಶ್ರೀ ಗಣೇಶ್ ಆರ್. ಪೂಜಾರಿ, ರಿಲಯನ್ಸ್ ಕ್ಯಾಂಪಾ ಕೋಲಾದ ಮಹಾರಾಷ್ಟ್ರ ಮತ್ತು ಗೋವಾ ಕಾರ್ಯಾಚರಣೆಯ ಮುಖ್ಯಸ್ಥರಾದ ಶ್ರೀ ರವಿಕಾಂತ್ ಅಮಿನ್, ಬಾಬು ಗ್ರೂಪ್ ಆಫ್ ಕಂಪನೀಸ್‌ನ ಕಾರ್ಯಾಧ್ಯಕ್ಷರಾದ ಶ್ರೀ ಮಹೇಶ್ ಎಸ್. ಶೆಟ್ಟಿ, ಪವಾಯಿಯ ಉದ್ಯಮಿಗಳಾದ ಶ್ರೀ ಪ್ರದೀಪ್ ಪೂಜಾರಿ ಮತ್ತು ಶ್ರೀ ಮೋಹನ್ ಪೂಜಾರಿ, ಕ್ಯಾಪ್ಟನ್ ಸ್ವಿಚ್‌ಗೇರ್ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷರಾದ ಶ್ರೀ ಗೋಪಾಲ್ ಎಂ. ಪೂಜಾರಿ ಹಾಗೂ ಉದ್ಯಮಿ ಶ್ರೀಮತಿ ಸೌಮ್ಯಾ ಸುಭಾಷ್ ಸುವರ್ಣ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ವಿಶೇಷ ಸನ್ಮಾನ :
ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿ, ಕ್ರಿಕೆಟ್ ಆಟಗಾರ ಮಾಸ್ಟರ್ ತನುಷ್ ಕೋಟ್ಯಾನ್, ಎಸ್‌ಸಿಡಿಸಿಸಿ ಬ್ಯಾಂಕ್ ಮಂಗಳೂರಿನ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್ ಕೊಲಕೆ ಇರ್ವತ್ತೂರು, ಕರ್ನಾಟಕ ಸರ್ಕಾರದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಆರ್‌ಬಿಐನ ಮಾಜಿ ಜನರಲ್ ಮ್ಯಾನೇಜರ್ ಹಾಗೂ ಭಾರತ್ ಬ್ಯಾಂಕ್‌ನ ನಿರ್ದೇಶಕರಾದ ಗೌರೇಶ್ ಕೋಟ್ಯಾನ್, ಬಿಲ್ಲವ ಬ್ರಿಗೇಡ್ (ಆರ್) ಸ್ಥಾಪಕರಾದ ಸದಾನಂದ ಎಸ್. ಪೂಜಾರಿ, ಬಿಎಮ್‌ಸಿ ಅಸೆಸ್‌‌ಮೆಂಟ್ ಡಿಪಾರ್ಟ್‌ಮೆಂಟ್ ಸೂಪರಿಂಟೆಂಡೆಂಟ್ ಮೋಹನ್ ಪೂಜಾರಿ ಹಾಗೂ ಹಾಕಿ ಆಟಗಾರ ಸುರಾಜ್ ಕರ್ಕೇರ ಅವರನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ಎಸ್‌ಎಸ್‌ಎಲ್‌ಸಿ (SSC Board) ಪರೀಕ್ಷೆಯಲ್ಲಿ ಶೇಕಡಾ 99.20 ಅಂಕಗಳನ್ನು ಗಳಿಸಿ, ಮೀರಾ ರೋಡ್‌ನ ಹೋಲಿ ಕ್ರಾಸ್ ಕಾನ್ವೆಂಟ್ ಶಾಲೆಯ ಟಾಪರ್ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ರಕ್ಷ್ಮಾ ಜೆ. ಕುಲಾಯಿ ಅವರನ್ನು ಸಹ ಸನ್ಮಾನಿಸಲಾಗುವುದು
ಇದೇ ಸಂದರ್ಭದಲ್ಲಿ ‘ಅಚೀವರ್ಸ್ ಅವಾರ್ಡ್’ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.
ಜಯ ಸಿ. ಸುವರ್ಣ ಅಭಿಮಾನಿಗಳ ಪರವಾಗಿ ಗೌರವ ಕಾರ್ಯದರ್ಶಿ ಮೋಹನ್‌ದಾಸ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಶಿವರಾಮ ಎಸ್. ಪೂಜಾರಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ (ಆರ್) ಮುಂಬೈ ಪರವಾಗಿ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ಹಾಗೂ ಜಯ ಸಿ. ಸುವರ್ಣ ಯುವ ಅಭಿಮಾನಿಗಳ ಪರವಾಗಿ ಅಧ್ಯಕ್ಷ ಗಣೇಶ್ ಡಿ. ಪೂಜಾರಿ ಮತ್ತು ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ ಸರ್ವರನ್ನೂ ಆದರದಿಂದ ಆಹ್ವಾನಿಸಿದ್ದಾರೆ.



Related posts

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ: ನವೆಂಬರ್ 21ರಂದು ಕೊಡೇರಿಯಲ್ಲಿ ಹಕ್ರೆಮಠ ಶ್ರೀ ಜೈನಜಟ್ಟಿಗೇಶ್ವರ ದೇವರ 79ನೇ ವರ್ಷದ ಕಂಬಳೋತ್ಸವ

Mumbai News Desk

ಬಿ.. ಎಸ್ ಕೆ.ಬಿ. ಎಸೋಸಿಯೇಶನ್, ಗೋಕುಲ – ಶತಮಾನೋತ್ಸವ ಸಂಭ್ರಮಾಚರಣೆಗೆ ಸರ್ವಸಿದ್ಧತೆ

Mumbai News Desk

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಸೆ. 15 ರಂದು ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ ಡೊಂಬಿವಲಿಯ ಉದ್ಘಾಟನಾ ಕಾರ್ಯಕ್ರಮ.

Mumbai News Desk

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ : ಸೆ. 14ರಂದು ಶ್ರೀ ಶನಿಗ್ರಂಥ ಪಾರಾಯಣ ಮತ್ತು 171ನೇ ಗುರು ಜಯಂತಿ ಆಚರಣೆ

Mumbai News Desk

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk