
ವಸಾಯಿ: ಶ್ರೀ ರಜಕ ಸಂಘ (ಮುಂಬಯಿ), ವಸಾಯಿ ಪ್ರಾದೇಶಿಕ ವಲಯದ ವತಿಯಿಂದ 15ನೇ ವಾರ್ಷಿಕ ದಸರಾ ಶಾರದಾ ಪೂಜೆಯನ್ನು ಭಾನುವಾರ, ದಿನಾಂಕ 11 ಅಕ್ಟೋಬರ್ 2026ರಂದು ವಸಾಯಿ ಪೂರ್ವದ ನಿಶಾಂತ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವು ವಲಯದ ಅಧ್ಯಕ್ಷರಾದ ಶ್ರೀ ರಮೇಶ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿ ಶ್ರೀ ಶೇಖರ್ ಸಾಲ್ಯಾನ್ ಅವರ ಮುಂದಾಳುತ್ವದಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿತು.
ಬೆಳಿಗ್ಗೆ 10:30ಕ್ಕೆ ಪೂಜಾ ವಿಧಿವಿಧಾನಗಳು ಆರಂಭಗೊಂಡು, ಬಳಿಕ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿದವು.
ಮುಂಬಯಿ, ದಹಿಸರ್ ಮತ್ತು ವಿರಾರ್ನ ಶ್ರೀ ರಜಕ ಸಂಘದ ಸದಸ್ಯರು ಮಾತ್ರವಲ್ಲದೆ, ವಿವಿಧ ತುಳು-ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಶಾರದಾ ದೇವಿಯ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ವಿರಾರ್–ನಾಲಾಸೋಪಾರ ಕರ್ನಾಟಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಕಣಂಜಾರ್, ಕಾರ್ಯದರ್ಶಿ ಶ್ರೀ ಸತೀಶ್ ಶೆಟ್ಟಿ ಅಡ್ವೆ, ಆರೋಗ್ಯ ಹಾಗೂ ಶಿಕ್ಷಣ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಜಗನ್ನಾಥ ಶೆಟ್ಟಿ ಪಳ್ಳಿ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಶ್ರೀಮತಿ ಶುಭಾ ಎಸ್. ಶೆಟ್ಟಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿಶೇಷವಾಗಿ ಬಂಟ್ಸ್ ಸಂಘ ಮುಂಬಯಿ ಕೋಶಾಧಿಕಾರಿ ಹಾಗೂ ನಾಲಾಸೋಪಾರ ತುಳುಕೂಟದ ಸ್ಥಾಪಕ ಅಧ್ಯಕ್ಷರಾದ ಕೊಡುಗೈ ದಾನಿ ಶ್ರೀ ಶಶಿಧರ ಶೆಟ್ಟಿ ಇನ್ನಂಜೆ ಉಪಸ್ಥಿತರಿದ್ದು, ದೇವಿಯ ಪೂಜೆಯಲ್ಲಿ ಪಾಲ್ಗೊಂಡರು.
ಬಿಲ್ಲವರ ಜಯಸುವರ್ಣ ಅಭಿಮಾನಿ ಬಳಗದ ಸಕ್ರಿಯ ಕಾರ್ಯಕರ್ತ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ನಾಲಾಸೋಪಾರ ಇದರ ಸ್ಥಾಪಕ ಅಧ್ಯಕ್ಷರಾದ ಗುರುಸ್ವಾಮಿ ಸದಾಶಿವ ಕರ್ಕೇರ ಅವರು ಉಪಸ್ಥಿತರಿದ್ದು, ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿದರು.
ವಸಾಯಿ ಕಟೀಲು ಯಕ್ಷಕಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ಒ.ಪಿ. ಪೂಜಾರಿ, ಶ್ರೀ ಅಯ್ಯಪ್ಪ ಮಣಿಕಂಠ ಸೇವಾ ಸಮಿತಿ ವಸಾಯಿಯ ಗೌರವಾಧ್ಯಕ್ಷರಾದ ಶ್ರೀ ಕರ್ನೂರು ಶಂಕರ ಆಳ್ವ, ಮೊಗವೀರ ಸಂಘ ವಸಾಯಿಯ ಅಧ್ಯಕ್ಷರಾದ ಶ್ರೀ ಪ್ರದೀಪ್ ಪುತ್ರನ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಯಶೋಧರ ಕೋಟ್ಯಾನ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಶ್ರೀ ರಜಕ ಸಂಘ (ಮುಂಬಯಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಸಾಲ್ಯಾನ್, ಮಾಜಿ ಅಧ್ಯಕ್ಷರಾದ ಸಿ.ಎ. ವಿಜಯ್ ಕುಂದರ್, ಮಾಜಿ ಕಾರ್ಯದರ್ಶಿ ಶ್ರೀಮತಿ ಸುಮಿತ್ರಾ ಪಲಿಮಾರು, ಕಾರ್ಯದರ್ಶಿ ಶ್ರೀ ಉಮೇಶ್ ಸಾಲ್ಯಾನ್, ಕ್ರೀಡಾ ವಿಭಾಗದ ಉಸ್ತುವಾರಿ ಶ್ರೀ ರಾಜು ಸಾಲ್ಯಾನ್, ಸಕ್ರಿಯ ಕಾರ್ಯಕರ್ತ ಶ್ರೀ ಸುಂದರ್ ಎಚ್.ಎಂ., ಶ್ರೀ ರಾಜಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಶಂಕರ ಕುಂದರ್, ನಿರ್ದೇಶಕರಾದ ಶ್ರೀ ನರೇಂದ್ರ ಅತ್ತಾವರ್, ನವಿ ಮುಂಬೈ ವಲಯದ ಅಧ್ಯಕ್ಷರಾದ ಶ್ರೀ ರಮೇಶ್ ಸಾಲ್ಯಾನ್, ಬೋರಿವಲಿಯ ಹಿರಿಯ ಸದಸ್ಯರಾದ ಶ್ರೀ ಆನಂದ್ ಕುಂದರ್ ಸೇರಿದಂತೆ ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ವಸಾಯಿ ವಲಯದ ಅಧ್ಯಕ್ಷರಾದ ಶ್ರೀ ರಮೇಶ್ ಕುಂದರ್ ಹಾಗೂ ಕಾರ್ಯದರ್ಶಿ ಶ್ರೀ ಶೇಖರ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪೂಜಾ ಮಂಟಪದ ಅಲಂಕಾರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಕ್ರಿಯ ಸದಸ್ಯೆ ಹಾಗೂ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಅನಿತಾ ದೇವೇಂದ್ರ ಬುನ್ನನ್ ಮತ್ತು ಅವರಿಗೆ ಸಹಕರಿಸಿದ ಶ್ರೀ ರವೀಂದ್ರ ಕುಂದರ್ ಅವರ ಕಲಾತ್ಮಕ ಅಲಂಕಾರವು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮಕ್ಕೆ ಅಗತ್ಯವಾದ ದೇಣಿಗೆ ಸಂಗ್ರಹಿಸುವಲ್ಲಿ ಶ್ರಮಿಸಿದ ಮಾಜಿ ಅಧ್ಯಕ್ಷರಾದ ಶ್ರೀ ರಮೇಶ್ ಪಲಿಮಾರ್, ಹಿರಿಯ ಸಕ್ರಿಯ ಸದಸ್ಯರಾದ ಶ್ರೀ ವಸಂತ್ ಬುನ್ನನ್ ಹಾಗೂ ಕಾರ್ಯದರ್ಶಿ ಶ್ರೀ ಶೇಖರ್ ಸಾಲ್ಯಾನ್ ಅವರ ಸೇವೆಯನ್ನು ಅಧ್ಯಕ್ಷರು ಪ್ರಶಂಸಿಸಿದರು. ವಲಯದ ಮಾಜಿ ಅಧ್ಯಕ್ಷರಾದ ಪಾಂಡು ಮಡಿವಾಳ, ಮಾಯಿಲಾ ಬಂಗೇರ, ಗಣೇಶ್ ಗುಜರನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಕಿರಣ್ ಗುಜರನ್, ಮೋಹನ್ ಕುಂದರ್, ಸುಂದರ ಗುಜರನ್, ಶೈಲೇಶ್ ಪುತ್ರನ್ ಮತ್ತು ರಮೇಶ್ ಕುಂದರ್ (ನಾಲಾಸೋಪಾರ) ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಶ್ರೀಮತಿ ಚಂದ್ರಕಲಾ ಕುಂದರ್ ಹಾಗೂ ಮಹಿಳಾ ತಂಡವು ಹೂಮಾಲೆ ಮತ್ತು ಪ್ರಸಾದ ಸಿದ್ಧತೆಯಲ್ಲಿ ಸಹಕರಿಸಿದರೆ, ಯುವ ಘಟಕದ ಕಾರ್ಯಾಧ್ಯಕ್ಷೆ ಕುಮಾರಿ ಸನ್ನಿಧಿ ಎಸ್. ಸಾಲ್ಯಾನ್ ಹಾಗೂ ಯುವ ವಿಭಾಗದ ಸದಸ್ಯರು ವ್ಯವಸ್ಥಾಪನೆಯಲ್ಲಿ ಕೈಜೋಡಿಸಿದರು.
ಪೂಜಾ ವಿಧಿವಿಧಾನಗಳಿಗೆ ಮಾರ್ಗದರ್ಶನ ನೀಡಿದ ಶ್ರೀ ನಾಗೇಶ್ ಕೋಟ್ಯಾನ್ ಹಾಗೂ ಶ್ರೀ ರಮೇಶ್ ಪೂಜಾರಿ ಅವರಿಗೆ ಉಪಾಧ್ಯಕ್ಷರಾದ ವಸಂತ್ ಬುನ್ನನ್ ಕೃತಜ್ಞತೆ ಸಲ್ಲಿಸಿ ಗೌರವಿಸಿದರು. ತಬಲಾ, ಹಾರ್ಮೋನಿಯಂ, ಚಂಡೆ ಹಾಗೂ ಭಕ್ತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಭಕ್ತಿರಸ ತುಂಬಿದ ಕಲಾವಿದರ ತಂಡವನ್ನು ಸ್ಮರಿಸಿ, ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಅನ್ನಸಂತರ್ಪಣೆಯನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿ ಭಕ್ತರಿಗೆ ಪ್ರೀತಿಯಿಂದ ಬಡಿಸಿದ ಶ್ರೀ ಗುರುಪ್ರಸಾದ್ ಭಟ್ ಹಾಗೂ ಅವರ ತಂಡದ ಸಹಕಾರವೂ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.
ಸಮುದಾಯದ ಒಗ್ಗಟ್ಟಿಗೆ ಸಾಕ್ಷಿ: ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಶ್ರೀ ರಜಕ ಸಂಘದ ಸದಸ್ಯರ ಒಗ್ಗಟ್ಟು, ಸೇವಾಭಾವ ಮತ್ತು ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. ವಸಾಯಿಯಿಂದ ವಿರಾರ್ವರೆಗಿನ ವಿವಿಧ ತುಳು-ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ದಾನಿಗಳು, ಹಿತೈಷಿಗಳು ಹಾಗೂ ಭಕ್ತರು ಒಂದೇ ವೇದಿಕೆಯಲ್ಲಿ ಸೇರಿ ಪೂಜೆಯಲ್ಲಿ ಭಾಗವಹಿಸಿದ್ದು ಸಮುದಾಯದ ಐಕ್ಯತೆಯನ್ನು ಎತ್ತಿಹಿಡಿಯಿತು.
ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಕೇಂದ್ರ ಸಮಿತಿ, ವಲಯ ಸಮಿತಿ, ಮಹಿಳಾ ಘಟಕ, ಯುವ ಘಟಕ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳು, ಸ್ವಯಂಸೇವಕರು ಹಾಗೂ ಸಮಸ್ತ ತುಳು-ಕನ್ನಡ ಬಾಂಧವರಿಗೆ ಶ್ರೀ ರಜಕ ಸಂಘ (ಮುಂಬಯಿ), ವಸಾಯಿ ವಲಯದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಶ್ರೀ ಶಾರದಾ ದೇವಿಯು ಸಮಸ್ತರಿಗೂ ಆಯುರಾರೋಗ್ಯ, ಸುಖ, ಶಾಂತಿ, ಸಮೃದ್ಧಿ ಹಾಗೂ ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಯಶಸ್ಸನ್ನು ಕರುಣಿಸಲಿ ಎಂದು ಸಂಘದ ಪೂಜಾ ಅರ್ಚಕರಾದ ವಸಂತ್ ಬುನ್ನನ್ ಪ್ರಾರ್ಥಿಸುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.



