November 24, 2026
Mumbai News Kannada
ಸುದ್ದಿ

ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕದಿಂದ ರಾಷ್ಟ್ರೀಯ ದಿನಾಚರಣೆ ಸಂಭ್ರಮ





















ಓಮಾನ್ ಮಸ್ಕತ್ ಸುಲ್ತಾನೇಟ್ ಆಫ್ ಓಮಾನ್‌ನ ರಾಷ್ಟ್ರೀಯ ದಿನಾಚರಣೆಯನ್ನು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಓಮಾನ್ ಘಟಕದ ವತಿಯಿಂದ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಹಾಗೂ ಲಹೂಬ್ ಗ್ರೂಪ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಸಲಾಂ ಅಲ್ ರಹಾಬಿ ಅವರು ಜಂಟಿಯಾಗಿ ಕೇಕ್ ಕತ್ತರಿಸಿ ಓಮಾನ್ ಸುಲ್ತಾನರಿಗೆ ಹಾಗೂ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಕೋಟ್ಯಾನ್ ಅವರು, ಓಮಾನ್ ನಮ್ಮ ಕರ್ಮಭೂಮಿ. ಅನಿವಾಸಿ ಭಾರತೀಯರಿಗೆ ಶಾಂತಿ, ನೆಮ್ಮದಿ ಹಾಗೂ ಸಮೃದ್ಧ ಬದುಕಿನೊಂದಿಗೆ ತಮ್ಮ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅವಕಾಶ ನೀಡಿದ ಈ ರಾಷ್ಟ್ರಕ್ಕೆ ನಾವು ಸದಾ ಕೃತಜ್ಞರು. ದೇಶದ ಕಾನೂನು, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಓಮಾನ್ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದರು.

ಶ್ರೀ ಇಮ್ರಾನ್ ಶೇಖ್ ಹಾಗೂ ಶ್ರೀ ವಿಶ್ವನಾಥ್ ಅವರು ರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿ, ಭಾರತ, ಓಮಾನ್ ನಡುವಿನ ಐತಿಹಾಸಿಕ ಸ್ನೇಹ ಹಾಗೂ ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ಓಮಾನ್ ದೇಶದ ಶಾಂತಿ, ಏಕತೆ ಮತ್ತು ಸಮೃದ್ಧಿಗಾಗಿ ಶುಭ ಹಾರೈಸಿದರು.



Related posts

ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ವರ್ಲ್ಡ್ ಪೇಜೆಂಟ್ 2024, ಪ್ರಭಾ ಸುವರ್ಣ ಟೂರಿಸಂ ಎಂಬಾಸಿಡರ್ ಆಗಿ ಆಯ್ಕೆ

Mumbai News Desk

ದೆಹಲಿಯ ದಲಿತ ಕಾಲನಿಗೆ ಪೇಜಾವರ ಶ್ರೀಗಳ ಭೇಟಿ: ಏಕತೆ ಮತ್ತು ಸಾಮರಸ್ಯಕ್ಕೆ ಕರೆ

Mumbai News Desk

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದನೆ : ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಆರಂಭ

Mumbai News Desk

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ ಸಂಪನ್ನ

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ – ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ, ಧಾರ್ಮಿಕ ಸಭೆ.

Mumbai News Desk