October 16, 2026
Mumbai News Kannada
ಪ್ರಕಟಣೆ

ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗ: ಅ. 17ರಂದು ನವರಾತ್ರಿ ಉತ್ಸವ, ಭಜನೆ, ಕುಣಿತ ಭಜನೆ, ಗಾಯತ್ರಿ ದೀಪಯಜ್ಞ ಹಾಗೂ ಸಾಧಕರಿಗೆ ಸನ್ಮಾನ



ವಸಾಯಿ, : ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಕ್ಟೋಬರ್ 17ರ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ವಸಾಯಿ ಪಶ್ಚಿಮದ ದತ್ತಾನಿ ಮಾಲ್‌ನ ಎರಡನೇ ಮಹಡಿಯಲ್ಲಿರುವ ಸಿಲ್ವರ್ ಲೀಫ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಪಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ, ಸಂಘದ ಅಧ್ಯಕ್ಷ ಕರ್ನೂರು ಶಂಕರ ಆಳ್ವ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಉತ್ಸವದ ಅಂಗವಾಗಿ ಮಧ್ಯಾಹ್ನ 2 ಗಂಟೆಗೆ ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗ ಹಾಗೂ ವಸಾಯಿಯ ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಹಾಗೂ ಚಿಣ್ಣರ ಬಿಂಬ ವಸಾಯಿ ಶಿಬಿರದ ಮಕ್ಕಳಿಂದ ಕುಣಿತ ಭಜನೆ ಜರುಗಲಿದೆ.

ನಂತರ ಆಶಾ ಕರುಣಾಕರ ಸಮಾನಿ (ಗಾಯತ್ರಿ ಪರಿವಾರ ದಹಿಸರ್ ವಿಭಾಗ) ಇವರ ಮುಂದಾಳತ್ವದಲ್ಲಿ ಗಾಯತ್ರಿ ದೀಪಯಜ್ಞದ ವಿಶೇಷ ಕಾರ್ಯಕ್ರಮ ನಡೆಯಲಿದೆ. ತದನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಚೇತನಾ ಮಹೇಶ್ ಕುಕ್ಯಾನ್ (ಫಿಸಿಯೋಥೆರಪಿಸ್ಟ್), ಡಾ. ಶೃತಿ ಅಕ್ಷಯ್ ಶೆಟ್ಟಿ (ಎಂ.ಡಿ., ಹೋಮಿಯೋಪತಿ), ಡಾ. ಚೈತ್ರ ಶೆಟ್ಟಿ (ಫಿಸಿಯೋಥೆರಪಿಸ್ಟ್) ಹಾಗೂ ಡಾ. ಶೋಭಾ ಮನೋಜ್ ಕೋಟ್ಯಾನ್ (ಗೈನಕಾಲಜಿಸ್ಟ್) ಅವರನ್ನು ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗಾಗಿ ಅರಿಶಿನ-ಕುಂಕುಮ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘದ ಉಪಾಧ್ಯಕ್ಷ ರವೀಂದ್ರ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಎಂ. ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಪಾಂಡು ಎಲ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಒ. ಪಿ. ಪೂಜಾರಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಯಶೋಧರ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಎ. ಶೆಟ್ಟಿ, ಕೋಶಾಧಿಕಾರಿ ಭಾರತಿ ಎಚ್. ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ ವಿನಂತಿಸಿದ್ದಾರೆ.



Related posts

ಮೊಗವೀರ ಕನ್ನಡ ಮಾಸಿಕ, ಮುಂಬಯಿ – ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಮದರ್ ಇಂಡಿಯಾದ 19th east ಬಾಂಬೆ ಸ್ಕೌಟ್ ಮಿತ್ರರ ಮತ್ತು ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಜಂಟಿ ಆಶ್ರಯದಲ್ಲಿ ನವೆಂಬರ್ 15 ಮತ್ತು 16 ರಂದು ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಗುರುವಂದನಾ ಕಾರ್ಯಕ್ರಮ.

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಪಡುತೋನ್ಸೆ, ಹೂಡೆ : ಎ. 18,19ರಂದು ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk

ಡೊಂಬಿವಲಿ: ಮಾರ್ಚ್ 17 (ನಾಳೆ) ಅನುಜಾ ಮಹಿಳಾ ಸಂಸ್ಥೆಯ 45ನೇ ವಾರ್ಷಿಕೋತ್ಸವ

Mumbai News Desk