October 16, 2026
Mumbai News Kannada
ಪ್ರಕಟಣೆ

ಅ. 17: ಜಯ ಸಿ. ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳ ವತಿಯಿಂದ ನವರಾತ್ರಿ ಉತ್ಸವ, ಗರ್ಭಾ ನೃತ್ಯ



ಮುಂಬಯಿ: ಜಯ ಸಿ. ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಯುವ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.), ಮುಂಬಯಿ ಇವರ ಸಹಯೋಗದೊಂದಿಗೆ ಅಕ್ಟೋಬರ್ 17ರಂದು (ಶನಿವಾರ) ದಸರಾ ಹಬ್ಬದ ಪ್ರಯುಕ್ತ ಗೊರೆಗಾಂವ್ ಪೂರ್ವದ ಲೀಲಾಸ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ನವರಾತ್ರಿ ಉತ್ಸವ, ಗರ್ಭಾ ನೃತ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 4:00 ರಿಂದ 5:00 ರವರೆಗೆ ಕುಂಕುಮಾರ್ಚನೆ, 5:00 ರಿಂದ 6:00 ರವರೆಗೆ ಲಲಿತಾ ಸಹಸ್ರನಾಮಾರ್ಚನೆ, 6:00 ರಿಂದ 7:00 ರವರೆಗೆ ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಎಲ್ಲಾ ಘಟಕದವರಿಂದ ಭಜನೆ, 7:00 ರಿಂದ 9:00 ರವರೆಗೆ ಗರ್ಭಾ ನೃತ್ಯ, ದಾಂಡಿಯಾ ರಾಸ್ ಹಾಗೂ ರಾತ್ರಿ 9:00 ರಿಂದ ಅನ್ನಪ್ರಸಾದ ವಿತರಣೆ ನೆರವೇರಲಿದೆ.

ಈ ಪ್ರಯುಕ್ತ ಜಯ ಸಿ. ಸುವರ್ಣ ಅಭಿಮಾನಿಗಳು, ಯುವ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಸದಸ್ಯರು, ಸುವರ್ಣ ಸೇತು ಹಾಗೂ ಮುಂಬಯಿ ಬಿಲ್ಲವರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಜಯ ಸಿ. ಸುವರ್ಣ ಅಭಿಮಾನಿಗಳ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಕಾರ್ಯದರ್ಶಿ ಮೋಹನ್‌ದಾಸ್ ಜಿ. ಪೂಜಾರಿ; ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.), ಮುಂಬಯಿ ಪರವಾಗಿ ಅಧ್ಯಕ್ಷ ಅಶೋಕ್ ಕುಕ್ಯಾನ್, ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ; ಜಯ ಸಿ. ಸುವರ್ಣ ಮಹಿಳಾ ಅಭಿಮಾನಿ ಬಳಗದ ಉಪಕಾರ್ಯಾಧ್ಯಕ್ಷೆಯರಾದ ವನಿತಾ ಎ. ಕುಕ್ಯಾನ್, ದೇವಕಿ ಎಸ್. ಕರ್ಕೇರ, ಶಶಿಕಲಾ ಎಸ್. ಕೋಟ್ಯಾನ್, ಭವಾನಿ ಸಿ. ಕೋಟ್ಯಾನ್, ಮಾಲತಿ ಆರ್. ಬಂಗೇರ, ಪ್ರೇಮಾ ಜೆ. ಪೂಜಾರಿ, ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಖಜಾಂಚಿ ಬಬಿತಾ ಡಿ. ಕೋಟ್ಯಾನ್, ಜೊತೆ ಕಾರ್ಯದರ್ಶಿಗಳಾದ ಲೀಲಾ ಗಣೇಶ್, ಬಬಿತಾ ಜೆ. ಪೂಜಾರಿ; ಹಾಗೂ ಜಯ ಸಿ. ಸುವರ್ಣ ಯುವ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷ ಗಣೇಶ್ ಡಿ. ಪೂಜಾರಿ, ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಶ್ರೀ ಜಗದಂಬಾ ಮಂದಿರ ಡೊಂಬಿವಿಲಿ : ನಾಳೆ( ಅ. 15)   ಶಿಯಳಾಭಿಷೇಕ ಸೇವೆ

Mumbai News Desk

ಫೆ.25 : ಗೋರೆಗಾಂವ್ ಕರ್ನಾಟಕ ಸಂಘ 63ನೇ ನಾಡಹಬ್ಬ, ವಿಚಾರ ಗೋಷ್ಠಿ.

Mumbai News Desk

ನ. 19 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) – 21ನೇ ವಾರ್ಷಿಕೋತ್ಸವ.

Mumbai News Desk

ಅ.21, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk

ಅ 26 ,27: ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಕೃಷ್ಣ ಜಯಂತಿ ಉತ್ಸವ.

Mumbai News Desk

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ  ಶ್ರೀಪಾದರು ಡಿ.20ರಿಂದ 22 ವರೆಗೆ ಸಾಂತಾಕ್ರೂಜ್  ಪೇಜಾವರ ಮಠದಲ್ಲಿ

Mumbai News Desk