October 20, 2026
Mumbai News Kannada
ಪ್ರಕಟಣೆ

ಮುಂಬೈ ವಡಾಲದ ಎನ್.ಕೆ.ಇ.ಎಸ್. ಶಾಲೆಯ ಹಳೆವಿದ್ಯಾರ್ಥಿಗಳೇ, ಮರಳಿ ಬನ್ನಿ; ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಕೊನೆಯ ಅವಕಾಶ!



ಮುಂಬಯಿ : ಎನ್ ಕೆ ಇಎಸ್ ಶಾಲೆಯ ಹಳೆ ವಿದ‌್ಯಾರ್ಥಿಗಳೆ , ನೀವು ಕಲಿತ ಶಾಲೆ… ನಿಮ್ಮ ಬಾಲ್ಯದ ನೆನಪುಗಳ ತಾಣ… ಬದುಕಿನ ಮೊದಲ ಪಾಠ ಕಲಿಸಿದ ಅಂಗಳ. ಇದೀಗ ದೇಶ- ವಿದೇಶಗಳಲ್ಲಿ ನೆಲೆಸಿರುವ ಎನ್.ಕೆ.ಇ.ಎಸ್. ಶಾಲೆಯ ಎಲ್ಲ ಹಳೆವಿದ್ಯಾರ್ಥಿಗಳು ಮರಳಿ ತಮ್ಮ ಶಾಲಾ ದಿನಗಳ ನೆನಪುಗಳನ್ನು  ಹಂಚಿಕೊಳ್ಳಲು  ಮತ್ತು  ಆಗಿನ  ನಿಮ್ಮ ಶಾಲಾ ಕಟ್ಟಡವನ್ನು ವೀಕ್ಷಿಸಲು ಅಂತಿಮ ಅವಕಾಶವೊಂದು ಒದಗಿ ಬಂದಿದೆ.

ವಡಾಲದ ಐತಿಹಾಸಿಕ ಕನ್ನಡ ಶಾಲೆ  (NKES) ಎನ್ ಕೆ ಇ ಎಸ್  ಶಾಲಾ ಕಟ್ಟಡ ಇದೀಗ ಕೆಡವಲು  ಸಿದ್ಧತೆ ನಡೆಯುತ್ತಿದ್ದು ನವೀಕೃತ ಕಟ್ಟಡದ ನಿರ್ಮಾಣಕ್ಕೆ  ಮುಂದಾಗಿದೆ.  ಈ ಪ್ರಯುಕ್ತ ಹಳೆ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಮರುಭೇಟಿಯ ಒಂದು ಅಪೂರ್ವ ಮತ್ತು ಕೊನೆಯ ಅವಕಾಶವಿದ್ದು ಅದನ್ನು ಸದುಪಯೋಗಮಾಡಿಕೊಳ್ಳಲು ವಿನಂತಿಸಲಾಗಿದೆ.

ವಡಾಲದಲ್ಲಿರುವ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ (NKES) ಪ್ರೌಢಶಾಲೆಯ ಬಹು-ಶ್ರೇಣಿಯ ದೇವಾಲಯದಂತಹ ರಚನೆಯ ಶಾಲಾ ಕಟ್ಟಡವು ಅಂತಿಮ ವಿದಾಯ ಹೇಳಲು ಇದೀಗ  ಸಿದ್ಧತೆಗಳು ನಡೆಯುತ್ತಿದೆ.

ಆ ಪ್ರಯುಕ್ತ 2026 ರ ನವೆಂಬರ್ 2ರಿಂದ ನವಂಬರ್  21ರ ಒಳಗೆ   ದೇಶ ವಿದೇಶಗಳ ಹಳೆವಿದ್ಯಾರ್ಥಿಗಳು ನಿಮ್ಮ ನಿಮ್ಮ ಬಿಡುವಿನ ವೇಳೆಯಲ್ಲಿ ಒಮ್ಮೆ ಈ  ಶಾಲೆಗೆ ಭೇಟಿ ನೀಡಿ. ನಿಮ್ಮ ಬಾಲ್ಯದ ನೆನಪುಗಳನ್ನು ಮತ್ತೊಮ್ಮೆ ಬಿಚ್ಚಿಕೊಳ್ಳಿ. ಗೆಳೆಯರೊಂದಿಗೆ ಕಳೆದ ಆ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಿ. ನೀವು ಅಕ್ಷರ ಕಲಿತ ತರಗತಿಗಳಲ್ಲಿ ಒಮ್ಮೆ ಹೆಜ್ಜೆ ಹಾಕಿ, ಹಳೆಯ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿ.

ಶಾಲೆ ಎಂದರೆ ಕೇವಲ ಕಟ್ಟಡವಲ್ಲ; ಅದು ನಮ್ಮ ಬಾಲ್ಯ, ನಮ್ಮ ಸ್ನೇಹ, ನಮ್ಮ ಬದುಕಿನ ಅಮೂಲ್ಯ ಅಧ್ಯಾಯ.

ಇದೀಗ  ಅತ್ಯಾಧುನಿಕ ಶೈಕ್ಷಣಿಕ ಸಂಕೀರ್ಣಕ್ಕೆ ದಾರಿ ಮಾಡಿಕೊಡಲು ಆಧುನಿಕ ಪುನರಾಭಿವೃದ್ಧಿಗೆ ನಿರ್ಧರಿಸಲಾಗಿದೆ. ವಾಸ್ತುಶಿಲ್ಪ ಇತಿಹಾಸದ ಈ  ಶಾಲಾ ಕಟ್ಟಡವನ್ನು ಗೌರವಿಸಲು, ಶಾಲಾ ಆಡಳಿತ ಮಂಡಳಿಯು  ದೇಶ ವಿದೇಶಗಳ ಹಳೆವಿದ್ಯಾರ್ಥಿಗಳಿಗಾಗಿ ಎನ್ ಕೆ ಇ ಎಸ್ ಕ್ಯಾಂಪಸ್ ನ ‘ವಿಶೇಷ ವಿದಾಯ ಭೇಟಿ’ ಗಾಗಿ ತನ್ನ ಬಾಗಿಲುಗಳನ್ನು ತೆರೆಯುತ್ತಿದೆ ಎಂದು ಅಧಿಕೃತವಾಗಿ ಘೋಷಿಸಿದೆ.  ಮುಂದಿನ ದಿನಗಳಲ್ಲಿ ಈ ಶಾಲಾ ಕಟ್ಟಡ ಹೊಸ ರೂಪ ಪಡೆದುಕೊಳ್ಳಬಹುದು. ಹಾಗಾಗಿ, ಶಾಲಾ ಕಟ್ಟಡದ ಸ್ವರೂಪ ಬದಲಾವಣೆಗೆ ಮುನ್ನ ಒಮ್ಮೆ ಬನ್ನಿ… ನಿಮ್ಮ ಶಾಲೆಯ ಹಳೆಯ ರೂಪವನ್ನು ಕಣ್ತುಂಬಿಕೊಳ್ಳಿ. ನಿಮ್ಮ ನೆನಪುಗಳೊಂದಿಗೆ ಮತ್ತೆ ಒಂದಾಗಿರಿ ಎಂದು ಹಳೆವಿದ್ಯಾರ್ಥಿಗಳಲ್ಲಿ ವಿನಂತಿಸಿದೆ.

ನವೆಂಬರ್ 2 ರಿಂದ ನವಂಬರ್  21,  2026 ರ ವರೆಗೆ ಶಾಲಾಭೇಟಿಯ ಸಮಯವನ್ನು ಸುಗಮಗೊಳಿಸಲು ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ಅವಧಿಯ ವರ್ಷವನ್ನು  ಮತ್ತು ಯಾವ ದಿನ ಮರಳಿ ಶಾಲೆಯತ್ತ  ಬರುವಿರಿ … ಎಂದು .ತಿಳಿಸಲು ಶಾಲಾ ಆಡಳಿತವನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ. ವಾಟ್ಸಪ್  99675 46652 ಸಂಪರ್ಕಿಸಬಹುದು ಎಂದು ಶಾಲಾ ಪ್ರಕಟಣೆ ತಿಳಿಸಿದೆ.



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಮಹಾರಾಷ್ಟ್ರ ಘಟಕ ವತಿಯಿಂದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ

Mumbai News Desk

ಆಗಸ್ಟ್ 2 ಥಾಣೆಯಲ್ಲಿ : ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನ.

Mumbai News Desk

ಜೂನ್ 8ರಂದು “ಕನ್ನಡ ವೆಲ್ಫೇರ್ ಸಂಘ” ಜೆರಿಮರಿ, ಕುರ್ಲಾ ಪಶ್ಚಿಮ – ನೂತನ ಸಂಘದ ಉದ್ಘಾಟನೆ.

Mumbai News Desk

ವಿದ್ಯಾವಿಹಾರ್: ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನ,ಫೆ. 1ರಂದು ಇಪ್ಪತ್ನಾಲ್ಕು ಕಂತುಗಳ ಶ್ರೀರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ

Mumbai News Desk