November 7, 2026
Mumbai News Kannada
ಪ್ರಕಟಣೆ

ನ .7 : ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯ ‘ಶ್ರೀ ರಾಮ ಕಥಾ ಹೃದಯಂ‌’ ಸರಣಿ ತಾಳಮದ್ದಳೆಯ ಹದಿನೇಳನೆಯ ಪ್ರಸ್ತುತಿ ಹಾಗೂ ಸನ್ಮಾನ ಕಾರ್ಯಕ್ರಮ

















ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿಜಿಯವರ ಶಿಷ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತ ಹಸ್ತದಿಂದ 1ನೆಯ ಫೆಬ್ರವರಿ 2026 ರಂದು ಉದ್ಘಾಟನೆಗೊಂಡು ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ- ‘ಶ್ರೀ ರಾಮ ಕಥಾ ಹೃದಯಂ‌’ ಎಂಬ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹದಿನೇಳನೆಯ ಪ್ರಸ್ತುತಿಯಾದ ‘ತರಣಿಸೇನ ಕಾಳಗ’ ಎಂಬ ಕಥಾಪ್ರಸಂಗವು ದಿನಾಂಕ 07- 11 – 2026 ರ ಶನಿವಾರದಂದು ಮಧ್ಯಾಹ್ನ 2:ಗಂಟೆಗೆ ಸರಿಯಾಗಿ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ಗಾಂವ್‌ದೇವಿ ವಿದ್ಯಾ ವಿಹಾರ್ ಇಲ್ಲಿ ಮುಂಬೈಯ ಖ್ಯಾತ ಕಲಾವಿದರ ಸಹಯೋಗದಿಂದ ನಡೆಯಲಿದೆ.
ಶ್ರೀ ಸದ್ಗರು ನಿತ್ಯಾನಂದ, ಶ್ರೀ ಚಾಮುಂಡೇಶ್ವರಿ ಭಜನಾ ತಂಡದವರಿಂದ ಶ್ರೀ ರಾಮ. ಸಂಕೀರ್ತನೆ ಜರಗಲಿದೆ.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ
ಶ್ರೀ ಮಹೇಶ್ ಶೆಟ್ಟಿ (ಕಾರ್ಯಾಧ್ಯಕ್ಷರು, ಬಾಬಾ ಸಮೂಹ ಸಂಸ್ಥೆ ಹಾಗೂ ಉಪಾಧ್ಯಕ್ಷರು, ಬಂಟರ ಸಂಘ, ಮುಂಬೈ.)
ಶ್ರೀ ರತ್ನಾಕರ ಶೆಟ್ಟಿ ಮುಂಡ್ಕೂರು (ಆಡಳಿತ ನಿರ್ದೇಶಕರು, ಶ್ರೀನಾಥ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿಮಿಟೆಡ್. ಮತ್ತು ಕಾರ್ಯಾಧ್ಯಕ್ಷರು, ಎಸ್. ಎಂ. ಶೆಟ್ಟಿ ವಿದ್ಯಾ ಸಂಸ್ಥೆ, ಬಂಟ್ಸ್ ಸಂಘ, ಮುಂಬೈ )
ಶ್ರೀ ದಯಾನಂದ ಶೆಟ್ಟಿ ಎಳತ್ತೂರು ಗುತ್ತು ( ಅಧ್ಯಕ್ಷರು, ನವೋದಯ ಕನ್ನಡ ಸೇವಾ ಸಂಘ ಹಾಗೂ ಕಾರ್ಯಧ್ಯಕ್ಷರು, ನವೋದಯ ಆಂಗ್ಲ ಮಾಧ್ಯಮ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು, ಥಾಣೆ )
ಶ್ರೀ ದಯಾನಂದ ಪೂಜಾರಿ (ಕಲಾ ಪೋಷಕರು, ಉದ್ಯಮಿ & ನಿರ್ದೇಶಕರು, ದ. ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ )
ಇವರು ಆಗಮಿಸಲಿದ್ದಾರೆ.



















ಆ ದಿನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಮುಂಬೈ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರುಗಳಾದ ಶ್ರೀ ಮನೋಜ್ ಹೆಜಮಾಡಿ
(ಯಕ್ಷಗಾನ ಕಲಾವಿದರು),ಶ್ರೀ ಸುಧಾಕರ ಪೂಜಾರಿ(ಯಕ್ಷಗಾನ ಕಲಾವಿದರು), ಶ್ರೀ ರವಿ ಹೆಗ್ಡೆ ಹೆರ್ಮುಂಡೆ(ತಾಳಮದ್ದಳೆ ಅರ್ಥದಾರಿ ),
ಶ್ರೀ ಪ್ರಭಾಕರ್ ಕುಂದರ್(ಯಕ್ಷಗಾನ ಕಲಾವಿದರು),
ಶ್ರೀ ಗೋವಿಂದ ಸಪಲಿಗ (ಯಕ್ಷಗಾನ ಕಲಾವಿದರು),
ಶ್ರೀ ಪ್ರಸಾದ ಪೂಜಾರಿ(ಯಕ್ಷಗಾನ ಕಲಾವಿದರು),
ಶ್ರೀ ರಾಜೇಶ್ ಮೊಯ್ಲಿ (ಯಕ್ಷಗಾನ ಕಲಾವಿದರು),
ಶ್ರೀಮೋಹನದಾಸ ರೈ(ಯಕ್ಷಗಾನ ಭಾಗವತರು)
ಶ್ರೀ ಸುಧಾಕರ ಶೆಟ್ಟಿ (ಯಕ್ಷಗಾನ ಕಲಾವಿದರು),
ಶ್ರೀ ತೇಜಸ್ ಹರೀಶ್ ಶೆಟ್ಟಿ (ಹಿಮ್ಮೇಳ ಕಲಾವಿದರು
ಇವರನ್ನು ಸಪತ್ನೀಕರಾಗಿ ಗೌರವಿಸಲಾಗುವುದು.

ಕಲಾಭಿಮಾನಿಗಳು ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಸಂಚಾಲಕರು ಮತ್ತು ಕಲಾವಿದರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೊಳ್ಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























































































Related posts

ಮೇ. 31 ರಂದು ಮಲಾಡ್ ಪೂರ್ವ ದ  ಉತ್ಕರ್ಷ ಶಾಲೆಯ ಮೈದಾನದಲ್ಲಿ ಸ್ವಾಮೀ ಕೊರಗಜ್ಜ ನೇಮೋತ್ಸವ.

Mumbai News Desk

ಜ. 22 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಅಯೋಧ್ಯ ಮೂರ್ತಿ ಪ್ರತಿಷ್ಠೆಯ ಅಂಗವಾಗಿ ವಿಶೇಷ ಪೂಜೆ

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ – ಜು. 20ಕ್ಕೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ

Mumbai News Desk

ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ತಾ.29/11/2025 ರಂದು ಕೃತಿ ಸಮೀಕ್ಷೆ ಕಾರ್ಯಕ್ರಮ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ 8 ರಿಂದ 10 ನೇ ತರಗತಿಗೆ ನೇರ ಪ್ರವೇಶ. : ತುಳು ಕನ್ನಡಿಗರಿಗೆ ಸದಾವಕಾಶ

Mumbai News Desk