
ಮುಂಬಯಿ ಅ 22 : ಮಲಾಡ್ ಪೂರ್ವ ಕುರಾರ್ ವಿಲೇಜ್ ಸಿದ್ದಕ್ಕಿ ಕಾಂಪೌಂಡ್ , ಸಲ್ಲಾವುದ್ದೀನ್ ಚಾಲ್ ಇಲ್ಲಿನ ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್ ಇದರ ವತಿಯಿಂದ ನವರಾತ್ರಿ ಪೂಜೆಯು ಅ 24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಅಂದು ಬೆಳಿಗ್ಗೆ 9:00 ರಿಂದ ಭಜನೆ ನಂತರ ಮಹಾ ಮಂಗಳಾರತಿ ದೇವಿ ದರ್ಶನ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಟ್ರಸ್ಟಿನ ಪರವಾಗಿ ಶಂಕರ್ ಸುವರ್ಣ ಸ್ವಾಮೀಜಿ ಅವರು ವಿನಂತಿಸಿದ್ದಾರೆ.