
ಧಾರವಿಯಲ್ಲಿ ಎನ್ಲೈಟನ್ ಫೌಂಡೇಶನ್ ತನ್ನ ಏಳನೆ ವಾರ್ಷಿಕೋತ್ಸವ ಸಮಾರಂಭವನ್ನು ಯಶಸ್ವಿಯಾಗಿ ಆಚರಿಸಿತು. ಈ ಫೌಂಡೇಶನ್ ಭಾರತ ರತ್ನ ಡಾ. A P J ಅಬ್ದುಲ್ ಕಲಾಂ ಅವರ ಆದರ್ಶಗಳ ಮೇಲೆ ಆಧಾರಿತವಾಗಿದೆ. ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಭಾರತೀಯ ಸಮಾಜದ ಬೆಳವಣಿಗೆಗೆ ಮುಖ್ಯ ಸಂದರ್ಭಗಳಲ್ಲಿ ಅತ್ಯಂತ ಮುಖ್ಯವಾದ ವ್ಯಕ್ತಿಗಳಲ್ಲೊಬ್ಬರು. ಅವರು ಶಿಕ್ಷಣ, ಅನುಭವ, ಮತ್ತು ಸಮರ್ಥತೆಯ ಮೂಲಕ ವ್ಯಕ್ತಿತ್ವ ಅಭಿವೃದ್ಧಿಗೆ ಉದಾಹರಣೆಯಾಗಿದ್ದರು. ಅವರ ಆದರ್ಶಗಳನ್ನು ಅನುಸರಿಸಿ ಈ ಫೌಂಡೇಶನ್ ಸಮಾಜದ ಉನ್ನತಿಗೆ ಕೆಲಸ ಮಾಡುತ್ತಿದೆ.
ಈ ಸಂಸ್ಥೆಯ ಉದ್ದೇಶಗಳು ಸಮಾಜದಲ್ಲಿ ಐಕ್ಯತೆಯನ್ನು ಬೆಳೆಸುವುದು, ಶಿಕ್ಷಣ ನೀಡುವುದು, ಶಾಂತಿಯನ್ನು ಉಳಿಸುವುದು ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು. ಈ ಉದ್ದೇಶಗಳ ಮೂಲಕ ಸಮಾಜದ ಸಮೃದ್ಧಿ ಮತ್ತು ಸಮರಸತೆಯ ಸಾಧನೆಗೆ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.




ಎನ್ಲೈಟನ್ ಫೌಂಡೇಶನ್ ಮುಖ್ಯಸ್ಥ ರಾಜೇಶ ಕುಮಾರ ಹಾಗೂ ಸದಸ್ಯರಾದ ಸುರೇಶ್ ಬಡಿಗೇರಿ, ರಾಜು ಜೈಗಾರ್, ರಾಜು ರಾವ್, ಶಿವಲಿಂಗ ಬೋರ್, ತಿಮ್ಮೇಶ್ ಕಲರ್ ಉಪ್ಥಿತರಿದ್ದರು.
ಮಕ್ಕಳಿಗೆ ಶಾಲೆ ಬ್ಯಾಗ್‌ಗಳು ಶಿಕ್ಷನಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಅವರ ಶಿಕ್ಷಣದ ಸಾಧನೆಗೆ ಸಹಾಯ ಮಾಡುತ್ತವೆ ಎಂದು ಭಾವಿಸಿ. ಈ ಸಂದರ್ಭದಲ್ಲಿ ಬ್ಯಾಗ್‌ಗಳ ವಿತರಣೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ K V ಅಶೋಕ್ ಕುಮಾರ್, P S ಪಠಾಣ್, ಮತ್ತು ಕಾಸಿ ಲಿಂಗಮ್ ಉಪಸ್ಥಿತರಿದ್ದರು.ಅವರು ಸಂಸ್ಥೆಯ ಕಾರ್ಯಗಳನ್ನು ಪ್ರಶಂಸಿಸಿ ಶುಭಕೋರಿದ್ದರು. ಅವರ ಉಪಸ್ಥಿತಿಯು ಈ ಸಂಘಟನೆಗೆ ಅಧಿಕ ಗೌರವವನ್ನು ನೀಡಿದೆ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾಗಿತ್ತು.
ಕೊನೆಗೆ, ಮಕ್ಕಳಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
