
ಮಹಿಳೆಯರ ಸೌಂದರ್ಯ, ಆತ್ಮವಿಶ್ವಾಸ ಮತ್ತು ಸಬಲೀಕರಣವನ್ನು ಆಚರಿಸುವ ಪ್ರಮುಖ ಜಾಗತಿಕ ವೇದಿಕೆ ಮೈಲ್ ಸ್ಟೋನ್ ಪೆಜೆಂಟ್ ಸಂಸ್ಥೆ ಪ್ರತಿವರ್ಷ ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಏಷ್ಯಾ ಇಂಟರ್ನೆಷನಲ್ ಸ್ಪರ್ಧೆಯನ್ನು ಆಯೋಜಿಸುತ್ತಾ ಬರುತಿದೆ.
ಮೈಲ್ ಸ್ಟೋನ್ ಮಿಸ್ ಹಾಗೂ ಮಿಸೆಸ್ ಏಷ್ಯಾ 2024 ರ ಸ್ಪರ್ಧೆ ಥಾಯ್ಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಏಪ್ರಿಲ್ 20 ರಂದು ನಡೆದಿದಿದ್ದು, ಪ್ರಭಾ ಎನ್ ಸುವರ್ಣ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ, ಪ್ರಭಾ ಅವರಿಗೆ ಮೈಲ್ ಸ್ಟೋನ್ ಸೋಷಯಲ್ ಮೀಡಿಯಾ ಕ್ವೀನ್ ಬಿರುದು ನೀಡಿ ಗಣ್ಯರು ಕಿರೀಟಧಾರಣೆ ಮಾಡಿದರು.ಸ್ಪರ್ಧೆಯಲ್ಲಿ 20 ದೇಶಗಳ 30 ಮಹಿಳೆಯರು ಭಾಗವಹಿಸಿದ್ದರು.

ಸ್ಪರ್ಧೆಯು ವಿವಿಧ ವಿಭಾಗದಲ್ಲಿ ನಡೆದು, ಅಂತಿಮ ಸುತ್ತಿನಲ್ಲಿ ವಿಜೇತರ ಹೆಸರನ್ನು ತೀರ್ಪುಗಾರರು ಘೋಷಿಸಿದರು.
ದೇಶ-ವಿದೇಶದಲ್ಲಿ ವಿವಿಧ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ದಿಸುತ್ತಿರುವ ಪ್ರಭಾ ಎನ್ ಸುವರ್ಣ ಅವರು “ಮಿಸೆಸ್ ಇಂಡಿಯಾ ಕರ್ನಾಟಕ-ಮಂಗಳೂರು” ಸೀಸನ್ 3ರ ವಿಜೇತರಾಗಿರುವರು.
ಬಹುಮುಖ ಪ್ರತಿಭೆಯ ಪ್ರಭಾ ಸುವರ್ಣ ಅವರು ಬಿಲ್ಲವರ ಎಸೋಸಿಯೇಷನ್ ನ ಮಹಿಳಾ ವಿಭಾಗ, ಕನ್ನಡ ಸಂಘ ಸಾಯನ್ ನ ಸಾಂಸ್ಕೃತಿಕ ಸಮಿತಿ, ಯಂಗ್ ಮೆನ್ಸ್ ಎಜುಕೇಶನ್ ಸೊಸೈಟಿ, ಮುಂಬಯಿ ಕನ್ನಡ ಸಂಘ, ಹೀಗೆ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಸೇವಾ ನಿರತರಾಗಿರುವರು.




ಮೈಲ್ ಸ್ಟೋನ್ ಮಿಸೆಸ್ ಎಷ್ಯಾ ಇಂಟರ್ನೆಷನಲ್ 2024 ರ ರನ್ನರ್ ಅಪ್ ಆದ ಪ್ರಭಾ ಎನ್ ಸುವರ್ಣ ಅವರು “ಪ್ರಶಸ್ತಿ ಗೆಲ್ಲುವಲ್ಲಿ ಪತಿ ಎನ್. ಪಿ. ಸುವರ್ಣ ಅವರ ಸಂಪೂರ್ಣ ಬೆಂಬಲ, ನನ್ನ ಆತ್ಮವಿಶ್ವಾಸ, ಛಲದಿಂದ ಇದೆಲ್ಲಾ ಸಾಧ್ಯವಾಯಿತು. ನಮ್ಮ ದೇಶದ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲಾ ಎಂದು ಜಾಗತಿಕ ವೇದಿಕೆಯಲ್ಲಿ ಸಾಭಿತು ಪಡಿಸುವ ಇಚ್ಛೆಯಿಂದ, ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ದ್ವಿತೀಯ ಸ್ಥಾನ ಗಳಿಸಿದ್ದು ಸಂತಸ ತಂದಿದೆ” ಎಂದು ಮಾಧ್ಯಮದೊಂದಿಗೆ ತನ್ನ ಅನಿಸಿಕೆ ವ್ಯಕ್ತ ಪಡಿಸಿದರು.
ಯಾವುದೇ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುವ ಪ್ರಭಾ ಅವರು ಮಹಿಳೆಯರು ಪ್ರತಿಭೆ, ಆತ್ಮವಿಶ್ವಾಸ, ಛಲದಿಂದ ಇಳಿ ವಯಸಿನಲ್ಲೂ ಸಾಧನೆ ಮಾಡಬಹುದು ಎನ್ನುವುದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ.