
ಉಡುಪಿಯ ಶ್ರೀ ಕೃಷ್ಣ ಮುಖ್ಯಪ್ರಾಣ ಮತ್ತು ಅನಂತೆಶ್ವರ ದೇವಸ್ಥಾನ ಕ್ಕೆ ಸಂಬಂಧಪಟ್ಟ ನಗರದ ಕಾರಣಿಕದ ದೈವಸ್ಥಾನ ಬೊಬ್ಬರ್ಯ ಮತ್ತು ಪರಿವಾರ ದೈವಗಳ ದೈವಸ್ಥಾನ ಇಲ್ಲಿ ಮೇ 30 ರಂದು ಕಲ್ಕುಡ ಮತ್ತು ಕೊರಗಜ್ಜ ದೈವಗಳ ನೇಮಕ್ಕೂ ಮೊದಲು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ವಿಕ್ಕಿ ಪೂಜಾರಿ ಮಡುಂಬು ಇವರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷರುಗಳಾದ ವಿನೋದ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಮಮತಾ ಶೆಟ್ಟಿ, ಪ್ರಕಾಶ್ ಕುಮಾರ್, ಸುಧಾಕರ್ ಶೆಟ್ಟಿ, ಅಧ್ಯಕ್ಷ ವರದರಾಜ ಕಾಮತ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಕೋಶಾಧಿಕಾರಿ ಸಮಿತ್ ಶೆಟ್ಟಿ, ಅತಿಥಿಗಳಾದ ಖ್ಯಾತ ವಕೀಲ ಸಂಕಪ್ಪ ಅಮೀನ್ ಹಾಗು ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.