24.7 C
Karnataka
April 3, 2025
ಮುಂಬಯಿ

ಅಂಧೇರೀ ಪಶ್ಚಿಮದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಗೋವಿಂದ ಪುತ್ರನ್ ಒಡೆಯರಬೆಟ್ಟು ಆಯೋಜನೆಯಲ್ಲಿ ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆ .



ಸ್ಪರ್ಧೆಯಲ್ಲ, ಧರ್ಮದ ಹಾದಿಯಲ್ಲಿ ನಡೆಯಲು ಪ್ರೇರಣೆ ಭಜನಾ ಸ್ಪರ್ಧೆ – ಇನ್ನಂಜೆ ಚಂದ್ರಹಾಸ್ ಗುರುಸ್ವಾಮಿ

ಚಿತ್ರ ವರದಿ : ದಿನೇಶ್ ಕುಲಾಲ್

ಮುಂಬಯಿ ಜೂ 7. ಮೊಗವೀರ ಸಮಾಜದ ಹಿರಿಯ ಸಮಾಜಸೇವಕ, ಧಾರ್ಮಿಕ ಮುಖಂಡ ಗೋವಿಂದ ಎನ್ ಪುತ್ರನ್ ಒಡೆಯರಬೆಟ್ಟು ಅವರ ಪ್ರಾಯೋಜಕತ್ವದಲ್ಲಿ ಶ್ರೀಮದ್ಭಾರತ ಮಂಡಳಿಯ ಸಂಚಾಲಕತ್ವದಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಮಂದಿರ ಅಂಧೇರೀ ಪಶ್ಚಿಮ ಇಲ್ಲಿ ಜೂನ್ 2 ರಂದು, ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆಯು ನಡೆಯಿತು.
ಬೆಳಿಗ್ಗೆ ಸ್ಪರ್ಧೆಯನ್ನು ಗೋವಿಂದ ಪುತ್ರನ್ ಹಾಗೂ ಮೊಗವೀರ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ದೀಪ ಬೆಳಗಿಸಿ ಚಾಲನೆಗೊಂಡಿತು.

ಸಂಜೆ ನಡೆಯದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಅಯ್ಯಪ್ಪ ಭಕ್ತವೃಂದ ಅಂಧೇರಿ ಇದರ ಸಂಸ್ಥಾಪಕ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ, ಅವರು ಮಾತನಾಡಿ ಮಹಾನಗರದ ಪ್ರತಿ ಉಪನಗರಗಳಲ್ಲೂ ಭಜನೆ ಸ್ಪರ್ಧೆಗಳು ನಡೆಯಬೇಕು, ಭಜನೆ ಜನರನ್ನು ಜಾಗೃತಿಗೊಳಿಸುತ್ತದೆ,ಇಂದು ನಡೆದ ಸ್ಪರ್ಧೆ ,ಸ್ಪರ್ಧೆ ಆಗದೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಭಜನೆ,ಧರ್ಮ ಜಾಗೃತಿಯ ಸೇವೆಯಾಗಿದೆ. ಅಯ್ಯಪ್ಪ ಸ್ವಾಮಿಯ ಪೂಜೆಯ ಸಂದರ್ಭದಲ್ಲಿ ನಡೆದ ಭಜನೆಯನ್ನು ನೋಡಿ ಮಕ್ಕಳಿಗೆ ಭಜನೆಯ ಅವಕಾಶವನ್ನು ಮಾಡಿಕೊಡಬೇಕೆನ್ನುವ ಸಂಕಲ್ಪವನ್ನು ಮಾಡಿದ್ದಾರೆ ಅದು ಬಹಳ ಉತ್ತಮ ರೀತಿಯಲ್ಲಿ ಇಂದು ನಡೆದಿದೆ. ಮನಸ್ಸಿಗೆ ಶಾಂತಿ ನೆಮ್ಮದಿಗಾಗಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಭಕ್ತಿಯಿಂದ ದೇವರಿಗೆ ಭಜನೆಯನ್ನು ಸಮರ್ಪಿಸಿದ್ದೀರಿ ಎಂದು ಎಲ್ಲರೂ ತಿಳಿದುಕೊಳ್ಳಬೇಕು . ಹಿಂದಿನ ಕಾಲದಲ್ಲಿ ಸಂಜೆ ಪ್ರತಿ ಮನೆಯಲ್ಲೂ ಭಜನೆ ನಡೆಯುತ್ತಿತ್ತು .ಆದರೆ ಪ್ರಸ್ತುತ ಕಾಲದಲ್ಲಿ ಮನೆಯಲ್ಲಿ ಭಜನೆ ನಡೆಯುವುದು ಕಷ್ಟವಾಗಿದೆ,ಕಾರಣಮನೆಯಲ್ಲಿ ಹಿರಿಯರು ಮಾತ್ರ ಇರುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳು ಭಕ್ತಿಯಿಂದ ಭಜನೆಯನ್ನು ಬಜಿಸಿದ್ದೀರಿ ಅದೆಲ್ಲವನ್ನು ಭಗವಂತ ಸ್ವೀಕರಿಸಿದ್ದಾನೆ ಎನ್ನುವ ನಂಬಿಕೆ ನಿಮ್ಮಲ್ಲಿರಲಿ ಎಂದು ಆಶೀರ್ವದಿಸಿದರು.

ಗೌರವ ಅತಿಥಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈಯ ಅಧ್ಯಕ್ಷ ಹೆಚ್. ಅರುಣ್ ಕುಮಾರ್ ಮಾತನಾಡಿ ಭಜನೆ,ಸನಾತನ ಧರ್ಮದ ಪ್ರತೀಕ, ಭಜನೆ ಉಳಿಯಬೇಕು ಮಕ್ಕಳಲ್ಲಿ ಇನ್ನಷ್ಟು ಅಭಿರುಚಿ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಗೋವಿಂದ ಪುತ್ರನ್ ರವರ ಈ ಸೇವಾ ಕಾರ್ಯ ಅಭಿನಂದನೀಯ ಎಂದು ನುಡಿದರು.

ಶ್ರೀಮದ್ಭಾರತ ಮಂಡಳಿ ಮುಂಬೈ ಇವರು ಅಧ್ಯಕ್ಷರಾದ ಜಗನ್ನಾಥ ಪಿ ಪುತ್ರನ್ ಮಾತನಾಡಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕನ್ನಡ ತುಳು ಭಜನೆಯನ್ನು ಆಳವಾಗಿ ಅಭ್ಯಾಸಿಸಿ ಆ ಮೂಲಕ ದೇವರನ್ನು ಜಪಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ.ಮುಂದಿನ ದಿನಗಳಲ್ಲಿ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಅದಕ್ಕೆ ವಿವಿಧ ಭಜನಾ ಮಂಡಳಿಗೆ ಅವಕಾಶ ನೀಡುತ್ತೇವೆ ಎಂದು ನುಡಿದರು.

ವೇದಿಕೆಯಲ್ಲಿ ಚಂದ್ರಶೇಖರ್ ಸಾಲಿಯಾನ್,ಪ್ರತಾಪ್ ಕರ್ಕೇರ ಉಪಸ್ಥರಿದ್ದರು ಕಾರ್ಯಕ್ರಮವನ್ನು ಶ್ರೀಮದ್ಭಾರತ ಮಂಡಳಿಯ ಕೋಶಧಿಕಾರಿ ಶಾಮ್ ಪುತ್ರನ್, ವಿಶ್ವನಾಥ್ ಪುತ್ರನ್ ನಿರೂಪಿಸಿದರು. ಸ್ಪರ್ಧೆಯ ವಿಜೇತರ ಯಾದಿಯನ್ನು ಭಜನಾ ಗುರು ಪ್ರಫುಲ್ ಶ್ರೀಯನ್ ವಾಚಿಸಿದರು.
ತೀರ್ಪುಗಾರರಾಗಿ ನರೇಶ್ ಕುಮಾರ್ ಸಸಿಹಿತ್ಲು, ಚಂದ್ರಶೇಖರ್ ಕೆ ಸುವರ್ಣ ಸಹಕರಿಸಿದರು.


ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಪಾಲ್ಗೊಂಡಿದ್ದವು ಮಹಾವಿಷ್ಣು ಭಜನಾ ಮಂಡಳಿ ದೊಂಬಿವಲಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ-ಬಾಯಿಂದರ್, ಶ್ರೀ ಮಹಾಲಕ್ಷ್ಮಿ ಬಾಲ ಭಜನಾ ವೃಂದಾ ಅಂಧೇರಿ,
ಶ್ರೀ ವರಮಹಾಲಕ್ಷ್ಮಿ ಭಜನಾ ಮಂಡಳಿ ಮಲಾಡ್, ಜೈ ಗುರುದೇವ ಮಕ್ಕಳ ಭಜನಾ ಮಂಡಳಿ ನವಿ ಮುಂಬೈ. ಹನುಮಾನ್ ಭಜನ ಮಂಡಳಿ ಬೋರಿವಲಿ, ಚಿನ್ನರ ಬಿಂಬ ಮೀರಾ -ಭಯಂದರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸ್ಪರ್ಧೆಯನ್ನು ಆಯೋಜಿಸಿದ ಗೋವಿಂದ ಪುತ್ರನ್ ಅವರನ್ನು ವೇದಿಕೆ ಗಣ್ಯರು ಸನ್ಮಾನಿಸಿದರು. ಸ್ಪರ್ಧೆಗೆ ವಿಶೇಷವಾಗಿ ಸಹಕಾರವನ್ನು ನೀಡಿದ ದಯಾವತಿ ಸುವರ್ಣ, ಮನೋಜ್ ಮೆಂಡನ್, ಅಶೋಕ್ ಕರ್ಕೇರ, ರೇಖಾ ಶಾಮ್ ಸುಂದರ್, ಪ್ರಫುಲ್ ಶ್ರೀಯಾನ್ ಅವರನ್ನು ಗೌರವಿಸಲಾಯಿತು.


ಭಜನೆಯ ಸ್ಪರ್ಧೆಯ ಫಲಿತಾಂಶ

ಕುಳಿತು ಮತ್ತು ಕುಣಿತ ಭಜನೆಯಲ್ಲಿ ಪ್ರಥಮ ಬಹುಮಾನ – ಶ್ರೀ ಮಹಾವಿಷ್ಣು ಮಂದಿರ ಡೊಂಬಿವಿಲಿ,
ಕುಳಿತು ಮತ್ತು ಕುಣಿತ ಭಜನೆಯಲ್ಲಿ ದ್ವಿತೀಯ ಬಹುಮಾನ – ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ ಭಾಯಂದರ್ ಶಾಖೆ
ಕುಣಿತ ಭಜನೆಯಲ್ಲಿ ತೃತೀಯ ಬಹುಮಾನ –
ಶ್ರೀ ವರಮಹಾಲಕ್ಷ್ಮಿ ಭಜನಾ ಮಂಡಳಿ ಮಲಾಡ್,
ಕುಳಿತು ಭಜನೆಯಲ್ಲಿ ತೃತೀಯ ಬಹುಮಾನ –
ಶ್ರೀ ಮಹಾಲಕ್ಷ್ಮಿ ಬಾಲ ಭಜನಾ ವೃಂದಾ ಅಂಧೇರಿ.

Related posts

ಫೆ 5 ಮತ್ತು 6ರಂದು ಮುಂಬೈಯ ಕೆಲ ಭಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆ ಸ್ಥಗಿತ

Mumbai News Desk

ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್, ವಾರ್ಷಿಕೋತ್ಸವ, ಯಕ್ಷಗಾನ ಪ್ರದರ್ಶನ

Mumbai News Desk

2023/24 ಎಚ್ ಎಸ್ ಸಿ . ಪರೀಕ್ಷೆಯಲ್ಲಿ  ಆಶಿಶ್ ಅಶೋಕ್ ಕುಲಾಲ್ ಶೇ.84.33%

Mumbai News Desk

ಸ್ವಾಮಿ ನಿತ್ಯಾನಂದಮಂದಿರ ಬೊಯಿಸರ್ ನಲ್ಲಿ ದೇವೀ ಜಪಪಾರಾಯಣ ಸಂಪನ್ನ

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್; ಭಕ್ತಿ ಸಡಗರದಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ.

Mumbai News Desk

ಕರ್ನಾಟಕ ಸಂಘ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk