
ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯು ದಿನಾಂಕ:14-06-2024 ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನಲ್ಲಿ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವಾಸುದೇವ ಅಸ್ರಣ್ಣರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ ಹಾಗೂ ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಕಟೀಲಿನ ಕುದ್ರುವಿನಲ್ಲಿ ಬಿಲ್ವಾ ಪತ್ರೆಯ ಗಿಡ ನೆಟ್ಟು ಪ್ರಾರ್ಥಿಸಿದರು






ಈ ಸಂದರ್ಭದಲ್ಲಿ ಶ್ರೀಮತಿ ಗೀತಾಂಜಲಿ. ಎಂ.ಸುವರ್ಣ , ಶ್ರೀಮತಿ ವೀಣಾ .ಎಸ್. ಶೆಟ್ಟಿ, ಶ್ರೀ ಚಂದ್ರಹಾಸ ನಿರ್ಮಲ ದಂಪತಿಗಳು ಕಟೀಲು, ಶ್ರೀಮತಿ ವಾರಿಜ.ಆರ್. ಕಲ್ಮಾಡಿ , ಶ್ರೀ ವಿಜಯ ಕುಂದರ್,ಶ್ರೀ ಜಯರಾಮ ಶೆಟ್ಟಿಗಾರ್ ,ಶ್ರೀಮತಿ ರಮಿತ. ಆರ್ .ಪೂಜಾರಿ , ಮನೀಶ್ ಸಂದೀಪ್ ಪೂಜಾರಿ, ನಾಗೇಶ್ ಕುಲಾಲ್ ಅದ್ಯಪಾಡಿ, ಸತೀಶ್ ದೇವಾಡಿಗ, ಶಶಾಂಕ್, ಕಾರ್ತಿಕ್ ಮುಲ್ಕಿ ,ಚಂದನ್ ಉಪಸ್ಥಿತರಿದ್ದರು.