
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಪ್ರತಿ ವರ್ಷ ನಡೆಯುವ ಆಟಿದೊಂಜಿ ದಿನ ಕಾರ್ಯಕ್ರಮ ಇದೇ ತಾರೀಕು ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಗೋರಕ್ಷನಾಥ ಮಿನಿ ಹಾಲ್ ಕದ್ರಿ ಪಾರ್ಕ್ ಮಂಗಳೂರು ಇಲ್ಲಿ ನಡೆಯಲಿದೆ ಈ ಕಾರ್ಯಕ್ರಮವನ್ನು ಶ್ರೀ ನವೀನ್ ಶೆಟ್ಟಿ ಹೆಡ್ಮೆಮಾರು ಇವರು ಉದ್ಘಾಟಿಸಿ ಆಟಿದ ಮುಡಿಪು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಆಟಿದ ವೈಶಿಷ್ಠತೆಯನ್ನು ಹೇಳಲಿರುವರು ತದನಂತರ ತುಳು ಸಾಂಸ್ಕೃತಿ ಕಾರ್ಯಕ್ರಮ, ಮನೋರಂಜನೆಗಳು ನಡೆಯಲಿದೆ ಮಧ್ಯಾಹ್ನ 1 ಗಂಟೆಗೆ ಆಟಿದ ಊಟ ಏರ್ಪಡಿಸಲಾಗಿದೆ ಎಂದು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರು ಶ್ರೀ ಪ್ರಕಾಶ್ ಮೂಲತ್ವ ಇವರು ತಿಳಿಸಿರುತ್ತಾರೆ