
ಚಿತ್ರ ವರದಿ : ಸತೀಶ್ ಶೆಟ್ಟಿ.
ಶ್ರೀ ದುರ್ಗಾ ಕಾಳಿ ಮಂದಿರ, ಸ್ವರ್ಗೀಯ ಪರಮ ಪೂಜ್ಯ ಶ್ರೀ ಬಾಲಗಂಗಾಧರ್ ಸ್ವಾಮೀಜಿಯವರ ಆಶ್ರಮದಲ್ಲಿ, ಅಕ್ಟೋಬರ್ 15 ರ ಮಂಗಳವಾರದಿಂದ ಆರಂಭವಾಗಿದ್ದ ನವರಾತ್ರಿ ಉತ್ಸವವು , ಶ್ರದ್ದೆ ಭಕ್ತಿ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆದು 24 ರಂದು ಸಂಪನ್ನ ಗೊಂಡಿತು.
ಪ್ರತಿದಿನ ನೂರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಮಹಾ ಪ್ರಸಾದ ಸ್ವೀಕರಿಸಿದರು.




ಅಕ್ಟೋಬರ್ 24 ರ ದಸರದಂದು ಬೆಳಿಗ್ಗೆ ಅಲಂಕಾರ ಪೂಜೆ ಮಹಾಮಂಗಳಾರತಿಯ ನಂತರ ಮಾತ ಅನ್ನಪೂರ್ಣೇಶ್ವರಿ ಮಾತಾಜಿ ಆಶೀರ್ವಾದ ಅನುಸಾರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಪರಿಸರದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.