ಭಾಯಂದರ್,ಆ.3.ಮೀರಾಭಾಯಂದರ್ ಪರಿಸರದಲ್ಲಿ ಸಾಮಾಜಿಕದೊಂದಿಗೆ ಕಲಾ ಸೇವೆಯನ್ನು ಮಾಡುತ್ತಾ ಜನಪ್ರಿಯತೆಯನ್ನು ಪಡೆದಿರುವ ಬಂಟ್ಸ್ ಪೋರಮ್ ಮೀರಾಭಾಯಂದರ್ ಸಂಸ್ಥೆಯ ಆಯೋಜನೆಯಲ್ಲಿ ಆ.7 ರಂದು ಬುಧವಾರ ಸಾಯಂಕಾಲ ಗಂಟೆ 3 ರಿಂದ ಭಾಯಂದರ್ ಪೂರ್ವದ ಮೀರಾಭಾಯಂದರ್ ರೋಡ್ ಕ್ರೌನ್ ಬಿಜಿನೆಸ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಹಾಲ್ ಇಲ್ಲಿ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇವರಿಂದ” ಭೀಷ್ಮ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾಗವತರಾದ ಬಲಿಪ ಶಿವಶಂಕರ್ ಭಟ್, ಅರ್ಥಧಾರಿ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಇವರನ್ನು ಸನ್ಮಾನಿಸಲಾಗುವುದು ಹಾಗೂ ಪರಿಸರದ ಪ್ರತಿಭೆಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.ಮೀರಾಗಾಂವ್ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್ ಆಶೀರ್ವಚನ ನೀಡಲಿದ್ದಾರೆ .ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ, ಅತಿಥಿಗಳಾಗಿ ಸಮಾಜ ಸೇವಕ,ಹೋಟೇಲು ಉದ್ಯಮಿ ಮುಂಡಪ್ಪ ಎಸ್. ಪಯ್ಯಡೆ, ಉದ್ಯಮಿ ಕಾಶಿಮೀರಾ ಭಾಸ್ಕರ್ ಶೆಟ್ಟಿ,ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ,ಜತೆ ಕಾರ್ಯದರ್ಶಿ ಸಿದ್ಧಕಟ್ಟೆ ರಮೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ ಹಾಗೂ ಯುವ ರಾಜಕೀಯ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಆಗಮಿಸಲಿರುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಬೇಕಾಗಿ ಬಂಟ್ಸ್ ಪೊರಮ್ ಅಧ್ಯಕ್ಷ ಉದಯ್ ಎಮ್ ಶೆಟ್ಟಿ, ಮಲಾರ್ ಬೀಡು, ಸಂಚಾಲಕ ಅನಿಲ್ ಆರ್.ಶೆಟ್ಟಿ ಎಲ್ಲೂರು ಒಡಿಪರಗುತ್ತು, ಉಪಾಧ್ಯಕ್ಷರುಗಳಾದ ದಿವಾಕರ್ ಶೆಟ್ಟಿ ಶಿರ್ಲಾಲ್, ಹರ್ಷ್ ಕುಮಾರ್ ಡಿ. ಶೆಟ್ಟಿ ಪಾಂಗಾಳ, ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರ್, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಕವಾನಿ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಶೆಟ್ಟಿ,ಜತೆ ಕಾರ್ಯದರ್ಶಿ ಶರ್ಮಿಳಾ ಕೆ.ಶೆಟ್ಟಿ, ಜತೆ ಕೋಶಾಧಿಕಾರಿ ಮಧುಕರ್ ಎಸ್.ಶೆಟ್ಟಿ ಅಜೆಕಾರು, ಕಾರ್ಯಕ್ರಮದ ಸಂಯೋಜಕ ಪ್ರಸಾದ್ ವಿ.ಶೆಟ್ಟಿ ನೀರೆ ಬೈಲೂರು , ವಿನಂತಿಸಿಕೊಂಡಿದ್ದಾರೆ.

previous post