ಜೋಗೇಶ್ವರಿ ಪೂರ್ವ, ಕೆ ಎಸ್ ರೋಡ್ – ಕೃಷ್ಣ ನಗರ ಗುಂಪಟೇಕ್ಡಿ ಸಮೀಪದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಪ್ರತಿವರ್ಷದಂತೆ, ಈ ಬಾರಿಯೂ ನಾಗರ ಪಂಚಮಿ ಉತ್ಸವ ಅ. 9 ರಂದು ಶುಕ್ರವಾರ ಜರಗಲಿದೆ.
ಅಂದು ಬೆಳ್ಳಿಗೆ ಗಂಟೆ 9 ರಿಂದ ನಾಗತನು,ನಾಗತಂಬಿಲ, ಸಾಮೂಹಿಕ ಆಶ್ಲೇಷ ಬಲಿ, 108 ಸೀಯಾಳ ಅಭಿಷೇಕವಾದ ಬಳಿಕ ಮಹಾಪೂಜೆ ನಡೆಯಲಿದೆ.ಮಹಾಪೂಜೆಯಾದ ನಂತರ ತೀರ್ಥ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಆರಂಭವಾಗಲಿದೆ.
ಭಕ್ತಾದಿಗಳು ನಾಗರಪಂಚಮಿ ಉತ್ಸವಕ್ಕೆ ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ ಶ್ರೀ ಜಗದಂಬಾ ಮಾತೆ, ಶ್ರೀ ನಾಗ ದೇವರು ಹಾಗೂ ಪರಿವಾರ ದೇವರ ಕ್ರಪೆಗೆ ಪಾತ್ರರಾಗುವಂತೆ ದೇವಸ್ಥಾನದ ಪ್ರಧಾನ ಅರ್ಚಕ ನರಹರಿ ತಂತ್ರಿ, ಆಡಳಿತ ಟ್ರಸ್ಟಿ ಸಂಜೀವ ಪಿ. ಪೂಜಾರಿ, ಗೌರವ ಕಾರ್ಯದರ್ಶಿ ಶೇಕರ ಕರ್ಕೇರ ಮತ್ತು ಟ್ರಸ್ಟಿಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
.