
ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕೋಪರ್‌ಖೈರನೆ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆಯನ್ನು ಅಗಸ್ಟ್ 21 ರಂದು ದೀಪ ಪ್ರಜ್ವಲಿಸಿ ಕೇಕ್ ಕತ್ತರಿಸುವ ಮೂಲಕ ಬಲು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರುಗಳಾದ ತೇಜ್ ಕುಮಾರ ಗೌಡ, ಇಂದಿರಾ ಅಂಚನ್, ಸುಭಾಷ್ ಚಾವ್ಲಾ, ಸುಧಾಕರ ಪೂಜಾರಿ, ಕರುಣಾಕರ ಶೆಟ್ಟಿ, ತರ‍್ಸೇಮ್ ಸಿಂಗ್ ಶೈನಿ, ವಿಜಯ್ ಕೇನಿಯ ಮುಂತಾದವರು ಉಪಸ್ಥಿತರಿದ್ದು ಭಾರತ್ ಬ್ಯಾಂಕಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಬ್ಯಾಂಕಿನ ಉತ್ತರೋತ್ತರ ಅಭಿವೃದ್ಧಿಗಾಗಿ ಶುಭ ಹಾರೈಸಿದರು.
ಅತಿಥಿಗಳಾಗಿ ಬಿಲ್ಲವರ ಅಶೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಧರ್ಮದರ್ಶಿ ರಮೇಶ ಎಮ್. ಪೂಜಾರಿ, ಉಪಕಾರ್ಯಾಧ್ಯಕ್ಷ ವಿ. ಕೆ. ಸುವರ್ಣ ಹಾಗೂ ಕೃಷ್ಣ ಎಮ್. ಪೂಜಾರಿ ಶಾಖೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಕೋಪರಖೈರನೆ ಶಾಖೆಯ ಪ್ರಬಂಧಕ ರಾಜೀವ ಎಮ್. ಪೂಜಾರಿ ಅತಿಥಿ ಗಣ್ಯರನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿದರು ಉಪಪ್ರಬಂಧಕ ಧರ್ಮೆಂದ್ರ ಸುವರ್ಣ ಸಿಬ್ಬಂದಿಗಳಾದ ಶ್ರೀನಿಧಿ ಬಂಗೇರ, ಚಂದ್ರಹಾಸ ಅಮೀನ, ಸ್ನೇಹಲ್ ಮೊರಾಜ್ಕರ್, ಶಿಥಿಲ್ ಕುಮಾರ್ ಮತ್ತು ರಿತಿಕಾ ಪೋಶಮ್ ಉಪಸ್ಥಿತರಿದ್ದರು