25.2 C
Karnataka
April 6, 2025
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಕಚೇರಿ – 170ನೇ ಗುರು ಜಯಂತಿ ಆಚರಣೆ.



ಶಿಕ್ಷಣ ಸಂಸ್ಥೆಯನ್ನು ನಿರ್ಮಾಣ ಮಾಡುವ ಮುಂದಿನ ಯೋಜನೆ :ಹರೀಶ್ ಜಿ ಅಮೀನ್

ಚಿತ್ರ, ವರದಿ : ದಿನೇಶ್ ಕುಲಾಲ್

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿಯ ವತಿಯಿಂದ 170ನೇ ಗುರು ಜಯಂತಿ ಆಚರಣೆ ಅ.24ರ ಶನಿವಾರ ಸ್ಥಳೀಯ ಕಚೇರಿಯ ಮಲಾಡ್ ಪೂರ್ವದಲ್ಲಿರುವ
ದಫ್ಟರಿ ರಸ್ತೆಯ ಬ್ರಿಜ್ವಾಸಿ ಕಟ್ಟಡದ ತಲಮಹಡಿಯಲ್ಲಿ ನಡೆಯಿತು.
ಅಸೋಸಿಯೇಶನ್ ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ದೀಪ ಬೆಳಗಿಸಿ ಆಚರಣೆಗೆ ಚಾಲನೆ ನೀಡಿ ಬಳಿಕ ಮಾತನಾಡುತ್ತಾ ಈ ಪರಿಸರದ ಸಮಾಜ ಬಾಂಧವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಹಿರಿಯರು ಈ ಕಚೇರಿಯನ್ನು ಪ್ರಾರಂಭಿಸಿದ್ದಾರೆ. ಇದೀಗ ಈ ಕಟ್ಟಡದಲ್ಲಿ ಹೊಸ ಸಂಕಿರಣ ನಿರ್ಮಾಣವಾಗಲಿದೆ,ಅದರಲ್ಲಿ ನಮ್ಮ ಕಚೇರಿ ಕೂಡ ದೊಡ್ಡ ಮಟ್ಟದಲ್ಲಿ ಜಾಗ ಪಡೆಯುವಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ. ಪರಿಸರದ ಸಮಾಜ ಬಾಂಧವರಿಗೆ ಇದು ಇನ್ನಷ್ಟು ಅನುಕೂಲವನ್ನು ತಂದು ಕೊಡಲಿದೆ .ಅಸೋಸಿಯೇಷನ್ ನಾರಾಯಣ ಗುರುಗಳ ತತ್ವದಂತೆ ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಬಂದಿದೆ ಮುಂದೆ ದಾನಿಗಳ ಸಹಕಾರದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಹರೀಶ್ ಸಾಲಿಯನ್, ಉಪ ಧ್ಯಕ್ಷರಾದ ಜಯಂತಿ ಉಳ್ಳಾಲ್, ಯುವ ಅಭ್ಯುದಯ ಕಾರ್ಯ ಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು ಮತ್ತಿತರ ಗಣ್ಯರು ಉಪಸ್ಥರಿದ್ದರು.
ಗಣ್ಯರನ್ನು ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ ಪೂಜಾರಿ ಮತ್ತು ಗೌರವ ಕಾರ್ಯಧ್ಯಕ್ಷ ಸುರೇಂದ್ರ ಪೂಜಾರಿ, ಉಪ ಕಾರ್ಯಧ್ಯಕ್ಷ ಕೃಷ್ಣ ಪೂಜಾರಿ, ಕಾರ್ಯದರ್ಶಿ ಸುಂದರ್ ಪೂಜಾರಿ, ಕೋಶಧಿಕಾರಿ ನಾರಾಯಣ ಜತ್ತನ್, ಮಹಾಬಲ ಪೂಜಾರಿ, ರಾಮ ಪೂಜಾರಿ, ಗೋಪಾಲ್ ಪೂಜಾರಿ ಮತ್ತಿತರರು ಗೌರವಿಸಿದರು.

ಬಳಿಕ ಭಜನೆ,ಜಪಯಜ್ಞ, ತದನಂತರ ಮಹಾಮಂಗಳಾರತಿ ನಡೆಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕಿನ ಕಾರ್ಯ ಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ. ಹೋಟೆಲ್ ಉದ್ಯಮಿಗಳುದ
ಉದಯ ಕೋಟ್ಯಾನ್, ಸುರೇಂದ್ರ ಶೆಟ್ಟಿ ಹೊಸ್ಮಾರ್, ಉಮೇಶ್ ಕಾಪು,ಸ್ಥಳೀಯ ನಗರ ಸೇವಕಿ ದಕ್ಷಾ ಪೆಟೇಲ್ ಹಾಗೂ ಭಾರತ್ ಬ್ಯಾಂಕಿನ ಉಪಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥ ಅಮೀನ್, ಮಲಾಡ್ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯುರು, ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಗಂಗಾಧರ್ ಜೆ ಪೂಜಾರಿ, ಭಾಸ್ಕರ್ ಎಂ ಸಾಲಿಯನ್, ದಯಾನಂದ್ ಆರ್ ಪೂಜಾರಿ, ನಾರಾಯನ್ ಎಲ್ ಸುವರ್ಣ,ಹರೀಶ್ ವಿ ಪೂಜಾರಿ, ಗಣೇಶ್ ಡಿ ಪೂಜಾರಿ, ನರೇಶ್ ಪೂಜಾರಿ,ಸುರೇಶ್ ಸುವರ್ಣ, ವಿರಾರ್ ನಾಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷರಾದ ಸದಾಶಿವ ಕರ್ಕೇರ ಮತ್ತಿತರರು ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಸ್ಥಳೀಯ ನಗರ ಸೇವಕಿ ದಕ್ಷ ಪಟೇಲ್ ಮಾತನಾಡುತ್ತಾ ಅಸೋಸಿಯೇಷನ್ ಈ ಕಚೇರಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಬಹಳ ಸಂತೋಷದಿಂದ ಪಾಲುಗೊಳ್ಳುತ್ತೇನೆ . ಸಮಾರಂಭದಲ್ಲಿ ಮಹಿಳೆಯರು ದೊಡ್ಡ ಮಟ್ಟದಲ್ಲಿ ಒಗ್ಗಟ್ಟಾಗಿದ್ದಾರೆ. ಅದರ ಅರ್ಥ ಎಲ್ಲ ಮಹಿಳೆಯರು ಜಾಗೃತರಾಗಿದ್ದಾರೆ ಎಂದು. ನಾರಾಯಣ ಗುರುಗಳ ತತ್ವಗಳಂತೆ ಒಗ್ಗಟ್ಟಾಗಿ ಸಮಾಜವನ್ನು ಬಲಿಷ್ಠ ಗೊಳಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ನುಡಿದರು.
ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯುವರು ಮಾತನಾಡುತ್ತಾ ಈ ಪರಿಸರದಲ್ಲಿ ಜಾತಿ ಮತವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಸಮಾಜದ ಕೆಲಸವನ್ನು ಮಾಡುತ್ತಿದ್ದಾರೆ .ಬಿಲ್ಲವರ ಅಸೋಸಿಯೇಷನ್ ನ ಈ ಕಚೇರಿ ಬಹಳಷ್ಟು ಜನಪರ ಕಾರ್ಯಗಳನ್ನು ಮಾಡುವುದಕ್ಕೆ ಅವಕಾಶವನ್ನು ಇಲ್ಲಿಯ ಎಲ್ಲರಿಗೂ ನೀಡುತ್ತಿದೆ ಎಂದು ನುಡಿದರು .
ಭಾರತ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥ್ ಅಮೀನ್ ಮಾತನಾಡಿ ಜಯ ಸುವರ್ಣ ರವರ ಈ ಪರಿಸರದಲ್ಲಿ ಎಲ್ಲಾ ಬಂಧುಗಳು ಒಗ್ಗಟ್ಟಾಗಬೇಕೆನ್ನುವ ಕನಸು ಅವರಲ್ಲಿತ್ತು ಅದರಂತೆ ಈ ಜಾಗವನ್ನು ಪಡೆದುಕೊಂಡಿದ್ದೇವೆ, ಪ್ರಾರಂಭದಲ್ಲಿ ಜಾಗದ ಸುತ್ತಮುತ್ತಲು ಬಹಳಷ್ಟು ಸಮಸ್ಯೆಗಳು ಎದುರಾಗಿದ್ದವು, ಆದರೆ ಈಗ ಸಮಾಜದ ಬಂಧುಗಳಿಗೆ ಅನುಕೂಲವಾಗುವಷ್ಟು ಒಳ್ಳೆಯ ರೀತಿಯಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು.
ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ ಪೂಜಾರಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳೊಂದಿಗೆ ಜಯ ಸುವರ್ಣ ಮಾರ್ಗದರ್ಶನದಂತೆ ಈ ಸ್ಥಳೀಯ ಕಚೇರಿಯ ಸೇವಾ ಕಾರ್ಯಗಳು ಮಾಡುತ್ತಿದೆ . ಸಮಾಜ ಬಾಂಧವರ ಅನುಕೂಲಕ್ಕಾಗಿ ಮತ್ತು ಅವರ ಅಭಿವೃದ್ಧಿಗಾಗಿ ಅಸೋಸಿಯೇಷನ್ ಉತ್ತಮ ಸೇವೆಗಳನ್ನು ಮಾಡುತ್ತಿದೆ ಎಂದು ನುಡಿದರು.

ಅತಿಥಿಗಳನ್ನು ಶೀಲಾ ಪೂಜಾರಿ,ನಳಿನ ಕರ್ಕೇರ‌,ವಿಜಯ ಸುರೇಂದ್ರ ಪೂಜಾರಿ ಮತ್ತಿತರರು ಪರಿಚಯಿಸಿದರೆ ಕಾರ್ಯಕ್ರಮವನ್ನು ಅನಿತಾ ಅಂಚನ್ ನಿರೂಪಿಸಿದರು ಶಾರದಾ ಪೂಜಾರಿ ಧನ್ಯವಾದ ನೀಡಿದರು. ಮಹಾಮಂಗಳಾರತಿಯನ್ನು ಜಯ ಪೂಜಾರಿ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು.

ಸಮಾಜ ಬಲಿಷ್ಠಗೊಳ್ಳಲು ದೇಣಿಗೆ ಮುಖ್ಯವಲ್ಲ ಒಗ್ಗಟ್ಟು ಅಗತ್ಯವಿದೆ: ಸೂರ್ಯಕಾಂತ್ ಜಯ ಸುವರ್ಣ
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರು ಮಾತನಾಡುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಜಯ ಸುವರ್ಣರು ಸಮಾಜವನ್ನು ಬಲಿಷ್ಠ ಮಾಡುವಲ್ಲಿ ಎಲ್ಲರನ್ನೂ ಒಗ್ಗಟ್ಟು ಮಾಡಿದ್ದಾರೆ. ಪ್ರತಿ ಉಪನಗರಗಳಲ್ಲೂ ಸ್ಥಳೀಯ ಕಚೇರಿಯನ್ನು ಪ್ರಾರಂಭಿಸಿ ಅಲ್ಲಿಯ ಸಮಾಜ ಬಾಂಧವರನ್ನು ಒಗ್ಗಟ್ಟು ಮಾಡಿದ್ದಾರೆ ಆದ್ದರಿಂದ ಈ ಮಹಾರಾಷ್ಟ್ರದಲ್ಲಿ ಬಿಲ್ಲವರ ಅಸೋಸಿಯೇಷನ್ ಬಲಿಷ್ಠಗೊಂಡಿದೆ. ಎಲ್ಲರೂ ಒಗ್ಗಟ್ಟಾದಾಗ ದೇಣಿಗೆ ಬಹಳಷ್ಟು ಸಂಗ್ರಹ ವಾಗುತ್ತದೆ, ಆ ಮೂಲಕ ನಮ್ಮ ಸಮಾಜದಯೋಜನೆಗಳು ಸಫಲವಾಗುತ್ತದೆ. ಪರಿಸರದಲ್ಲಿ ಸಮಾಜ ಬಾಂಧವರು ಇನ್ನಷ್ಟು ಬಲಿಷ್ಠರಾಗಬೇಕು ಎಂದು ನುಡಿದರು.

Related posts

ಬಂಟರ ಸಂಘ ವಸಯಿ ದಹಣು ಪ್ರಾದೇಶಿಕ ಸಮಿತಿ,ಹಾಗೂ ತುಳುಕೂಟ ಫೌಂಡೇಶನ್ ಇದರ ಜಂಟಿ ಅಶ್ರಯದಲ್ಲಿ ಶ್ರೀದೇವಿ ಯಕ್ಷ ಕಲಾ ನಿಲಯದ ಮಕ್ಕಳ ಸ್ನೇಹ ಸಮ್ಮಿಲನ

Mumbai News Desk

ಬೈಂದೂರು-ಕುಂದಾಪುರ ಬಿಲ್ಲವರು ಮುಂಬಯಿ ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ  ನಿಧಿ ಸಂತೋಷ್ ಶೆಟ್ಟಿ, ಗೆ ಶೇ 91.80 ಅಂಕ.

Mumbai News Desk

ಶ್ರೀ ಮಹಾವಿಷ್ಣು ದೇವಸ್ಥಾನ ಡೊಂಬಿವಲಿ : 47ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್ ಮುಂಬಯಿ, 41 ನೇ ವಾರ್ಷಿಕ ಮಹಾಪೂಜೆ, ಇರುಮುಡಿ ಸೇವೆ ಸಂಪನ್ನ

Mumbai News Desk

9 ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Mumbai News Desk