
ಮಹಿಳಾ ವಿಭಾಗದ ಸೇವಾ ಕಾರ್ಯ ಪ್ರಾದೇಶಿಕ ಸಮಿತಿಗೆ ಶಕ್ತಿ ತುಂಬಿದೆ:
ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿಯವರ
ಚಿತ್ರ ವರದಿ ದಿನೇಶ್ ಕುಲಾಲ್
ವಸಯಿ ಅ7. ಬಂಟರ ಸಂಘ ಮುಂಬಯಿ ವಸಯಿ ಡಹಣು ಪಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿಯವರ ಮುಂದಾಳತ್ವದಲ್ಲಿ ಮತ್ತು ಸಮಿತಿಯ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ. ಬಂಟರ ಸಂಘದ ಜೊತೆ ಕೋಶಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆಯವರ ಮಾರ್ಗದರ್ಶನದಲ್ಲಿ ಅ 6 ರಂದು
ರಿಜೆನ್ಸಿ ಎನೆಕ್ಸ್, ಗ್ರೀಷ್ಮಾ ಗಾರ್ಡನ್, ಮಧುವನ್ ಹೈಟ್ಸ್ ನ ಬಳಿ, ಗೋಖಿವರೆ ವಸಯಿ ಪೂರ್ವ ಇಲ್ಲಿ ನವರಾತ್ರಿ ಉತ್ಸವ ಪೂಜಾ..ದಾಂಡಿಯಾ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿಯವರು ಮಾತನಾಡುತ್ತಾ ನವರಾತ್ರಿಯ ಈ ಕಾರ್ಯಕ್ರಮ ಅರ್ಥಪೂರ್ಣವಾಗುವಲ್ಲಿ ಮಹಿಳಾ ವಿಭಾಗದ ಒಗ್ಗಟ್ಟು ಸಾಕ್ಷಿಯಾಗಿದೆ. ಮಹಿಳಾ ವಿಭಾಗದ ಭಜನೆ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸಿದೆ. ಪ್ರತಿ ಸಂಘ-ಸಂಸ್ಥೆಯಲ್ಲಿ ಮಹಿಳಾ ವಿಭಾಗ ಹೆಚ್ಚು ಸಕ್ರಿಯವಾದಾಗ ಸಂಘ ಬಲಿಷ್ಠ ಗೊಳ್ಳುತ್ತದೆ ಅದೇ ನಿಟ್ಟಿನಲ್ಲಿ ನಮ್ಮ ಪ್ರಾದೇಶಿಕ ಸಮಿತಿ ಕೂಡ ಬಲಿಷ್ಠಗೊಂಡಿದೆ ಮಹಿಳಾ ವಿಭಾಗದ ಸಹಕಾರದಿಂದ. ಶಶಿಧರ್ ಶೆಟ್ಟಿ ಅವರ ಈ ನೂತನ ಸಭಾಗ್ರಹ ದಲ್ಲಿ ಪೂಜೆ ನಡೆದಂತಾಗಿದೆ. ನಾವು ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಂಡ ಮೇಲೆ ಅದಕ್ಕೆ ಸಮಯ ನೀಡಬೇಕು. ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಪರಿಶ್ರಮ ಮತ್ತು ಸಮಯವನ್ನು ನೀಡುತ್ತಿದ್ದಾರೆ . ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಎಂದು ನುಡಿದರು.





ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ ಮಾತನಾಡುತ್ತಾ ಈ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವೆಂದರೆ ಬಹಳ ಸಂತೋಷವಾಗುತ್ತದೆ ಇಲ್ಲಿಯ ಗ್ರಾಮೀಣ ಪ್ರದೇಶದ ಮಹಿಳೆಯರ ಶಿಸ್ತು ಬದ್ಧ ಕಾರ್ಯಕ್ರಮಗಳು ಅವರ ಆದಿತ್ಯ ಗಳು ಸಂತೋಷವನ್ನು ನೀಡುತ್ತದೆ .
. ಈಪ್ರಾದೇಶಿಕ ಸಮಿತಿಗೆ ಶಶಿಧರ್ ಶೆಟ್ಟಿ ಅವರ ಸಂಪೂರ್ಣ ಸಹಕಾರ ನೀಡಿರುವುದರಿಂದ ಕಾರ್ಯಕ್ರಮಗಳು ವ್ಯವಸ್ಥಾ ರೀತಿಯಾಗಿ ಯಶಸ್ವಿಯಾಗಿ ನಡೆಯುತ್ತದೆ . ಬಂಟರ ಸಂಘದಲ್ಲಿ ಗ್ರಾಮೀಣ ಪ್ರದೇಶದ ಶಶಿಧರ್ ಶೆಟ್ಟಿ ಅವರ ಸಾಧನೆಗೆ ಮತ್ತು ಸೇವಾಕಾರಿಗೆ ಸ್ಥಾನಮಾನ ಗೌರವ ಸಿಕ್ಕಿದೆ, ಅದರಂತೆ ನಾನು ಕೂಡ ಕಲ್ಯಾಣ್ ಎಂಬ ಗ್ರಾಮೀಣ ಪ್ರದೇಶದಿಂದ ಬಂದವಳು ನನ್ನ ಸೇವಕಾರಿಗಳಿಗೆ ಮಹಿಳಾ ವಿಭಾಗದ ಜವಾಬ್ದಾರಿತ ಪದವಿ ನೀಡಿರುವರು. ಪ್ರತಿಯೊಂದು ಮಹಿಳೆಯರು ನಿಸ್ವಾರ್ಥದಿಂದ ಸಮಾಜ ಸೇವೆಯನ್ನು ಮಾಡಿ ಸಾಧನೆಯ ಮೂಲಕ ತಮ್ಮನ್ನು ಗುರುತಿಸಿಕೊಳ್ಳಬೇಕು ಅದರಿಂದ ಮಾತ್ರ ನಮಗೆ ಅಧಿಕಾರಗಳು ಮತ್ತು ಗೌರವಗಳು ನಮ್ಮನ್ನು ಅರಸಿಕೊಂಡು ಬರುತ್ತದೆ.. ಈ ಪರಿಸರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ ಅವರು ಬಹಳಷ್ಟು ವರ್ಷಗಳಿಂದ ಸಮಾಜದ ಸೇವೆಯನ್ನು ಮಾಡುತ್ತ ಬಂದವರು ಅವರನ್ನು ಇಂದು ಸನ್ಮಾನಿಸಿರುದು ಬಹಳ ಸಂತೋಷ ತಂದಿದೆ. ಪ್ರತಿಯೊಂದು ಮಹಿಳೆ ಕೂಡ ಸಮಾಜ ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕು.. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಬಾಳ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದೀರಿ ಎಲ್ಲಾ ಮಹಿಳೆಯರು ವೈಯಕ್ತಿಕ ಮನಸ್ತಪಗಳನ್ನೆಲ್ಲ ಬದಿಗಿಟ್ಟು . ನಾವು ಹುಟ್ಟಿರುವ ಈ ಬಂಟ ಸಮಾಜದ ಮೇಲೆ ಅಭಿಮಾನವನ್ನು ಇರಿಸಿ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ನುಡಿದರು
ವೇದಿಕೆಯಲ್ಲಿ ಬಂಟರ ಸಂಘದ ಜೊತೆ ಕೋಶಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ. ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಉಮಾ ಎಸ್ ಶೆಟ್ಟಿ, .ಸಂಚಾಲಕಿ ಉಷಾ ಶ್ರೀಧರ್ ಶೆಟ್ಟಿ. ಸಲಹೆ ಸಮಿತಿಯ ಕಾರ್ಯಧ್ಯಕ್ಷೆ ಶಶಿಕಲಾ ಶಶಿಧರ್ ಶೆಟ್ಟಿ.
ಉಪ ಕಾರ್ಯಾಧ್ಯಕ್ಷೆ ಅರುಣಾ ಎ ಶೆಟ್ಟಿ, ಕಾರ್ಯದರ್ಶಿ ಸಂಧ್ಯಾ ವಿ ಶೆಟ್ಟಿ, ಕೋಶಾಧಿಕಾರಿ ಜಯಶ್ರೀ ವಿ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಭಾ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸಂಧ್ಯಾ ಯು ಶೆಟ್ಟಿ, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ಜಯ ಎ ಶೆಟ್ಟಿ, ಯುವ ವಿಭಾಗ ಕಾರ್ಯಾಧ್ಯಕ್ಷೆ ಕು. ವರ್ಷಾ ಎಸ್ ಶೆಟ್ಟಿ. ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಳೆದ ಹಲವಾರು ವರುಷಗಳಿಂದ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯೆಯರಾಗಿ ಕೊಡುಗೆ ನೀಡಿ ಪ್ರಸ್ತುತ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಉಮಾ ಸತೀಶ್ ಶೆಟ್ಟಿಯವರನ್ನು ಪ್ರಾದೇಶಿಕ ಸಮಿತಿಯ ಪರವಾಗಿ ಸನ್ಮಾನಿಸಲಾಗುವುದಲ್ಲದೇ, ಹಾಗೂ ಕಳೆದ ಎರಡು ಕಾರ್ಯಾವಧಿಯಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ವಿಠ್ಠಲ ಶೆಟ್ಟಿ ಮತ್ತು ಮಹಿಳಾ ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯೆ ಕುಶಾಲ ದಿನೇಶ್ ಶೆಟ್ಟಿ ಇವರನ್ನು ಅಭಿನಂದಿಸಿ ಗೌರವಿಸಲಾಗುವುದು.
ಗೌರವವನ್ನು ಸ್ವೀಕರಿಸಿದ ಇಬ್ಬರು ಕೃತಜ್ಞತೆ ಸಲ್ಲಿಸುತ್ತಾ ಇನ್ನಷ್ಟು ನಿಸ್ವಾರ್ಥ ಸೇವಾ ಕರ್ತರಿಗೆ ಪ್ರಾದೇಶಿಕ ಸಮಿತಿ ಸನ್ಮಾನಿಸುವಂತಹ ಕಾರ್ಯ ನಡೆಯಲಿ. ನಮ್ಮ ಸೇವಾಕಾರಿಗಳಿಗೆ ಸ್ಪೂರ್ತಿ ನೀಡಿದೆ ಗೌರವ ಎಂದು ನುಡಿದರು
ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ
ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಕಾರ್ಯ ದರ್ಶಿ ಜಗನ್ನಾಥ್ ಡಿ ಶೆಟ್ಟಿ ಪಳ್ಳಿ ಮತ್ತಿತರರು ಸಹಕರಿಸಿದರು.
ನವರಾತ್ರಿ ಉತ್ಸವದ ಅಂಗವಾಗಿ ಪ್ರಾದೇಶಿಕ ಸಮಿತಿಯ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ಹಾಗೂ ಕುಣಿತ ಭಜನಾ ಕಾರ್ಯಕ್ರಮ, ಶ್ರೀದೇವಿ ಯಕ್ಷಕಲಾ ನಿಲಯದ ಮಕ್ಕಳಿಂದ ಕುಣಿತ ಭಜನಾ ಕಾರ್ಯಕ್ರಮ, ಹಳದಿ ಕುಂಕುಮ ಕಾರ್ಯಕ್ರಮವನ್ನು ನಡೆಯಿತು. ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಮಹಿಳಾ ಸದಸ್ಯರು ಉಪಸ್ಥರಿದ್ದು ಗರ್ಭ ಕುಣಿತದಲ್ಲಿ ಪಾಲ್ಗೊಂಡರು
ಸಂಘದಲ್ಲಿ ಬಹಳಷ್ಟು ಯೋಜನೆಗಳಿದೆ ಸದಸ್ಯರಿಗೆ ತಲುಪಬೇಕಾದರೆ ಬಂಟರವಾಣಿಯ ಸದಸ್ಯರಾಗುವುದು ಅಗತ್ಯ::
ಶಶಿಧರ್ ಶೆಟ್ಟಿ ಇನ್ನಂಜೆ ,
ಬಂಟರ ಸಂಘದ ಜೊತೆ ಕೋಶಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ ಅವರು ಮಾತನಾಡುತ್ತಾಇಂದು ಇಬ್ಬರು ಗೌರವ ಸನ್ಮಾನವನ್ನು ಸ್ವೀಕರಿಸಿದವರು ಬಹಳ ವರ್ಷಗಳಿಂದ ಈ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಇವರು ಸೇವಾಕಾರಿಗಳು ಇನ್ನಷ್ಟು ಸಮಿತಿಗೆ ಸಿಗುವಂತಾಗಲಿ. ಮಹಿಳಾ ವಿಭಾಗದಲ್ಲಿ ಕಾರ್ಯ ಧ್ಯಕ್ಷೆ ಸೇವೆ ಮಾಡಿ ನಿರ್ಗಮಿಸಿದ ಸಂದರ್ಭದಲ್ಲಿ ಸನ್ಮಾನಿಸುತ್ತೇವೆ. ಆದರೆ ಉಮಾ ಸತೀಶ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿ ಒಂದು ವರ್ಷದಲ್ಲಿ ಬಹಳಷ್ಟು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ ಎಲ್ಲಾ ಕೆಲಸ ಕಾರ್ಯಗಳನ್ನು ಮುಂದೆ ನಿಂತು ಮಹಿಳೆಯರನ್ನು ಒಗ್ಗಟ್ಟು ಮಾಡುವಲ್ಲಿ ಪರಿಶಮಿಸಿದ್ದಾರೆ ಅವರನ್ನು ಕೂಡ ಇಂದು ಸನ್ಮಾನಿಸಿದ್ದು ಅರ್ಥಪೂರ್ಣವಾಗಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಎಲ್ಲರೂ ಬಾಳ ಭಕ್ತಿಯಿಂದ ಶ್ರದ್ದೆಯಿಂದ ದೇವಿಯ ಸೇವೆಯನ್ನು ಮಾಡಿದ್ದೇವೆ ಆ ಮಾತೆಯ ಅನುಗ್ರಹ ನಮ್ಮ ಎಲ್ಲರಿಗೂ ಸಿಗುವಂತಾಗಲಿ. ಬಂಟರ ಸಂಘದ ಬಂಟರವಾನಿ ಎಲ್ಲರ ಮನೆಗೆ ತಲುಪುವಂತಾಗಬೇಕು ಅದಕ್ಕೆ ಸದಸ್ಯರು ಸದಸ್ಯತನ ಪಡೆದುಕೊಳ್ಳಬೇಕು ಸಂಘದಲ್ಲಿ ಬಹಳಷ್ಟು ಯೋಜನೆಗಳಿದೆ ಅದು ಸದಸ್ಯರಿಗೆ ತಲುಪಬೇಕಾದರೆ ಬಂಟರವಾಣಿ ಸಹಕಾರಿಯಾಗುತ್ತದೆ. ಈ ಬಾರಿ ತುಳು ಕನ್ನಡಿಗರಿಗಾಗಿ ಬಂಟರ ಸಂಘ ಮಹತ್ವವಾದ ಯೋಜನೆ ಒಂದನ್ನು ಪ್ರಕಟಿಸಿತ್ತು ಅದರಲ್ಲಿ ಈ ಪರಿಸರದ ಬಂಟ ಸಮಾಜ ಬಾಂಧವರು ಅದರ ಸದುಪಯೋಗ ಪಡೆದಿಲ್ಲ ಕಾರಣ ಅವರಿಗೆ ಅದರ ಪೂರ್ಣ ಮಾಹಿತಿ ತಿಳಿದಿಲ್ಲ .ಆದ್ದರಿಂದ ಬಂಟರ ಸಂಘದ ಯೋಜನೆಗಳು ಪರಿಸರದ ಬಂಧುಗಳಿಗೆ ತಲುಪುವಂತಾಗಲು ಈ ಪ್ರಾದೇಶಿಕ ಸಮಿತಿ ಕೂಡ ಹೆಚ್ಚು ಗಮನ ಕೊಡಬೇಕು. ಪ್ರಾದೇಶಿಕ ಸಮಿತಿಯ ಸದಸ್ಯರ ವೈದ್ಯಕೀಯ ಮತ್ತು ಶಿಕ್ಷಣಕ್ಕೆ ಮತ್ತಿತರ ಮನವಿಗಳಿದ್ದರೆ ಅದಕ್ಕೆ ಎಲ್ಲದಕ್ಕೂ ಬಂಟರ ಸಂಘ ಸ್ಪಂದಿಸಿದೆ. ಎಲ್ಲರೂ ಒಗ್ಗಟ್ಟಾಗಿ ಪ್ರಾದೇಶಿಕ ಸಮಿತಿಯನ್ನು ಎತ್ತರಕ್ಕೆ ಬೆಳೆಸುವ. ಬಂಟರ ಸಂಘದ ಮಹಿಳಾ ವಿಭಾಗಕ್ಕೆ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಇಬ್ಬರು ಸದಸ್ಯರನ್ನು ಸೇರಿಸಿಕೊಳ್ಳಬೇಕೆಂಬ ಪ್ರಾರಂಭದಿಂದಲೂ ನನ್ನ ಬೇಡಿಕೆ ಇತ್ತು ಅದನ್ನು ಚಿತ್ರ ಶೆಟ್ಟಿಯವರು ನಡೆಸಿದ್ದಾರೆ ಪರಿಸರದ ಮಹಿಳೆಯರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿ ನಮ್ಮನ್ನು ಸನ್ಮಾನಗಳು ಅಧಿಕಾರಗಳು ಹರಸಿಕೊಂಡು ಬರುತ್ತದೆ ಎಂದು ನುಡಿದರು