25 C
Karnataka
April 5, 2025
ಮುಂಬಯಿ

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ



ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸ ಮಂಡಳಿ  ಏಳನೇ ದಿನದ‌ ಸಾಂಸ್ಕೃತಿಕ ಕಾರ್ಯಕ್ರಮ

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ


ಡೊಂಬಿವಲಿ ಅ.10: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ವಜ್ರ ಮಹೋತ್ಸವದ ಸಂಭ್ರಮ ನನ್ನನು ಡೊಂಬಿವಲಿ ನಗರಕ್ಕೆ ಪರಿಚಯಿಸಿದವರು ಗೋಪಾಲ ಶೆಟ್ಟಿಯವರು ನಾನು ಡೊಂಬಿವಲಿ ನಗರದಲ್ಲಿ ಉದ್ಯಮ ಪ್ರಾರಂಭಿಸಿ ಮೂರು ದಶಕಗಳು ಕಳೆದಿದೆ ಮೂವತ್ತು ವರ್ಷದಿಂದ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವತಿಯಿಂದ ಜರಗುವ ನವರಾತ್ರ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಇಲ್ಲಿ ಪ್ರತಿವರ್ಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಇದೆ. ಇಲ್ಲಿ ಸ್ಥಳದ ಅಭಾವ ಇರಬಹುದು ಅದರೆ ಶ್ರೀ ದುರ್ಗೆಯನ್ನು ಪೂಜಿಸಲು  ಭಕ್ತರ  ಅಭಾವವಿಲ್ಲ, ಇಲ್ಲಿ  ಪ್ರಾರ್ಥಿಸಿ ತಮ್ಮ ಕಷ್ಟ ಗಳನ್ನು ಪರಿಹರಿಸಿ ಕೊಂಡವರ ಸಂಖ್ಯೆ ಬಹಳಷ್ಠಿದೆ. ಡೊಂಬಿವಲಿ ನಗರದಿಂದ  ವಲಸೆ ಹೋದವರು ನವರಾತ್ರಿ ಸುಸಂಧರ್ಬದಲ್ಲಿ ಅಗಮಿಸಿ ದೇವಿಯ ದರ್ಶನವನ್ನು ಪಡೆಯುವವರು ಬಹಳಷ್ಟು ಜನರಿದ್ದಾರೆ.ಈ ದಿವ್ಯ ಸಾನಿಧ್ಯದಲ್ಲಿ ಶ್ರೀ ದುರ್ಗೆಯ ಕೃಪೆ ಕಿಂಚಿತ್ತೂ ಕಡಿಮೆಯಾಗಲಿಲ್ಲ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸ ಮಂಡಳಿ ಯಿಂದಾಗಿ ಕನ್ನಡಿಗರು ಒಗ್ಗಟ್ಟಾಗಿದ್ದಾರೆ ಎಂದರೂ ತಪ್ಪಾಗಲಾರದು. ಶ್ರೀ ದುರ್ಗೆಯ ಆಶೀರ್ವಾದದಿಂದ ಎಲ್ಲರಿಗೂ ಒಳಿತನ್ನು ಬಯಸಿ ಒಳಿತನ್ನು ಮಾಡೋಣಾ  ನವರಾತ್ರೋತ್ಸವ ಮಂಡಳಿಯ ದುರ್ಗೆಯ ಕೃಪೆ ಮಹಾನಗರದಾಂತ್ಯ ತುಳು- ಕನ್ನಡಿಗರಿಗೆ ಲಭಿಸಲಿ ಎಂದು ಡೊಂಬಿವಲಿ ನಗರದ ಖ್ಯಾತ ಉದ್ಯಮಿ, ಸಮಾಜ ಸೇವಕ ಇನ್ನ ಕಚ್ಚೂರ ಪರಾರಿ ಪ್ರಭಾಕರ ಆರ್. ಶೆಟ್ಟಿ ನುಡಿದರು.
ಅವರು ಅಕ್ಟೋಬರ್ 9 ರ ಬುಧವಾರ ದಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ನಿಮಿತ್ತ ಜರಗಿದ ಏಳನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ಅಲಂಕರಿಸಿ ಮಾತನಾಡುತ್ತಿದ್ದರು.


ಅತಿಥಿ ದಾನಿ ಪ್ರಕಾಶ್ ಡಿ ಶೆಟ್ಟಿ ಮಾತನಾಡುತ್ತಾ  22 ವರ್ಷದ ಮೊದಲು ನಾವು ಡೊಂಬಿವಲಿ ನಿವಾಸಿಗರು ತದ ನಂತರ ನವಿ ಮುಂಬಯಿಗೆ ವಲಸೆ ಹೋಗಿ ನಮ್ಮ ಉದ್ಯಮವನ್ನು ಪ್ರಾರಂಭಿಸಿದವರು ಪ್ರತಿವರ್ಷ ಡೊಂಬಿವಲಿಗೆ ಅಗಮಿಸಿ ಶ್ರೀ ದುರ್ಗೆಯ ಅನುಗ್ರಹವನ್ನು ಪಡೆಯುತ್ತಾ ಇದ್ದೇವೆ. ಇತ್ತೀಚಿನ ದಿನಗಳಲ್ಲಿ ಡೊಂಬಿವಲಿ ಸಾಂಸ್ಕೃತಿಕ ನಗರವಾಗಿ ಬೆಳೆಯುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ ಎಂದರು.
ಧರ್ಮದರ್ಶಿ ಅಶೋಕ್ ಶೆಟ್ಟಿ ಮಾತನಾಡುತ್ತಾ  ಅರವತ್ತು ವರ್ಷದ ಮೊದಲು ಡೊಂಬಿವಲಿಯಲ್ಲಿ  ಕೇವಲ 10-15 ಕುಟುಂಬಗಳು ವಾಸವಾಗಿದ್ದವು ಅ ಸಂದರ್ಭದಲ್ಲಿ ನಮ್ಮವರನ್ನು ಒಗ್ಗೂಡಿಸಿ ಭಜನಾ ಮಂಡಳಿಯನ್ನು ಸ್ಥಾಪಿಸಿ ಪೂಜೆ ಮಾಡಲು ಪ್ರಾರಂಬಿಸಿದ ನಂತರ ನವರಾತ್ರೋತ್ಸವವನ್ನು ಅಚರಿಸಲಾಯಿತು 1971 ರಿಂದ ಮಂಡಳಿಗೆ ಹೊಸ ಮುಖಗಳು ಸೇರ್ಪಡೆ ಗೊಂಡ ನಂತರ ಮಂಡಳಿಗೆ ಬಲ ಬಂತು ನಮ್ಮ ಹಿರಿಯರು ಮಂಡಳಿಯಲ್ಲಿ  ಸಲ್ಲಿಸಿದ ಸೇವೆ, ಹೂವಿನ‌ ಅಲಂಕಾರ ಅನನ್ಯ ಅವರೆಲ್ಲರ ಪರಿಶ್ರಮದ ಫಲವಾಗಿ ಮಂಡಳಿ ಇಷ್ಟು ಎತ್ತರಕ್ಕೆ ಬೆಳೆದಿದೆ ಎನ್ನಲು ಸಂತೋಷವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ  ಅಂಬಿಕಾ ಪ್ರಭಾಕರ್ ಶೆಟ್ಟಿ ಜ್ಯೋತಿ ಶೆಟ್ಟಿ ದಂಪತಿ ಮತ್ತು ಪ್ರಕಾಶ್ ಶೆಟ್ಟಿ  ಪೂರ್ಣಿಮಾ ಶೆಟ್ಟಿ ದಂಪತಿಯನ್ನು ವೇದಿಕೆಯ ಮೇಲಿದ್ದ ಗಣ್ಯರು ಸನ್ಮಾನಿಸಿದರು.
ಶ್ರೇಯಾ ಶ್ರೀನಿವಾಸನ್ ಇವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು
ವೇದಿಕೆಯ ಮೇಲೆ ಧರ್ಮದರ್ಶಿ ಅಶೋಕ್ ಶೆಟ್ಟಿ, ಅಧ್ಯಕ್ಷ ಗೋಪಾಲ ಶೆಟ್ಟಿ, ಅಂಬಿಕಾ ಪ್ರಭಾಕರ್ ಶೆಟ್ಟಿ, ಜ್ಯೋತಿ ಶೆಟ್ಟಿ, ಪ್ರಕಾಶ್ ಡಿ. ಶೆಟ್ಟಿ, ಪೂರ್ಣಿಮಾ ಶೆಟ್ಟಿ, ವಿಲಾಸಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿನ್ಮಯ ಸಾಲ್ಯಾನ್ ಮತ್ತು ಪಾವನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Related posts

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಎಂಟನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವರಿಂದ  ವಿಶ್ವ ಪರ್ಯಾವರಣ ದಿನಾಚರಣೆ.

Mumbai News Desk

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಮಹಾರಾಷ್ಟ್ರ ಘಟಕ, ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥಾ, ( ರಿ.) ಮುಂಬೈ ಇದರ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ.

Mumbai News Desk

ಶ್ರೀ ಕ್ಷೇತ್ರ ಅಸಲ್ಫ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ  ದೇವಸ್ಥಾ ಜೀರ್ಣೋದ್ಧಾರದ ಕರ ಪತ್ರಿಕೆ ಬಿಡುಗಡೆ

Mumbai News Desk