ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಭಟ್ಯಾಡಿ ಸುಲಭ ಗೆಲುವು ಸಾಧಿಸಿದ್ದಾರೆ.
ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 5907 ಮತಗಳಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು 3655 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ರಾಜು ಪೂಜಾರಿ 1,958 ಮತಗಳನ್ನು ಪಡೆದರೆ ಎಸ್ ಡಿ ಪೈ ಅಭ್ಯರ್ಥಿ 195, ದಿನಕರ್ ಉಲ್ಲಾಳ್ 9 ಮತಗಳನ್ನು ಪಡೆದರೆ, 90 ಮತಗಳು ಅಮಾನ್ಯಗೊಂಡಿವೆ.
ಕೋಟ ಶ್ರೀನಿವಾಸ್ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಕ್ಟೋಬರ್ 21ರಂದು ಚುನಾವಣೆ ನಡೆದಿತ್ತು, ಅದರಂತೆ ಇಂದು(ಅ. 24)ಚುನಾವಣೆ ಫಲಿತಾಂಶ ಹೊರ ಬಿದ್ದಿದೆ.
ಕಿಶೋರ್ ಬೊಟ್ಯಾಡಿ ಅವರ ಗೆಲುವಿಗೆ, ಅವರ ಆತ್ಮೀಯರಾಗಿರುವ, ಉದ್ಯಮಿ, ಮುಂಬಯಿ ನ್ಯೂಸ್ ನ ನಿರ್ದೇಶಕ ಕುಮಾರ್ ಎನ್ ಬಂಗೇರ ಅಭಿನಂದನೆ ಸಲ್ಲಿಸಿದ್ದಾರೆ.
.