





ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಅಕ್ಟೋಬರ್ 28 ಮತ್ತು 29 ರಂದು ವಿಶ್ವ ಬಂಟರ ಸಮ್ಮೇಳನ ನಡೆಯಲಿದ್ದು, ಬಂಟ ಸಮುದಾಯದ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶುಭಕೋರಲಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪಲಿಮಾರ್ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶ್ರೀಪಾದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು. ಮತ್ತು ಬಂಟ ಸಮುದಾಯದ ಸ್ವಾಮೀಜಿಗಳನ್ನು ಕಾರ್ಯಕ್ರಮಕ್ಕೆ ಬರುವಂತೆ ಆಮಂತ್ರಿಸಿದ್ದಾರೆ. ಒಕ್ಕೂಟದಿಂದ ದಿನಾಂಕ 28.10.2023 ಮತ್ತು 29.10.2023 ರಂದು ಉಡುಪಿಯಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಲಿದ್ದು, ಸಮಾರಂಭದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಂಟ ಸಮುದಾಯ ಒಂದೇ ಸೂರಿನಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜಕಾರಣಿಗಳು, ಸಿನಿಮಾ ತಾರೆಯರು ಹೀಗೆ ಎಲ್ಲಾ ವರ್ಗದ ಜನರು ಒಂದೆಡೆ ಸೇರುವ ಅಪರೂಪದ ಕಾರ್ಯಕ್ರಮದಲ್ಲಿ ಶ್ರೀ ಗುರುದೇವ ದತ್ತ ಸಂಸ್ಥಾನ ಒಡಿಯೂರಿನ ಗುರು ದೇವಾನಂದ ಸ್ವಾಮೀಜಿ, ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡುವಿನ ವಿದ್ಯಾವಚಾಸ್ಪತಿ ಶ್ರೀ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರ್ ಸಂದೀಪನಿಯ ಶ್ರೀ ಈಶ ವಿಠಲದಾಸ ಸ್ವಾಮೀಜಿ .
ಗುರುಪುರ ಶ್ರೀ ವಜ್ರದೇಹಿ ಮಠದ ಸ್ವಾಮೀಜಿ ಶ್ರೀ ರಾಜಶೇಖಾರನಂದ ಸ್ವಾಮೀಜಿ, ಭಾಗವಹಿಸಲಿದ್ದಾರೆ. ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ಮಂಗಳೂರು. ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿ. ಉಪಾಧ್ಯಕ್ಷರು ಕರ್ನಿರೆ ವಿಶ್ವನಾಥ್ ಶೆಟ್ಟಿ. .ಗೌ. ಕಾರ್ಯದರ್ಶಿ ಜಯಕರಶೆಟ್ಟಿಇಂದ್ರಾಳಿ. ಕೋಶಾಧಿಕಾರಿ ಉಳ್ತುರು ಮೋಹನದಾಸ್ ಶೆಟ್ಟಿ .ಜೊತೆ- ಕಾರ್ಯದರ್ಶಿ ಹಾಗೂ ಸಂಚಾಲಕರು ಸಾಂಸ್ಕೃತಿಕ ಸಮಿತಿಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ. ಸಂಚಾಲಕರು ಕ್ರೀಡಾ ಸಮಿತಿಗಿರೀಶ್ ಶೆಟ್ಟಿ ತೆಳ್ಳರ್ ತಿಳಿಸಿದ್ದಾರೆ.